Raw Onion Benefits: ಹಸಿ ಈರುಳ್ಳಿ ಪೋಷಕಾಂಶಗಳು ಮತ್ತು ಆ್ಯಂಟಿಆಕ್ಸಿಡೆಂಟ್ಗಳ ಉತ್ತಮ ಮೂಲವಾಗಿದೆ. ಇದನ್ನು ಪ್ರತಿದಿನ ಸೇವಿಸುವುದರಿಂದ ನಿಮ್ಮ ಆಹಾರದಲ್ಲಿ ನಾರಿನಂಶ ಮತ್ತು ಸಸ್ಯಜನ್ಯ ಸಂಯುಕ್ತಗಳು ಸೇರ್ಪಡೆಯಾಗುತ್ತವೆ. ಇದರಿಂದ ನಿಮಗೆ ಸಿಗುತ್ತೆ ಸಾಲು ಸಾಲು ಪ್ರಯೋಜನ.
ನಾವು ಪ್ರತಿದಿನ ಈರುಳ್ಳಿಯನ್ನು ಅಡುಗೆಯಲ್ಲಿ ಬಳಸುತ್ತೇವೆ. ಕೆಲವೊಮ್ಮೆ ಸಲಾಡ್ ರೂಪದಲ್ಲಿ, ಇನ್ನು ಕೆಲವೊಮ್ಮೆ ಬೇಳೆ ಸಾರು, ಪಲ್ಯ, ಚಟ್ನಿ ಸೇರಿದಂತೆ ವಿವಿಧ ಆಹಾರ ಪದಾರ್ಥಗಳ ರುಚಿ ಹೆಚ್ಚಿಸಲು ಈರುಳ್ಳಿಯನ್ನು ಬಳಸಲಾಗುತ್ತದೆ. ಆದರೆ ಪ್ರತಿದಿನ ಹಸಿ ಈರುಳ್ಳಿ ತಿನ್ನುವುದರಿಂದ ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮ ಉಂಟಾಗಬಹುದು ಎಂಬುದು ನಿಮಗೆ ಗೊತ್ತೇ?
27
ಹಸಿ ಈರುಳ್ಳಿ ಸೇವಿಸುವುದರಿಂದ ಯಾರಿಗೆ ಪ್ರಯೋಜನ?
ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ನ ಸಂಶೋಧನೆಯ ಪ್ರಕಾರ, ಈರುಳ್ಳಿ ಕೇವಲ ಆಹಾರದ ರುಚಿ ಹೆಚ್ಚಿಸುವ ತರಕಾರಿಯಲ್ಲ. ಇದರಲ್ಲಿ ದೇಹಕ್ಕೆ ಪ್ರಯೋಜನಕಾರಿಯಾಗಬಲ್ಲ ಅನೇಕ ಪೋಷಕಾಂಶಗಳು ಮತ್ತು ಸಸ್ಯಜನ್ಯ ಸಂಯುಕ್ತಗಳು ಕಂಡುಬರುತ್ತವೆ. ಇದರಲ್ಲಿ ವಿಟಮಿನ್ ಸಿ, ನಾರಿನಂಶ, ಫ್ಲೇವನಾಯ್ಡ್ಗಳು ಮತ್ತು ಕ್ವೆರ್ಸೆಟಿನ್ನಂತಹ ಆ್ಯಂಟಿಆಕ್ಸಿಡೆಂಟ್ಗಳು ಇರುತ್ತವೆ. ಹಾಗಾದರೆ ಪ್ರತಿದಿನ ಒಂದು ಹಸಿ ಈರುಳ್ಳಿ ತಿನ್ನುವುದರಿಂದ ದೇಹದಲ್ಲಿ ಯಾವೆಲ್ಲಾ ಬದಲಾವಣೆಗಳು ಉಂಟಾಗಬಹುದು? ಇದರಿಂದ ಯಾರಿಗೆ ಹೆಚ್ಚು ಪ್ರಯೋಜನವಾಗಬಹುದು? ತಿಳಿಯೋಣ.
37
ಹೃದಯದ ಆರೋಗ್ಯಕ್ಕೆ ಪ್ರಯೋಜ
ಪ್ರತಿದಿನ ಹಸಿ ಈರುಳ್ಳಿ ತಿನ್ನುವುದರಿಂದ ಸಿಗಬಹುದಾದ ಒಂದು ಪ್ರಮುಖ ಪ್ರಯೋಜನವೆಂದರೆ ಹೃದಯದ ಆರೋಗ್ಯಕ್ಕೆ ದೊರೆಯುವ ಬೆಂಬಲ. ಈರುಳ್ಳಿಯಲ್ಲಿ ಕ್ವೆರ್ಸೆಟಿನ್ ಎಂಬ ಫ್ಲೇವನಾಯ್ಡ್ ಅಂಶವಿದೆ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಗುಣಗಳಿವೆ. ಇದು ದೇಹದಲ್ಲಿನ ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಕೆಲವು ಸಂಶೋಧನೆಗಳಲ್ಲಿ ಕ್ವೆರ್ಸೆಟಿನ್ ಮತ್ತು ಈರುಳ್ಳಿ ಸಾರವನ್ನು ಸೇವಿಸುವುದರಿಂದ ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್ ಮಟ್ಟದಲ್ಲಿ ಸುಧಾರಣೆ ಕಂಡುಬರಬಹುದು ಎಂದು ತಿಳಿಸಲಾಗಿದೆ.
ಹಸಿ ಈರುಳ್ಳಿಯಲ್ಲಿ ನಾರಿನಂಶ ಮತ್ತು ಫ್ರಕ್ಟಾನ್ ಎಂಬ ಪ್ರೀಬಯೋಟಿಕ್ ಕಾರ್ಬೋಹೈಡ್ರೇಟ್ ಅಂಶವಿದೆ. ಇವು ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳಿಗೆ ಆಹಾರವಾಗಿ ಕಾರ್ಯನಿರ್ವಹಿಸಬಹುದು. ಇದರಿಂದ ಕರುಳಿನ ಆರೋಗ್ಯಕ್ಕೆ ಬೆಂಬಲ ದೊರೆಯುತ್ತದೆ. ಜೊತೆಗೆ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಹಾಯವಾಗಬಹುದು.
57
ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಸಹಾಯಕ
ನೀವು ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುವ ಸಮಸ್ಯೆಯಿಂದ ಬಳಲುತ್ತಿದ್ದರೆ, ಈರುಳ್ಳಿಯನ್ನು ನಿಮ್ಮ ಆಹಾರದ ಭಾಗವಾಗಿ ಸೇರಿಸಿಕೊಳ್ಳಬಹುದು. ಈರುಳ್ಳಿಯಲ್ಲಿರುವ ಸಲ್ಫರ್ ಸಂಯುಕ್ತಗಳು ಮತ್ತು ಕ್ವೆರ್ಸೆಟಿನ್ನಂತಹ ಅಂಶಗಳು ದೇಹದಲ್ಲಿನ ಗ್ಲೂಕೋಸ್ ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಮಧುಮೇಹ ಇರುವವರು ಸಮತೋಲಿತ ಆಹಾರದ ಭಾಗವಾಗಿ ಈರುಳ್ಳಿಯನ್ನು ಸೇವಿಸಬಹುದು. ಇದರ ಜೊತೆಗೆ ಔಷಧಿ ಕೂಡ ಇರಲಿ.
67
ದೇಹಕ್ಕೆ ಆ್ಯಂಟಿಆಕ್ಸಿಡೆಂಟ್ಗಳು ದೊರೆಯುತ್ತವೆ
ಹಸಿ ಈರುಳ್ಳಿಯಲ್ಲಿ ಕ್ವೆರ್ಸೆಟಿನ್ ಮತ್ತು ಇತರ ಫ್ಲೇವನಾಯ್ಡ್ಗಳು ಕಂಡುಬರುತ್ತವೆ. ಇವು ಆ್ಯಂಟಿಆಕ್ಸಿಡೆಂಟ್ಗಳಾಗಿ ಕಾರ್ಯನಿರ್ವಹಿಸಿ, ಫ್ರೀ ರಾಡಿಕಲ್ಗಳಿಂದ ದೇಹಕ್ಕೆ ಉಂಟಾಗುವ ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತವೆ. ಫ್ರೀ ರಾಡಿಕಲ್ಗಳು ದೇಹದ ಜೀವಕೋಶಗಳಿಗೆ ಹಾನಿ ಉಂಟುಮಾಡಬಹುದು ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಹೆಚ್ಚಿಸಬಹುದು. ಇಂತಹ ಸಂದರ್ಭದಲ್ಲಿ ಆ್ಯಂಟಿಆಕ್ಸಿಡೆಂಟ್ಗಳು ಸಮೃದ್ಧವಾಗಿರುವ ಆಹಾರ ಪದಾರ್ಥಗಳನ್ನು ಸೇವಿಸುವುದು ಉತ್ತಮ.
77
ತೂಕ ನಿಯಂತ್ರಣಕ್ಕೆ ಸಹಾಯಕ
ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ನಿಮ್ಮ ಸಲಾಡ್ನಲ್ಲಿ ಹಸಿ ಈರುಳ್ಳಿಯನ್ನು ಸೇರಿಸಿಕೊಳ್ಳಬಹುದು. ಈರುಳ್ಳಿಯಲ್ಲಿ ಕ್ಯಾಲೊರಿ ಪ್ರಮಾಣ ಕಡಿಮೆ ಇದ್ದು, ಸ್ವಲ್ಪ ಪ್ರಮಾಣದ ನಾರಿನಂಶವೂ ಇರುತ್ತದೆ. ಇದನ್ನು ಸೇವಿಸುವುದರಿಂದ ಆಹಾರದ ರುಚಿ ಮತ್ತು ಪೌಷ್ಟಿಕಾಂಶ ಹೆಚ್ಚುತ್ತದೆ. ಅಲ್ಲದೆ, ಹೆಚ್ಚಿನ ಕ್ಯಾಲೊರಿ ಹೊಂದಿರುವ ಸಾಸ್ಗಳು ಅಥವಾ ಇತರ ಆಹಾರ ಪದಾರ್ಥಗಳ ಬದಲಿಗೆ ಸಲಾಡ್ನಲ್ಲಿ ಈರುಳ್ಳಿಯನ್ನು ಸೇರಿಸಿಕೊಂಡರೆ, ಅದು ಆರೋಗ್ಯಕರ ಆಹಾರ ಪದ್ಧತಿಯ ಭಾಗವಾಗಬಹುದು.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.