tiredness
ಕೆಲವೊಮ್ಮೆ ಬೆಳಗ್ಗೆ ಎದ್ದ ತಕ್ಷಣ ದೇಹವು ಆಯಾಸವನ್ನು ಅನುಭವಿಸುವಂತಾಗುತ್ತದೆ. ಹಾಸಿಗೆಯಿಂದ ಮೇಲೇಳಲು ಸಾಧ್ಯವೇ ಇಲ್ಲವೇನೋ ಎನ್ನುವಂತಹ ಸಮಸ್ಯೆ ಕಾಡುತ್ತದೆ. ಆದರೆ, ಎದ್ದು ಕಾಲೇಜು ಅಥವಾ ಕಚೇರಿಗೆ ಹೋಗುವುದು ಅಥವಾ ಮನೆ ಕೆಲಸಗಳಿಗೆ ಏಳುವುದು ಅತ್ಯಗತ್ಯ. ಹೀಗಿರುವಾಗ, ಪರಿಸ್ಥಿತಿಯಿಂದ ಓಡಿಹೋಗುವ ಬದಲು ಪರಿಸ್ಥಿತಿಯನ್ನು ಸುಧಾರಿಸುವುದು ಉತ್ತಮ.
ಪ್ರತಿದಿನ ಬೆಳಿಗ್ಗೆ ಆಯಾಸದ ಅನುಭವ ಉಂಟಾದರೆ ಆಗ ಕೆಲವು ವಿಷಯಗಳನ್ನು ಅನುಸರಿಸಬೇಕು. ಈ ಅಭ್ಯಾಸಗಳನ್ನು ನೀವು ರೂಢಿ ಮಾಡಿಕೊಂಡರೆ ಯಾವುದೇ ರೀತಿಯ ಆಯಾಸ, ದಣಿವು ಕಾಡೋದಿಲ್ಲ. ಅಷ್ಟೇ ಅಲ್ಲ ಹೀಗೆ ಮಾಡಿದರೆ ಮಾತ್ರ ನಿಮ್ಮ ಪೂರ್ತಿ ದಿನವು ಉಲ್ಲಾಸದಿಂದ ಕೂಡಿರುತ್ತೆ.
ದೈನಂದಿನ ಆಯಾಸವು ಆರೋಗ್ಯ ಸಮಸ್ಯೆಯ ಲಕ್ಷಣವೂ ಆಗಿರಬಹುದು. ಹೀಗಿರುವಾಗ ನೀವು ಯಾವುದೇ ಆರೋಗ್ಯ ಸಮಸ್ಯೆ ಹೊಂದಿದ್ದೀರಾ ಎಂದು ಮೊದಲು ಪರೀಕ್ಷಿಸುವುದು ಮುಖ್ಯ ಅಥವಾ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬಹುದು. ಇದಲ್ಲದೆ, ಪೂರ್ಣ ನಿದ್ರೆಯನ್ನು ಪಡೆಯುವುದು ಮುಖ್ಯ. ಈ ಆಯಾಸವನ್ನು ತೆಗೆದುಹಾಕಲು ಸಹಾಯಕಾರಿ ಎಂದು ಸಾಬೀತುಪಡಿಸುವ ಕೆಲವು ಸಲಹೆಗಳು ಈ ಕೆಳಗಿನಂತಿವೆ.
ವ್ಯಾಯಾಮ
ಅನೇಕ ಬಾರಿ ವ್ಯಾಯಾಮದ (exercise) ಕೊರತೆಯು ಅತಿಯಾದ ದಣಿವಿಗೆ ಕಾರಣವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಲಘು ವ್ಯಾಯಾಮವು ಈ ಆಯಾಸವನ್ನು ತೆಗೆದುಹಾಕುತ್ತದೆ. ಪ್ರತಿದಿನ ಕುಳಿತುಕೊಳ್ಳುವಾಗ ಮತ್ತು ಒಂದೇ ಭಂಗಿಯಲ್ಲಿದ್ದಾಗ ಈ ಸಮಸ್ಯೆ ಉಂಟಾಗುತ್ತದೆ. ನಿಮಗೆ ಸಮಯ ಸಿಕ್ಕಾಗಲೆಲ್ಲಾ ಪ್ರತಿದಿನ ಬೆಳಿಗ್ಗೆ ಅಥವಾ ಸಂಜೆ ವ್ಯಾಯಾಮ ಮಾಡಿ.
ಯೋಗ
ಕೆಲವೊಮ್ಮೆ ಬಿಗಿಯಾದ ಬೆನ್ನು, ಸೊಂಟ ಅಥವಾ ಕುತ್ತಿಗೆಯಿಂದ ಆಯಾಸವಾಗುತ್ತೆ. ದೇಹವು ಜರ್ಕಿಂಗ್ ಮಾಡುತ್ತಿದೆ ಅಥವಾ ಮಸಾಜ್ (body massage) ಅಗತ್ಯವಿದೆ ಎಂದು ತೋರುತ್ತದೆ. ನೀವು ಎದ್ದ ತಕ್ಷಣ, ದೇಹದ ಬಿಗಿತವನ್ನು ತೆಗೆದು ಹಾಕುವ ಒಂದು ಅಥವಾ ಎರಡು ಯೋಗ ಭಂಗಿಗಳನ್ನು ಪ್ರಯತ್ನಿಸಿ.
ನೀರು ಕುಡಿಯಿರಿ
ಬೆಳಗ್ಗೆ ಎದ್ದ ತಕ್ಷಣ ಒಂದು ಲೋಟ ನೀರು ಕುಡಿಯಿರಿ. ನೀವು ಹಗುರವಾದ ಬಿಸಿ ನೀರನ್ನು (Warm Water) ಕುಡಿಯಬಹುದು. ಇದು ದೇಹದಲ್ಲಿನ ನೀರಿನ ಕೊರತೆಯನ್ನು ನಿವಾರಿಸುತ್ತದೆ ಮತ್ತು ದೇಹದಲ್ಲಿರುವ ವಿಷ ತೆಗೆದುಹಾಕಲು ಸಹ ಸಹಾಯ ಮಾಡುತ್ತದೆ. ಇದು ಜೀರ್ಣಕ್ರಿಯೆಯನ್ನು ಸರಿಯಾಗಿರಿಸುತ್ತದೆ. ನಿಮ್ಮ ಬೆಳಗಿನ ಆಯಾಸ ಮತ್ತು ಸೋಮಾರಿತನವನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಬಿಸಿಲು
ಕಣ್ಣುಗಳನ್ನು ತೆರೆಯಲು ಮಾತ್ರವಲ್ಲದೆ ಮನಸ್ಸನ್ನು ತೆರೆಯಲು ಸೂರ್ಯನ ಬೆಳಕು ತುಂಬಾ ಮುಖ್ಯ. ಬೆಳಗ್ಗೆ ಎದ್ದ ನಂತರ, ತಕ್ಷಣವೇ ಯಾವುದೇ ಕೆಲಸದಲ್ಲಿ ತೊಡಗಿಸಿಕೊಳ್ಳುವ ಬದಲು, ಸ್ವಲ್ಪ ಸಮಯದವರೆಗೆ ಶಾಂತಿಯುತವಾಗಿ ಕುಳಿತು ಬೆಳಿಗ್ಗೆಯ ಸೂರ್ಯನನ್ನು (morning sun) ನೋಡಿ ಮತ್ತು ಸಾಧ್ಯವಾದರೆ, ವಾಯುವಿಹಾರಕ್ಕೆ ಹೋಗಿ. ಇದರಿಂದ ನಿಮ್ಮ ದೇಹ ಶಕ್ತಿಯನ್ನು ಪಡೆಯುತ್ತದೆ ಮತ್ತು ಆಯಾಸವನ್ನು ಸಹ ನಿವಾರಿಸುತ್ತೆ. ಅಲ್ಲದೆ, ನೀವು ಸಕಾರಾತ್ಮಕ ಭಾವನೆಯನ್ನು ಅನುಭವಿಸುವಿರಿ.
ಶಕ್ತಿ-ಸಮೃದ್ಧ ಬ್ರೇಕ್ ಫಾಸ್ಟ್
ನಿಮ್ಮ ಉಪಾಹಾರವು ದಿನ ಪೂರ್ತಿ ಶಕ್ತಿಯನ್ನು ಪಡೆಯಲು ಸಾಧ್ಯವಾಗುವಂತೆ ಇರಬೇಕು. ಆರೋಗ್ಯಕರ ಉಪಾಹಾರ ಸೇವಿಸಿದ ನಂತರ ನೀವು ಮನೆಯಿಂದ ಹೊರಟಾಗ, ದಾರಿಯಲ್ಲಿ ನಿಮಗೆ ಆಯಾಸವಾಗುವುದಿಲ್ಲ, ಅಥವಾ ನೀವು ಮೆಟ್ರೋ ಅಥವಾ ಕ್ಯಾಬ್ ನಲ್ಲಿ ಮಲಗುವಂತಹ ಸ್ಥಿತಿ ಬರೋದೇ ಇಲ್ಲ.