Kidney warning signs: ಅನೇಕ ಜನರು ಮೂತ್ರಪಿಂಡದ ಕಾಯಿಲೆಯ ಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆ. ಆದರೆ ಇದು ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸುತ್ತದೆ. ಅಂದಹಾಗೆ ಮೂತ್ರಪಿಂಡದಲ್ಲಿ ಯಾವುದೇ ಸಮಸ್ಯೆಯಾದ್ರೂ ದೇಹದ ಈ ಭಾಗಗಳಲ್ಲಿ ನೋವನ್ನು ಉಂಟುಮಾಡಬಹುದು.
ಕಿಡ್ನಿ ಅಂದರೆ ಮೂತ್ರಪಿಂಡಗಳು ದೇಹದಲ್ಲಿ ಫಿಲ್ಟರ್‌ಗಳಂತೆ ಕಾರ್ಯನಿರ್ವಹಿಸುತ್ತವೆ. ಮೂತ್ರಪಿಂಡದಲ್ಲಿ ಯಾವುದೇ ಸಮಸ್ಯೆಯಾದ್ರೂ ಇಡೀ ದೇಹದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ. ಅನೇಕ ಜನರು ಮೂತ್ರಪಿಂಡದ ಕಾಯಿಲೆಯ ಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆ. ಆದರೆ ಇದು ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸುತ್ತದೆ. ಅಂದಹಾಗೆ ಮೂತ್ರಪಿಂಡದಲ್ಲಿ ಯಾವುದೇ ಸಮಸ್ಯೆಯಾದ್ರೂ ದೇಹದ ಈ ಭಾಗಗಳಲ್ಲಿ ನೋವನ್ನು ಉಂಟುಮಾಡಬಹುದು. ಹಾಗಾದರೆ ಯಾವ ಭಾಗದಲ್ಲಿ ನೋವಿರಲಿದೆ ಎಂಬುದನ್ನ ನೋಡೋಣ...
26
ಆರೋಗ್ಯ ತಜ್ಞರು ಹೇಳುವುದೇನು?
ಕಿಡ್ನಿ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದ್ದು, ಈ ಮೊದಲೇ ಹೇಳಿದ ಹಾಗೆ ದೇಹದಲ್ಲಿ ಫಿಲ್ಟರ್ ಆಗಿ ಕಾರ್ಯನಿರ್ವಹಿಸುತ್ತದೆ. ಮೂತ್ರಪಿಂಡದಲ್ಲಿ ಯಾವುದೇ ಸಮಸ್ಯೆಯಾದ್ರೂ ಅದು ಇಡೀ ದೇಹದ ಮೇಲೆ ಪರಿಣಾಮ ಬೀರುತ್ತದೆ. ಮೂತ್ರಪಿಂಡಗಳಿಗೆ ಹಾನಿಯು ದೇಹದ ಕೆಲವು ಭಾಗಗಳಲ್ಲಿ ನೋವನ್ನು ಉಂಟುಮಾಡಬಹುದು. ಹಾಗಾಗಿ ಆ ನೋವನ್ನು ನಿರ್ಲಕ್ಷಿಸಬೇಡಿ. ಏಕೆಂದರೆ ಇದು ಕಿಡ್ನಿ ಡ್ಯಾಮೇಜ್ ಅಥವಾ ಕಿಡ್ನಿ ಫೇಲ್ಯೂರ್ ಆಗಿರುವ ಗಂಭೀರ ಚಿಹ್ನೆಯಾಗಿರಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
36
ಬೆನ್ನು ನೋವು
ಇದು ದೇಹದಲ್ಲಿ ಹಲವು ಲಕ್ಷಣಗಳನ್ನು ಉಂಟುಮಾಡಬಹುದು. ಕೈ ಕಾಲುಗಳಲ್ಲಿ ಹಠಾತ್ ಊತ, ದೇಹದ ಇತರ ಭಾಗಗಳಲ್ಲಿ ನೋವು ಕಿಡ್ನಿ ಡ್ಯಾಮೇಜ್ ಸಂಕೇತವಾಗಿರಬಹುದು. ಕಿಡ್ನಿ ಡ್ಯಾಮೇಜ್ ತೀವ್ರವಾದ ಬೆನ್ನು ನೋವನ್ನು ಸಹ ಉಂಟುಮಾಡಬಹುದು. ಕುಳಿತುಕೊಳ್ಳಲು ಅಥವಾ ನಿಲ್ಲಲು ಕಷ್ಟವಾಗಿದ್ದರೆ ಅದನ್ನು ನಿರ್ಲಕ್ಷಿಸಬೇಡಿ. ನೋವು ಹಲವಾರು ದಿನಗಳವರೆಗೆ ಮುಂದುವರಿದರೆ ನೀವು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಬೇಕು.
ಮೂತ್ರಪಿಂಡದ ಸಮಸ್ಯೆಗಳು ಪಕ್ಕೆಲುಬು ನೋವನ್ನು ಸಹ ಉಂಟುಮಾಡಬಹುದು. ಮೂತ್ರಪಿಂಡಗಳು ದೇಹದ ಹಿಂಭಾಗದಲ್ಲಿವೆ. ಆದ್ದರಿಂದ ಪಕ್ಕೆಲುಬು ನೋವನ್ನು ನಿರ್ಲಕ್ಷಿಸಬೇಡಿ. ನೀವು ಹಲವಾರು ದಿನಗಳಿಂದ ಪಕ್ಕೆಲುಬು ನೋವನ್ನು ಅನುಭವಿಸುತ್ತಿದ್ದರೆ ಅದನ್ನು ನಿರ್ಲಕ್ಷಿಸಬೇಡಿ. ಸಮಯೋಚಿತ ಚಿಕಿತ್ಸೆಯು ಗಂಭೀರ ಸಮಸ್ಯೆಗಳನ್ನು ತಡೆಯಬಹುದು.
56
ಎದೆ ನೋವು ಅಥವಾ ಭಾರವಾದ ಭಾವನೆ
ಮೂತ್ರಪಿಂಡಗಳು ಹಾನಿಗೊಳಗಾದಾಗ ನಿಮಗೆ ಎದೆ ನೋವು ಅಥವಾ ಎದೆಯಲ್ಲಿ ಭಾರವಾದ ಭಾವನೆ ಉಂಟಾಗಬಹುದು. ವೈದ್ಯಕೀಯವಾಗಿ ಪೆರಿಕಾರ್ಡಿಯಂ ಎಂದು ಕರೆಯಲ್ಪಡುವ ಹೃದಯದ ಒಳಪದರವು ತೀವ್ರವಾಗಿ ಉರಿಯುತ್ತದೆ. ಇದು ಎದೆ ನೋವನ್ನು ಉಂಟುಮಾಡುತ್ತದೆ. ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ.
66
ನಿಖರವಾಗಿ ನಿರ್ಣಯಿಸಲು ಸಾಧ್ಯವಿಲ್ಲ
ದೇಹದ ಈ ಭಾಗಗಳಲ್ಲಿನ ನೋವನ್ನು ಮೂತ್ರಪಿಂಡದ ಸಮಸ್ಯೆ ಎಂದು ನಿಖರವಾಗಿ ನಿರ್ಣಯಿಸಲು ಸಾಧ್ಯವಿಲ್ಲ. ಆದರೆ ಮೂತ್ರದಲ್ಲಿನ ಬದಲಾವಣೆಗಳು ಮತ್ತು ಸಮಸ್ಯೆಗಳ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಮುಂಚಿತವಾಗಿ ವೈದ್ಯಕೀಯ ವೃತ್ತಿಪರರನ್ನು ಸಂಪರ್ಕಿಸುವುದು ಸೂಕ್ತ.