Walnut Health Benefits: ನೆನೆಸಿದ ವಾಲ್‌ನಟ್‌ ತಿನ್ನೋದ್ರಿಂದ ಸಿಗುತ್ತೆ ಈ 7 ಅದ್ಭುತ ಪ್ರಯೋಜನ

First Published Oct 22, 2022, 7:36 PM IST

ನೀರಿನಲ್ಲಿ ನೆನೆಸಿದ ದ್ರಾಕ್ಷಿ, ಬಾದಾಮ್  ಸೇವನೆ ಮಾಡೋದು ಆರೋಗ್ಯಕ್ಕೆ ತುಂಬಾನೆ ಉತ್ತಮವಾಗಿದೆ ಅನ್ನೋದು ನಮಗೂ ನಿಮಗೂ ತಿಳಿದಿದೆ. ಆದರೆ ನೀರಲ್ಲಿ ನೆನೆಸಿದ ವಾಲ್ನಟ್ ಗಳ ಪ್ರಯೋಜನಗಳ ಬಗ್ಗೆ ತಿಳಿದಿದೆಯೇ? ನೀರಿನಲ್ಲಿ ನೆನೆಸಿದ ವಾಲ್ನಟ್ಗಳನ್ನು ಬೆಳಗ್ಗೆ ಸೇವಿಸುವುದರಿಂದ ನೀವು ಅಗತ್ಯ ಪೋಷಕಾಂಶಗಳನ್ನು ಪಡೆಯುತ್ತಿದ್ದೀರಿ ಮತ್ತು ಆರೋಗ್ಯಕರ ರೀತಿಯಲ್ಲಿ ದಿನವನ್ನು ಪ್ರಾರಂಭಿಸುತ್ತಿದ್ದೀರಿ ಅನ್ನೋದು ನಿಜಾ. 

ವಾಲ್ನಟ್ಗಳು ಆರೋಗ್ಯಕರ ಎಂದು ಎಲ್ಲರಿಗೂ ತಿಳಿದಿದೆ, ಆದರೆ ವಾಲ್ನಟ್ಗಳನ್ನು ರಾತ್ರಿಯಿಡೀ ನೆನೆಸಿ ಮರುದಿನ ಬೆಳಿಗ್ಗೆ ಅದನ್ನು ಸೇವಿಸುವುದು ಇನ್ನೂ ಹೆಚ್ಚು ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ? ವಾಲ್ನಟ್ಗಳು ಮೆದುಳನ್ನು ಚುರುಕುಗೊಳಿಸುವ (sharp brain) ನಟ್ಸ್ ಆಗಿದೆ. ಮೆದುಳಿನ ಆಕಾರದ ಈ ಬೀಜಗಳು ವಿಟಮಿನ್ ಗಳು, ಫೈಬರ್, ಕಬ್ಬಿಣ, ಕಾರ್ಬೋಹೈಡ್ರೇಟ್ ಗಳಿಂದ ಸಮೃದ್ಧವಾಗಿವೆ, ಇದು ಅವುಗಳನ್ನು ಸೂಪರ್– ಹೆಲ್ತಿ ಬೀಜಗಳನ್ನಾಗಿ ಮಾಡುತ್ತದೆ. ಬೆಳಿಗ್ಗೆ ಅವುಗಳನ್ನು ಸೇವಿಸುವುದರಿಂದ ನೀವು ಅಗತ್ಯ ಪೋಷಕಾಂಶಗಳನ್ನು ಪಡೆಯುತ್ತಿದ್ದೀರಿ ಮತ್ತುಆರೋಗ್ಯಕರವಾಗಿ ದಿನವನ್ನು ಆರಂಭಿಸಲು ಸಾಧ್ಯವಾಗುತ್ತೆ.

ಆರೋಗ್ಯಕರ ಚರ್ಮ:  ವಾಲ್ನಟ್ಗಳು ಆರೋಗ್ಯಕರ ಚರ್ಮಕ್ಕೆ (healthy skin) ಸೂಪರ್ಫುಡ್ ಆಗಿದ್ದು, ಇದರಲ್ಲಿ ಆಂಟಿ ಆಕ್ಸಿಡೆಂಟ್ ಮತ್ತು ವಿಟಮಿನ್ ಇ ಯಿಂದ ಸಮೃದ್ಧವಾಗಿವೆ, ಇವೆರಡೂ ಆರೋಗ್ಯಕರ, ಮೃದು ಮತ್ತು ಹೊಳೆಯುವ ಚರ್ಮಕ್ಕೆ ಹೆಸರುವಾಸಿಯಾಗಿವೆ. ಇವುಗಳನ್ನು ನಿಯಮಿತವಾಗಿ ಸೇವನೆ ಮಾಡೋದರಿಂದ ಆರೋಗ್ಯಕರ ಚರ್ಮ ನಿಮ್ಮದಾಗುತ್ತೆ.

ಕೂದಲಿಗೆ ಒಳ್ಳೆಯದು: ದೈನಂದಿನ ಆಹಾರದಲ್ಲಿ ವಾಲ್ನಟ್ಗಳ ಮತ್ತೊಂದು ಪ್ರಯೋಜನವೆಂದರೆ ಅವು ಕೂದಲಿಗೆ ಉತ್ತಮವಾಗಿವೆ. ಅವು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತವೆ ಮತ್ತು ನೆತ್ತಿಯನ್ನು ಪೋಷಿಸುತ್ತವೆ ಮತ್ತು ಕೂದಲಿನ ಕಿರುಚೀಲಗಳನ್ನು ಬಲಪಡಿಸುತ್ತವೆ ಮತ್ತು ಕೂದಲು ತೆಳ್ಳಗಾಗುವುದನ್ನು ಕಡಿಮೆ ಮಾಡುತ್ತವೆ.

ಚಯಾಪಚಯ ಕ್ರಿಯೆ ಸುಧಾರಿಸುತ್ತೆ: ವಾಲ್ನಟ್ಗಳಲ್ಲಿ ಕಬ್ಬಿಣ, ಪೊಟ್ಯಾಸಿಯಮ್, ಸತು ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ, ಇದು ಚಯಾಪಚಯ ಕ್ರಿಯೆ ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತೆ. ವಾಲ್ನಟ್ ನಲ್ಲಿ ನಾರಿನಾಂಶ ಇರೋದರಿಂದ ನಿಮಗೆ ಹೊಟ್ಟೆ ತುಂಬಿದ ಅನುಭವ ಉಂಟಾಗುತ್ತೆ, ಇದರಿಂದ ಪದೇ ಪದೇ ಹಸಿವಾಗೋದಿಲ್ಲ.
 

ಮೂಳೆಗಳನ್ನು ಬಲಪಡಿಸುತ್ತೆ: ವಾಲ್ನಟ್ಗಳಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಹೆಚ್ಚಿನ ಪ್ರಮಾಣದಲ್ಲಿದೆ, ಈ ಕಾರಣದಿಂದಾಗಿ ಅವು ನಮ್ಮ ದೇಹದಲ್ಲಿ ಮೂಳೆಗಳನ್ನು ಬಲಪಡಿಸುತ್ತವೆ (strong bone) ಮತ್ತು ಮೂಳೆ ರಚನೆಗೆ ಸಹಾಯ ಮಾಡುತ್ತವೆ. ಅವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಮೂಳೆಗಳ ಒಟ್ಟಾರೆ ರಚನೆಯನ್ನು ಸಹ ಸುಧಾರಿಸುತ್ತದೆ.

ಒತ್ತಡ ಕಡಿಮೆ ಮಾಡುತ್ತೆ: ಕೆಲವು ಸಂಶೋಧನೆಗಳ ಪ್ರಕಾರ, ನೆನೆಸಿದ ವಾಲ್ನಟ್ಗಳ ನಿಯಮಿತ ಸೇವನೆಯು ಒತ್ತಡ ಕಡಿಮೆ (stress relief) ಮಾಡಲು ಸಹಾಯ ಮಾಡುತ್ತದೆ ಎಂದು ಕಂಡುಬಂದಿದೆ. ನೆನೆಸಿದ ವಾಲ್ನಟ್ ತೊಂದರೆ ಮತ್ತು ಒತ್ತಡದ ಸಮಯದಲ್ಲಿ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತವೆ.

ಆರೋಗ್ಯಕರ ವೃದ್ಧಾಪ್ಯ: ಮತ್ತೊಂದು ಸಂಶೋಧನೆಯ ಪ್ರಕಾರ, ವಾಲ್ನಟ್ಗಳು ಆರೋಗ್ಯಕರ ವೃದ್ಧಾಪ್ಯದಲ್ಲಿ ಸಹಾಯ ಮಾಡುತ್ತವೆ. ಅವುಗಳನ್ನು ಪ್ರತಿದಿನ ಸೇವಿಸುವುದರಿಂದ ವೃದ್ಧಾಒಯದಲ್ಲೂ ನೀವು ಆರೋಗ್ಯದಿಂದ ಇರಲು ಸಾಧ್ಯವಾಗುತ್ತೆ, ಅಷ್ಟೇ ಅಲ್ಲ ದೀರ್ಘಾಯುಷ್ಯ ಪಡೆಯಲು ಸಹ ಸಹಾಯ ಮಾಡುತ್ತೆ.

ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ: ಮೆದುಳಿನ ಆಕಾರದ ವಾಲ್ನಟ್ಗಳು ಮೆದುಳಿನ ನಮ್ಯತೆ, ಜ್ಞಾಪಕ ಶಕ್ತಿಯನ್ನು ಸುಧಾರಿಸುತ್ತೆ. ವಿಷಯಗಳ ಗ್ರಹಿಕೆಯ ಶಕ್ತಿಯನ್ನು ಹೆಚ್ಚಿಸುತ್ತೆ. ಸಣ್ಣ ವಾಲ್ ನಟ್ ಗಳು ಅನೇಕ ಪೋಷಕಾಂಶಗಳಿಂದ ತುಂಬಿರುತ್ತವೆ, ಅದು ಒಟ್ಟಾರೆ ಅರಿವಿನ ಕಾರ್ಯಗಳನ್ನು ಸುಧಾರಿಸುತ್ತದೆ ಮತ್ತು ನಿಮ್ಮ ಏಕಾಗ್ರತೆ ಮಟ್ಟವನ್ನು ಹೆಚ್ಚಿಸುತ್ತದೆ.

click me!