Diabetes diet tips: ಹಾಗಲಕಾಯಿ, ಬೆಂಡೆಕಾಯಿ ಸೇರಿ ಶುಗರ್ ರೋಗಿಗಳಿಗೆ ವರದಾನ ಈ 8 ತರಕಾರಿ

Published : Nov 29, 2026, 03:20 PM IST

Diabetes friendly vegetables: ಶುಗರ್ ಬಂದಾಗ ಏನು ತಿನ್ನಬಾರದು ಎಂದು ತಿಳಿದಿರುತ್ತದೆ. ಆದರೆ ಯಾವ ತರಕಾರಿಯನ್ನು ಎಷ್ಟು ಪ್ರಮಾಣದಲ್ಲಿ ಹೇಗೆ ತಿನ್ನಬೇಕು ಎಂಬುದು ಅನೇಕರಿಗೆ ಗೊತ್ತಿರುವುದಿಲ್ಲ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನೈಸರ್ಗಿಕವಾಗಿ ನಿಯಂತ್ರಿಸುವ 8 ಪ್ರಮುಖ ತರಕಾರಿಗಳು ಇಲ್ಲಿದೆ.

PREV
19
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ 8 ತರಕಾರಿಗಳು

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ 8 ತರಕಾರಿಗಳು
ಭಾರತದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಮಧುಮೇಹ (ಶುಗರ್) ರೋಗಿಗಳಿದ್ದು, ಬಹುತೇಕ ಪ್ರತಿ ಮನೆಯಲ್ಲೂ ಈ ಸಮಸ್ಯೆ ಕಾಣಸಿಗುತ್ತದೆ. ಸಾಮಾನ್ಯವಾಗಿ ಶುಗರ್ ಬಂದಾಗ ಏನು ತಿನ್ನಬಾರದು ಎಂದು ಹೇಳುತ್ತಾರೆಯೇ ಹೊರತು, ಯಾವ ತರಕಾರಿಯನ್ನು ಎಷ್ಟು ಪ್ರಮಾಣದಲ್ಲಿ ತಿನ್ನಬೇಕು ಎಂಬುದು ಹಲವರಿಗೆ ತಿಳಿದಿರುವುದಿಲ್ಲ. ವೈದ್ಯಕೀಯ ತಜ್ಞರ ಪ್ರಕಾರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ 8 ತರಕಾರಿಗಳು ಹಾಗೂ ಅವುಗಳ ಸೇವನಾ ವಿಧಾನ ಇಲ್ಲಿದೆ..

29
ಹಾಗಲಕಾಯಿ

ಇದರಲ್ಲಿರುವ ಚಾರಂಟಿನ್, ವೈಸಿನ್ ಹಾಗೂ ಪಾಲಿಪೆಪ್ಟೈಡ್-ಪಿ ಇನ್ಸುಲಿನ್‌ನಂತೆ ಕೆಲಸ ಮಾಡಿ ಗ್ಲೂಕೋಸ್ ನಿಯಂತ್ರಿಸುತ್ತವೆ. ಕಹಿ ತಗ್ಗಿಸಲು ತುಂಡುಗಳಿಗೆ ಉಪ್ಪು ಸವರಿ 20-30 ನಿಮಿಷ ಬಿಟ್ಟು ತೊಳೆದು, ವಾರಕ್ಕೆ 2-3 ಬಾರಿ ಪಲ್ಯ ಮಾಡಿ ಸೇವಿಸಿ. ಬೆಲ್ಲ ಬೆರೆಸುವುದು ಅಥವಾ ಚಿಪ್ಸ್‌ನಂತೆ ಕರಿಯುವುದು ಬೇಡ.

39
ಬೆಂಡೆಕಾಯಿ

ಇದರಲ್ಲಿರುವ ಕರಗುವ ನಾರಿನಂಶ (ಫೈಬರ್) ಮತ್ತು ಮ್ಯೂಸಿಲೇಜ್ ಕಾರ್ಬೋಹೈಡ್ರೇಟ್ ಜೀರ್ಣಕ್ರಿಯೆ ಹಾಗೂ ಗ್ಲೂಕೋಸ್ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತವೆ. ನೆನೆಸಿದ ನೀರು ಕುಡಿಯುವುದಕ್ಕಿಂತ ವಾರಕ್ಕೆ 3 ಬಾರಿ ಕಡಿಮೆ ಎಣ್ಣೆಯಲ್ಲಿ ಬೇಯಿಸಿದ 1 ಕಪ್ ಬೆಂಡೆಕಾಯಿ ಪಲ್ಯ ತಿನ್ನುವುದು ವೈಜ್ಞಾನಿಕವಾಗಿ ಉತ್ತಮ.

49
ನುಗ್ಗೆಕಾಯಿ

ಕ್ಲೋರೋಜೆನಿಕ್ ಆಮ್ಲ, ಕಬ್ಬಿಣ, ಕ್ಯಾಲ್ಸಿಯಂ ಹಾಗೂ ಪ್ರೋಟೀನ್ ಸಮೃದ್ಧವಾಗಿದ್ದು, ಊಟದ ನಂತರ ಶುಗರ್ ಏರದಂತೆ ತಡೆಯುತ್ತದೆ. ತೆಂಗಿನಕಾಯಿ ಬದಲು ಬೇಳೆಯೊಂದಿಗೆ ಬೇಯಿಸಿ ವಾರಕ್ಕೆ 3 ಬಾರಿ ಅರ್ಧದಿಂದ 1 ಕಪ್ ಸೇವಿಸಬಹುದು.

59
ಬಾಳೆ ಹೂವು

ಅಧಿಕ ಫೈಬರ್ ಇದ್ದು ಜೀರ್ಣಕ್ರಿಯೆ ಸುಧಾರಿಸುತ್ತದೆ ಹಾಗೂ ಊಟದ ನಂತರ ಸಕ್ಕರೆ ಮಟ್ಟ ವೇಗವಾಗಿ ಏರದಂತೆ ತಡೆಯುತ್ತದೆ. ವಾರಕ್ಕೆ 2 ಬಾರಿ 1 ಕಪ್ ಪಲ್ಯ ಅಥವಾ ಬೇಳೆ ಸಾರು ಸೇವಿಸಿ.

69
ಬಾಳೆ ದಿಂಡು

ಕಡಿಮೆ ಕ್ಯಾಲೋರಿ, ಅಧಿಕ ನೀರು ಮತ್ತು ಫೈಬರ್ ಹೊಂದಿದ್ದು, ಹೊಟ್ಟೆ ತುಂಬಿದ ಅನುಭವ ನೀಡಿ ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ. ರಸಕ್ಕಿಂತ ವಾರಕ್ಕೆ 2 ಬಾರಿ 1 ಕಪ್ ಬೇಯಿಸಿದ ದಿಂಡು ತಿನ್ನುವುದು ಉತ್ತಮ.

79
ಬೀನ್ಸ್

ಇದರ ಫೈಬರ್ ಮತ್ತು ಸಸ್ಯಜನ್ಯ ಪ್ರೋಟೀನ್ ಊಟದ ಗ್ಲೈಸೆಮಿಕ್ ಪರಿಣಾಮ ತಗ್ಗಿಸುತ್ತವೆ. ವಾರಕ್ಕೆ 3 ಬಾರಿ ಏರ್ ಫ್ರೈಯರ್ ಅಥವಾ ಕಡಿಮೆ ಎಣ್ಣೆಯಲ್ಲಿ ಹುರಿದ 1 ಕಪ್ ಬೀನ್ಸ್ ಸೇವಿಸಿ.

89
ಮೆಂತ್ಯ ಸೊಪ್ಪು

ಇದರಲ್ಲಿರುವ ಗ್ಯಾಲಕ್ಟೋಮನ್ನನ್ ಫೈಬರ್ ಕರುಳಿನಲ್ಲಿ ಗ್ಲೂಕೋಸ್ ಹೀರಿಕೊಳ್ಳುವ ವೇಗ ತಗ್ಗಿಸುತ್ತದೆ. ವಾರಕ್ಕೆ 2 ಬಾರಿ ಪಾಲಕ್ ಸೊಪ್ಪಿನೊಂದಿಗೆ 1 ಕಪ್ ಮೆಂತ್ಯ ಬೇಳೆ ಸಾರು ಸೇವಿಸುವುದು ಉತ್ತಮ.

99
ಬದನೆಕಾಯಿ

ಇದರ ನೇರಳೆ ಸಿಪ್ಪೆಯಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡುತ್ತವೆ. ಇದು ಎಣ್ಣೆ ಹೆಚ್ಚು ಹೀರುವುದರಿಂದ, ವಾರಕ್ಕೆ 2 ಬಾರಿ ಕಡಿಮೆ ಎಣ್ಣೆಯಲ್ಲಿ ತಯಾರಿಸಿದ 1 ಕಪ್ ಬದನೆಕಾಯಿ ಪಲ್ಯ ಸೇವಿಸಿ.

(ಸೂಚನೆ: ಈ ಲೇಖನವು ಸಾಮಾನ್ಯ ಶೈಕ್ಷಣಿಕ ಮಾಹಿತಿಗಾಗಿ ಮಾತ್ರವಾಗಿದ್ದು, ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಯಾವುದೇ ಆಹಾರ ಬದಲಾವಣೆಗೆ ಮುನ್ನ ನಿಮ್ಮ ವೈದ್ಯರನ್ನು ಸಂಪರ್ಕಿಸಿ.)

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories