ಚಪಾತಿ, ರೋಟಿಗಳನ್ನು ಅಲ್ಯುಮಿನಿಯಂ ಫಾಯಿಲ್‌ನಲ್ಲಿ ಸುತ್ತಿಡುವುದು ಎಷ್ಟು ಸುರಕ್ಷಿತ?

Published : Oct 15, 2026, 03:21 PM IST

ಚಪಾತಿ, ರೋಟಿ ಸೇರಿದಂತೆ ಇತರ ತಿನಿಸುಗಳನ್ನು ಆಲ್ಯುಮಿನಿಯಂ ಫಾಯಿಲ್‌ನಲ್ಲಿ ಸುತ್ತಿಡುವುದರಿಂದ ಬಿಸಿಯಾಗಿ, ತಾಜವಾಗಿರುತ್ತದೆ. ಆದರೆ ಫಾಯಿಲ್‌ನಲ್ಲಿ ಸುತ್ತಿಟ್ಟ ಆಹಾರ ಸುರಕ್ಷಿತವೇ? ಬಳಸುವ ಮುನ್ನ ತಿಳಿದುಕೊಳ್ಳಿ

PREV
15
ಅಲ್ಯುಮಿನಿಯಂ ಫಾಯಿಲ್‌ನಲ್ಲಿ ಸುತ್ತಿಟ್ಟ ಆಹಾರ

ಚಪಾತಿ, ರೋಟಿ ಸೇರಿದಂತೆ ಕೆಲ ತಿನಿಸುಗಳನ್ನು ತಾಜಾ ಆಗಿರುವ ಆಲ್ಯುಮಿನಿಯಂ ಫಾಯಿಲ್‌ನಲ್ಲಿ ಸುತ್ತಿಡುತ್ತಾರೆ. ವಿಶೇಷವಾಗಿ ನಾವು ಕಚೇರಿಗೆ, ಶಾಲಾ, ಕಾಲೇಜಿಗೆ ತೆಗೆದುಕೊಂಡುವ ಹೋಗುವ ಟಿಫಿನ್ ಬಾಕ್ಸ್‌ನಲ್ಲಿ ಈ ರೀತಿ ಸುತ್ತಿಡುತ್ತಾರೆ. ಇದರಿಂದ ಮಧ್ಯಾಹ್ನ ಅಥವಾ ರಾತ್ರಿ ಚಪಾತಿ, ರೋಟಿ ತಾಜಾ ಆಗಿರುತ್ತದೆ. ಬಿಸಿಯಾಗಿರುವುದು ಮಾತ್ರವಲ್ಲ, ಮೃದುವಾಗಿ ಹಾಗೇ ಇರುತ್ತದೆ. ಆದರೆ ಈ ಅಲ್ಯುಮಿನಿಯಂ ಫಾಯಿಲ್‌ನಲ್ಲಿ ಸುತ್ತಿಟ್ಟ ಆಹಾರದ ಸುರಕ್ಷತೆ ಕುರಿತ ಮಾಹಿತಿ ಇಲ್ಲಿದೆ.

25
ಬಿಸಿಬಿಸಿಯಾಗಿ ಸುತ್ತಬೇಡಿ

ರೋಟಿ, ಚಪಾತಿಗಳನ್ನು ಬಿಸಿಬಿಸಿ ಇರುವಾಗಲೇ ಅಲ್ಯುಮಿನಿಯಂ ಫಾಯಿಲ್‌ನಲ್ಲಿ ಸುತ್ತಿಡುವುದು ಉತ್ತಮವಲ್ಲ. ತಿನಿಸುಗಳ ಬಿಸಿ ಆವಿ ಇರುವಾಗಲೇ ಸುತ್ತಿಟ್ಟರೆ ಆವಿಯ ನೀರು ಆಲ್ಯುಮಿನಿಯಂ ಫಾಯಿಲ್‌ ಒಳಗೆ ಶೇಖರಣೆಯಾಗುತ್ತಿದೆ. ಇದರಿಂದ ರೋಟಿ ಅಥವಾ ಚಪಾತಿಗಳ ಮೇಲೆ ಆವಿ ನೀರು ಬಿದ್ದು ಅಂಟು ಅಂಟಾಗಲಿದೆ.

35
ಕೆಲ ಆಹಾರಕ್ಕೆ ಸೂಕ್ತವಲ್ಲ ಫಾಯಿಲ್

ಆಲ್ಯುಮಿನಿಯಂ ಫಾಯಿಲ್ ರೋಟಿ, ಚಪಾತಿಗೆ ಒಕೆ. ಆದರೆ ಉಪ್ಪು, ಹುಳಿ ಇರುವ ಆಹಾರಗಳು, ಪದಾರ್ಥಗಳನ್ನು ಅಲ್ಯುಮಿನಿಯಂ ಫಾಯಿಲ್‌ನಲ್ಲಿ ಸುತ್ತುವುದು ಅಪಾಯಕಾರಿಯಾಗಿದೆ. ಕಾರಣ ಪದಾರ್ಥಗಳಲ್ಲಿನ ಉಪ್ಪು, ಹುಳಿ ಜೊತೆ ಅಲ್ಯುಮಿನಿಯಂ ಫಾಯಿಲ್ ಸಂಪರ್ಕಕ್ಕೆ ಬಂದಾಗ ರಿಯಾಕ್ಟ್ ಮಾಡಲಿದೆ. ಪದಾರ್ಥಗಳ ಅಲ್ಯುಮಿನಿಯಂ ಅಂಶಗಳು ನೈಸರ್ಗಿಕ್ಕಿಂತ ಹೆಚ್ಚಾಗಲಿದೆ. ಇದು ಆರೋಗ್ಯಕ್ಕೆ ಸೂಕ್ತವಲ್ಲ.

45
ಮೈಕ್ರೋವೇವ್‌ನಲ್ಲಿ ಫಾಯಿಲ್ ಇಡಬಹುದೆ?

ಚಪಾತಿ, ರೋಟಿ ಅಥವಾ ಇತರ ಪದಾರ್ಥಗಳನ್ನು ಅಲ್ಯುಮಿನಿಯಂ ಫಾಯಿಲ್‌ನಲ್ಲಿ ಸುತ್ತಿ ಬಿಸಿ ಮಾಡಲು ಮೈಕ್ರೋವೇವ್‌ನಲ್ಲಿ ಇಡಬಹುದು ಅನ್ನೋದು ಹಲವರ ಪ್ರಶ್ನೆ. ಉತ್ತರ ಇಲ್ಲ. ಅಮೆರಿಕದ ಸುರಕ್ಷತಾ ಸಂಸ್ಥೆ ಈ ಕುರಿತು ಮಹತ್ವದ ಸೂಚನೆ ನೀಡಿದೆ. ಮೈಕ್ರೋವೇವ್‌ನಲ್ಲಿ ಫಾಯಿಲ್ ಮೂಲಕ ಸುತ್ತಿದ ಆಹಾರ ಇಡುವುದು ಅಪಾಯಕಾರಿ ಎಂದಿದೆ.

55
ಪ್ರತಿ ದಿನ ಅಲ್ಯೂಮಿನಿಯಂ ಫಾಯಿಲ್ ಬಳಕೆ ಸೂಕ್ತವೇ

ಪ್ರತಿ ದಿನ ಟಿಫಿನ್ ಬಾಕ್ಸ್‌ನಲ್ಲಿಆಹಾರ ಕೊಂಡೊಯ್ಯುವಾಗ ಅಥವಾ ಪ್ರತಿ ದಿನ ಅಲ್ಯುಮಿನಿಯಂ ಫಾಯಿಲ್‌ನಲ್ಲಿ ಸುತ್ತಿಟ್ಟ ಆಹಾರ ಬಳಕೆ ಸೂಕ್ತವಲ್ಲ. ಸಣ್ಣ ಪ್ರಮಾಣದಲ್ಲಿ ಅಲ್ಯುಮಿನಿಯಂ ಆಹಾರದಲ್ಲಿ ಸೇರಿಕೊಂಡು ದೇಹ ಸೇರುತ್ತದೆ. ನೈಸರ್ಗಿಕವಾಗಿ ದೇಹ ಸೇರಿಕೊಳ್ಳುವ ಪ್ರಮಾಣಕ್ಕಿಂತ ಹೆಚ್ಚಾದರೆ ಸಮಸ್ಯೆಯಾಗಲಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories