'ನಿದ್ದೆ ಬರ್ತಿಲ್ವಾ? ಹಾಗಿದ್ರೆ ಹೀಗೆ ಮಾಡಿ'.. ಅನ್ನೋ ವಿಡಿಯೋನ ನೀವು ನಿದ್ದೆಗೆಟ್ಟು ನೋಡ್ತಿದೀರಾ? ಎಚ್ಚರ..!

Published : Jan 07, 2026, 04:07 PM IST

ಯೋಗಿಗಳು, ಎಲ್ಲೋ ಕೆಲವರು ಅಪವಾದ ಎಂಬಂತಹ ಮನುಷ್ಯರು ಮಾತ್ರ ನಿದ್ದೆಗೆಟ್ಟು ಕೂಡ ಕೆಲಸ ಮಾಡಿಕೊಂಡು ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಲ್ಲರು. ಉಳಿದಂತೆ, ನಿದ್ದೆಗೆಟ್ಟರೆ ತಲೆ ಓಡೋದಿಲ್ಲ, ಸಲೀಸಾಗಿ ಕೆಲಸ ಮಾಡಲು ಆಗೋದಿಲ್ಲ. ನಿದ್ದೆ ಬಗ್ಗೆ ಇದೊಂದು ಸ್ಟೋರಿ ನೋಡಿ, ತೊಂದ್ರೆಯಿಂದ ಬಚಾವ್ ಆಗಿ…

PREV
112

ನಿದ್ದೆ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಕೂಡ ಅತೀ ಅಗತ್ಯಗಳಲ್ಲಿ ಒಂದು ಎಂಬುದು ಗೊತ್ತೇ ಇದೆ. ಸದ್ಯಕ್ಕೆ ನಾವು ಮನುಷ್ಯರ ಬಗ್ಗೆ ಮಾತ್ರ ಹೇಳುವುದಾದರೆ, ನಿದ್ದೆ (Sleep) ಅತ್ಯಂತ ಅವಶ್ಯಕ ಸಂಗತಿಗಳಲ್ಲಿ ಒಂದು.

212

'ನಿದ್ದೆಗೆಟ್ಟೆಯಾ ಬುದ್ಧಿಗೆಟ್ಟೆಯಾ' ಎಂಬ ಗಾದೆ ಮಾತು ಇರೋದು ಬಹುತೇಕರಿಗೆ ಗೊತ್ತು. ಸರಿಯಾದ ನಿದ್ದೆ ಇಲ್ಲ ಅಂದ್ರೆ ಬುದ್ಧಿ ಕೂಡ ಸರಿಯಾಗಿ ಓಡಲ್ಲ ಅನ್ನೋದು ಈ ಗಾದೆಯ ಅರ್ಥ. ಅಷ್ಟೇ ಅಲ್ಲ, 100ಕ್ಕೆ 99% ಇದು ನಿಜ ಕೂಡ.

312

ಯೋಗಿಗಳು, ಎಲ್ಲೋ ಕೆಲವರು ಅಪವಾದ ಎಂಬಂತಹ ಮನುಷ್ಯರು ಮಾತ್ರ ನಿದ್ದೆಗೆಟ್ಟು ಕೂಡ ಕೆಲಸ ಮಾಡಿಕೊಂಡು ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಲ್ಲರು. ಉಳಿದಂತೆ, ನಿದ್ದೆಗೆಟ್ಟರೆ ತಲೆ ಓಡೋದಿಲ್ಲ, ಸಲೀಸಾಗಿ ಕೆಲಸ ಮಾಡಲು ಆಗೋದಿಲ್ಲ. ಇದು ಬಹಳಷ್ಟು ಜನರಿಗೆ ಸ್ವತಃ ಅರಿವಿಗೆ ಕೂಡ ಬಂದಿರುತ್ತದೆ.

412

ನಿದ್ದೆ ಎಂಬುದು ದೇವರು ಕೊಟ್ಟ ವರ ಎಂದು ಕೆಲವರು ಹೇಳಿದರೆ ವಿಜ್ಞಾನಿಗಳು ನಿದ್ದೆ ಪ್ರಾಣಿಗಳಿಗೆ ಅತ್ಯಗತ್ಯ ಎಂಬ ಸಂಗತಿಯನ್ನು ಒತ್ತಿ ಹೇಳುತ್ತಾರೆ. ನಿದ್ದೆಯ ಅವಧಿಯನ್ನು ಸಾಮಾನ್ಯವಾಗಿ ಬೇರೆಬೇರೆ ಅಭಿಪ್ರಾಯಗಳ ಮೂಲಕ ಹಲವರು ಹೇಳುತ್ತಾರೆ. ಅಂದರೆ ಕೆಲವರು 8 ತಾಸು ಎಂದರೆ ಕೆಲವರು 6 ತಾಸುಗಳು ಸಾಕು ಎನ್ನುತ್ತಾರೆ. ಒಟ್ಟಿನಲ್ಲಿ 6 ರಿಂದ 7 ತಾಸು ಬೇಕು ಎಂಬುದು ಬಹುತೇಲ ಎಲ್ಲರ ಅಭಿಪ್ರಾಯ ಎನ್ನಬಹುದು.

512

ಭಾರತದ ಪ್ರಧಾನಿ ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಸೇರಿದಂತೆ ಕೆಲವರು 3-4 ತಾಸು ನಿದ್ದೆ ಮಾಡುತ್ತಾರೆ. ಆದರೂ ಅವರು ಬೇರೆಯವರಿಗಿಂತ ದೈಹಿಕ ಹಾಗೂ ಮಾನಸಿಕವಾಗಿ ಬಹಳಷ್ಟು ಫಿಟ್ ಆಗಿಯೇ ಇದ್ದಾರೆ. ನಮ್ಮದೇ ರಾಜ್ಯದ, ವಿಆರ್‌ಎಲ್‌ ಸಂಸ್ಥೆಯ ಮುಖ್ಯಸ್ಥರಾದ ವಿಜಯ್ ಸಂಕೇಶ್ವರ ಕೂಡ ತುಂಬಾ ಕಡಿಮೆ ಅವಧಿಯ ನಿದ್ದೆ ಮಾಡುತ್ತಾರೆ ಎನ್ನಲಾಗಿದೆ.

612

ಆದರೆ, ಯೋಗಿಗಳನ್ನು ಹೊರತುಪಡಿಸಿದರೆ ಬಹತೇಕರು 6 ರಿಂದ 8 ಗಂಟೆ ನಿದ್ದೆ ಮಾಡುತ್ತಾರೆ. ಕೆಲವರ ಪ್ರಕಾರ, ನಿದ್ದೆ ಸಂಪೂರ್ಣವಾಗಿ ವ್ಯಕ್ತಿಗತವಾದದ್ದು. ಅದು ಇಷ್ಟೇ ಬೇಕು ಅಷ್ಟೇ ಬೇಕು ಎಂಬುವುದಕ್ಕೆ ಬದಲಾಗಿ ಆಯಾ ವ್ಯಕ್ತಿಗಳ ದೈಹಿಕ ಶ್ರಮ, ಕೆಲಸಕಾರ್ಯಗಳು ಹಾಗೂ ಮಾನಸಿಕ ಸ್ಥಿತಗತಿಗಳ ಮೇಲೆ ನಿರ್ಧಾರವಾಗುತ್ತವೆ ಎಂಬ ಅಭಿಪ್ರಾಯವೂ ಇದೆ.

712

ಏನೇ ಆದರೂ, ನಿದ್ದೆ ಎಂಬುದು ಅತ್ಯಂತ ಮುಖ್ಯ, ಅತೀ ಅಗತ್ಯ ಎಂದು ಗೊತ್ತಾದ ಮೇಲೆ ನೀವು ಒಂದು ಸಂಗತಿಯನ್ನು ನಿಮ್ಮ ಜೀವನದಲ್ಲಿ ಅವೈಡ್ ಮಾಡಲೇಬೇಕು. ಈಗಂತೂ ಯೂಟ್ಯೂಬ್ ವಿಡಿಯೋಗಳಲ್ಲಿ, ಅದರಲ್ಲೂ ಬಹಳಷ್ಟು ಎಂಬಂತೆ ಹಲವು ವಿಡಿಯೋಗಳಲ್ಲಿ 'ನಿಮಗೆ ನಿದ್ದೆ ಬರ್ತಿಲ್ವಾ? ಹಾಗೆ ಮಾಡಿ.. ಹೀಗೆ ಮಾಡಿ..' ಎಂದು ದಿನನಿತ್ಯ ಅಸಂಖ್ಯಾತ ವಿಡಿಯೋಗಳು ಹರಿದಾಡುತ್ತಲೇ ಇರುತ್ತವೆ.

812

ಅವುಗಳನ್ನು ಜನರು ಎದ್ನೋ ಬಿದ್ನೋ ಎಂಬಂತೆ ನೋಡುತ್ತಾರೆ. ಆದರೆ, ನೋಡುತ್ತಲೇ ಬಹುತೇಕರು ಅದೊಂದು ಸಂಗತಿ ಮರೆಯುತ್ತಾರೆ. ಆ ವಿಡಿಯೋಗಳಲ್ಲಿ ಹೇಳುವಂತೆ, 'ನಿದ್ದೆಗೆಡಬಾರದು, ಸಾಕಷ್ಟು ನಿದ್ದೆ ಮಾಡಬೇಕು'. ಆದರೆ, ಹಲವರು ಅಂತಹ ವಿಡಿಯೋಗಳನ್ನು ನಿದ್ದೆಗೆಟ್ಟೇ ನೋಡುತ್ತಾರೆ, ಮಾಡುತ್ತಾರೆ. ಆದರೆ, ಹಾಗೆ ಮಾಡುವ ಅಗತ್ಯವೇನು?

912

ಇದ್ದೆ ಬಹುಮುಖ್ಯ ಎಂದಮೇಲೆ ನಿದ್ದೆಗೆಟ್ಟು (Sleeping Problems) ಯಾವುದೇ ವಿಡಿಯೋ ನೋಡಬೇಡಿ. 'ನಿದ್ದೆ ಬರ್ತಿಲ್ವಾ, ಹೀಗೆ ಮಾಡಿ' ಎಂಬ ವಿಡಿಯುಓವನ್ನೂ ಕೂಡ ಹಗಲಿನಲ್ಲಿ, ಫ್ರೀ ಟೈಂನಲ್ಲಿಯೇ ನೋಡಿ ಮುಗಿಸಿ.. ನಿದ್ದೆ ಬರುತ್ತಿಲ್ಲ ಎಂದಾದರೆ, ಆಂತಹ ವಿಡಿಯೋಗಳನ್ನು ಹೇಳಿರುವ ಸಲಹೆಗಳನ್ನು ರಾತ್ರಿ ಪಾಲಿಸಿ. ಆ ಮೂಲಕ ಹಾಯಾಗಿ ನಿದ್ದೆ ಮಾಡಿ, ಆ ವಿಡಿಯೋದ ಉಪಯೋಗ ಪಡೆಯಿರಿ. ಹೊರತೂ ಅವುಗಳನ್ನೇ ನಿದ್ದೆಗೆಟ್ಟು ನೋಡಬೇಡಿ.

1012

ಕಾರಣ, ಅಂತಹ ವಿಡಿಯೋಗಳನ್ನು ಮೊಬೈಲಿನಲ್ಲಿ ನೋಡುವವರೇ ಹೆಚ್ಚು. ಕಾರಣ ಈಗ ಬಹುತೇಕರ ಕೈನಲ್ಲಿ ಮೊಬೈಲ್ ಇರುತ್ತೆ. ಆದರೆ, ಮೊಬೈಲ್‌ನಲ್ಲಿ ನೇರವಾಗಿ ಬ್ಲೂರೇಸ್ ಬೆಳಕು ಕಣ್ಣಿಗೆ ಬೀಳುತ್ತದೆ. ಇದರಿಂದ ನಿದ್ದೆ ಹಾರಿಹೋಗುತ್ತದೆ. ಅದರ ಬದಲು, ರಾತ್ರಿ ಮೊಬೈಲ್ ನೋಡುವುದನ್ನು ಬಿಟ್ಟುಬಿಡಿ.. ಏನೇ ನೋಡಬೇಕು ಎಂದರೂ ಮಲಗುವುದಕ್ಕೆ ಎರಡು ಗಂಟೆ ಮೊದಲೇ ಸ್ಕ್ರೀನ್ ನೋಡಿ ಮುಗಿಸಿಬಿಡಿ..

1112

ಒಮ್ಮೆ ರಾತ್ರಿ ವಿಡಿಯೋ ನೋಡುವುದು ಅನಿವಾರ್ಯ ಎಂದಾದಲ್ಲಿ ಸಾಧ್ಯವಾದಷ್ಟೂ ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್ ಬಳಸಿ. ಲ್ಯಾಪ್‌ಟಾಪ್ ಹಾಗೂ ಡೆಸ್ಕ್‌ಟಾಪ್‌ಗಳಲ್ಲಿ ಮೊಬೈಲಿನಷ್ಟು ಬ್ಲೂವಿಕಿರಣಗಳು ಕಣ್ಣಿಗೆ ದುಷ್ಪರಿಣಾಮ ಬೀರುವುದಿಲ್ಲ. ಅನಿವಾರ್ಯ ಸಂದರ್ಭಗಳಲ್ಲಿ ರಾತ್ರಿ ಮೊಬೈಲ್ ಬದಲು ಅವುಗಳನ್ನು ಬಳಸಿ ನಿಮ್ಮ ನಿದ್ದೆಯ ಸಮಸ್ಯೆಯನ್ನು ಪರಿಹರಿಸಿಕೊಳ್ಳಿ.

1212

ರಾತ್ರಿ ನಿದ್ದೆಗೆ ಮೊದಲು ಕನಿಷ್ಟ ಒಂದು ಗಂಟೆಯ ಅವಧಿಗೆ ಮೊಬೈಲ್ ಅಥವಾ ಪ್ರಖರ ಬೆಳಕು ಕಣ್ಣಿನ ಮೇಲೆ ಬೀಳುವುದನ್ನು ತಪ್ಪಿಸಿ. ಈ ಮೂಲಕ ನಿದ್ದೆ ಬಾರದಿರಲು ಕಾರಣವಾಗುವ ಪ್ರಮುಖ ಸಂಗತಿಯೊಂದರಿಂದ ಹೊರಬನ್ನಿ..! ಚೆನ್ನಾಗಿ ನಿದ್ದೆ ಮಾಡಿ ಜೀವನದಲ್ಲಿ ಉದ್ಧಾರವಾಗಿ..

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories