Health Tips: ಮಂಡಿ ನೋವು, ಹಲ್ಲಿನ ಸಮಸ್ಯೆ, ಕಫ ದೂರವಿಡಲು ಈ 5 ಟಿಪ್ಸ್ ಫಾಲೋ ಮಾಡಿ

Published : Sep 17, 2026, 08:15 PM IST

Health Tips: ನೀರು ಕುಡಿಯುವ ವಿಧಾನದಿಂದ ಹಿಡಿದು ಬೆಳಗ್ಗಿನ ಸ್ನಾನದವರೆಗೆ ದಿನನಿತ್ಯ ಮಾಡುವ ಸಣ್ಣ ಸಣ್ಣ ಕೆಲಸಗಳೇ ನಮ್ಮ ಆರೋಗ್ಯವನ್ನು ಕಾಪಾಡುತ್ತವೆ. ಮಂಡಿ ನೋವು ಬರದಂತೆ ತಡೆಯಲು, ಹಲ್ಲುಗಳನ್ನು ಗಟ್ಟಿಯಾಗಿಡಲು ಮತ್ತು ಕಫ, ಕೆಮ್ಮಿನಿಂದ ದೂರವಿರಲು ಎಲ್ಲರೂ ತಿಳಿದುಕೊಳ್ಳಲೇಬೇಕಾದ ಸಂಗತಿಗಳಿವು…

PREV
16
ಆರೋಗ್ಯ ತಜ್ಞರು ಶಿಫಾರಸು ಮಾಡುವ 5 ಪ್ರಮುಖ ನಿಯಮ

ಆರೋಗ್ಯ ತಜ್ಞರು ಶಿಫಾರಸು ಮಾಡುವ 5 ಪ್ರಮುಖ ನಿಯಮ
ದಿನನಿತ್ಯದ ಸಣ್ಣಪುಟ್ಟ ಅಭ್ಯಾಸಗಳೇ ನಮ್ಮ ಆಯುಷ್ಯ ಮತ್ತು ಆರೋಗ್ಯವನ್ನು ನಿರ್ಧರಿಸುತ್ತವೆ. ನಾವು ಮಾಡುವ ಸಣ್ಣ ತಪ್ಪುಗಳು ದೊಡ್ಡ ಕಾಯಿಲೆಗಳಿಗೆ ದಾರಿ ಮಾಡಿಕೊಡಬಹುದು. ಆದ್ದರಿಂದ ಆಯುರ್ವೇದ ಮತ್ತು ಆರೋಗ್ಯ ತಜ್ಞರು ಶಿಫಾರಸು ಮಾಡುವ 5 ಪ್ರಮುಖ ನಿಯಮಗಳು ಇಲ್ಲಿವೆ..

26
1. ಕುಳಿತುಕೊಂಡೇ ನೀರು ಕುಡಿಯಿರಿ (ಮಂಡಿ ನೋವು ಬರಲ್ಲ)

1. ಕುಳಿತುಕೊಂಡೇ ನೀರು ಕುಡಿಯಿರಿ (ಮಂಡಿ ನೋವು ಬರಲ್ಲ)
ಯಾವಾಗಲೂ ನೀರನ್ನು ನಿಂತುಕೊಂಡು ಅಥವಾ ಅವಸರದಲ್ಲಿ ಕುಡಿಯಬೇಡಿ. ಬದಲಿಗೆ ಶಾಂತವಾಗಿ ಕುಳಿತುಕೊಂಡು ಗುಟುಕು ಗುಟುಕಾಗಿ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಹೀಗೆ ಮಾಡುವುದರಿಂದ ಕೀಲುಗಳ ಮೇಲೆ ಒತ್ತಡ ಬೀಳುವುದಿಲ್ಲ ಮತ್ತು ಭವಿಷ್ಯದಲ್ಲಿ ಮಂಡಿ ನೋವಿನ (Knee Pain) ಸಮಸ್ಯೆ ಎಂದಿಗೂ ಕಾಡುವುದಿಲ್ಲ.

36
2. ಅತಿಯಾಗಿ ಚಹಾ ಕುಡಿದರೆ ಹಲ್ಲುಗಳು ದುರ್ಬಲ!

2. ಅತಿಯಾಗಿ ಚಹಾ ಕುಡಿದರೆ ಹಲ್ಲುಗಳು ದುರ್ಬಲ!
ದಿನಕ್ಕೆ 3-4 ಬಾರಿಗಿಂತ ಅತಿಯಾಗಿ ಟೀ ಕುಡಿಯುವ ಅಭ್ಯಾಸವಿದ್ದರೆ ಎಚ್ಚರ. ಚಹಾದಲ್ಲಿರುವ ಆಮ್ಲೀಯತೆ ಮತ್ತು ಕೆಫಿನ್ ಅಂಶವು ಹಲ್ಲಿನ ಎನಾಮಲ್ ಅನ್ನು ಹಾಳುಮಾಡುತ್ತದೆ. ಇದರಿಂದ ಹಲ್ಲುಗಳು ಬೇಗನೆ ಸವೆಯುತ್ತವೆ ಮತ್ತು ದುರ್ಬಲಗೊಳ್ಳುತ್ತವೆ.

46
3. ಅತಿಯಾದ ಸಕ್ಕರೆ ಬೆರೆಸಿದ ಹಾಲು ಕಫಕ್ಕೆ ಕಾರಣ

3. ಅತಿಯಾದ ಸಕ್ಕರೆ ಬೆರೆಸಿದ ಹಾಲು ಕಫಕ್ಕೆ ಕಾರಣ
ಹಾಲಿಗೆ ಅತಿಯಾಗಿ ಸಕ್ಕರೆ ಹಾಕಿ ಕುಡಿಯುವುದರಿಂದ ದೇಹದಲ್ಲಿ ಕಫ (Mucus/ಬಲ್ಗಮ್) ಉತ್ಪತ್ತಿಯಾಗುತ್ತದೆ. ಇದು ಗಂಟಲು ಕಟ್ಟುವಿಕೆ, ಶೀತ ಮತ್ತು ಉಸಿರಾಟದ ಸಮಸ್ಯೆಗೆ ಕಾರಣವಾಗುತ್ತದೆ. ಹಾಲಿಗೆ ಸಕ್ಕರೆ ಬದಲು ಬೆಲ್ಲ ಅಥವಾ ಜೇನುತುಪ್ಪ ಬಳಸುವುದು ಉತ್ತಮ.

56
4. ಬಿಸಿ ಹಾಲು ಕುಡಿದ ನಂತರ ತಕ್ಷಣ ನೀರು ಕುಡಿಯಬೇಡಿ

4. ಬಿಸಿ ಹಾಲು ಕುಡಿದ ನಂತರ ತಕ್ಷಣ ನೀರು ಕುಡಿಯಬೇಡಿ
ಬಿಸಿಯಾದ ಹಾಲು ಕುಡಿದ ತಕ್ಷಣವೇ ನೀರು ಕುಡಿಯುವ ತಪ್ಪು ಮಾಡಬೇಡಿ. ಬಿಸಿ ಹಾಲಿನ ಮೇಲೆ ತಣ್ಣೀರು ಕುಡಿದರೆ ಗಂಟಲಿನಲ್ಲಿ ತಾಪಮಾನದ ವ್ಯತ್ಯಾಸವಾಗಿ ತೀವ್ರ ಕೆಮ್ಮು (Cough) ಮತ್ತು ಗಂಟಲು ಕೆರತ ಶುರುವಾಗುತ್ತದೆ.

66
5. ಮುಂಜಾನೆಯ ಸ್ನಾನ ಚರ್ಮದ ತುರಿಕೆಗೆ ರಾಮಬಾಣ

5. ಮುಂಜಾನೆಯ ಸ್ನಾನ ಚರ್ಮದ ತುರಿಕೆಗೆ ರಾಮಬಾಣ
ಬೆಳಗ್ಗೆ ಬೇಗ ಸ್ನಾನ ಮಾಡುವ ಅಭ್ಯಾಸ ಇಟ್ಟುಕೊಂಡರೆ ದೇಹದಲ್ಲಿ ರಕ್ತಸಂಚಾರ ಸುಗಮವಾಗುತ್ತದೆ. ಅಲ್ಲದೆ, ರಾತ್ರಿ ಬೆವರಿನಿಂದ ಚರ್ಮದ ಮೇಲಾದ ಬ್ಯಾಕ್ಟೀರಿಯಾಗಳು ಸ್ವಚ್ಛವಾಗಿ, ದೇಹದಲ್ಲಿ ತುರಿಕೆ (Itching), ಅಲರ್ಜಿ ಮತ್ತು ಕಜ್ಜಿ ಸಮಸ್ಯೆಗಳು ಬರುವುದಿಲ್ಲ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories