How to cook rice fast: ಅನ್ನ ಬೇಯಿಸಲು ಸಮಯವಿಲ್ಲವೇ? ಅಕ್ಕಿಯನ್ನು ನೀರಿನಲ್ಲಿ ಹಾಕಿ ಕಾಯುವ ಬದಲು, ಈ ಸರಳ ರೆಸ್ಟೋರೆಂಟ್ ಸೀಕ್ರೆಟ್ ಟ್ರಿಕ್ ಬಳಸಿ ಕೇವಲ 15 ರಿಂದ 20 ನಿಮಿಷದಲ್ಲಿ ಪರ್ಫೆಕ್ಟ್ ಅನ್ನ ತಯಾರಿಸಬಹುದು!
ಇಲ್ಲಿದೆ ಒಂದು ಸೂಪರ್ ಟ್ರಿಕ್ ಅಮ್ಮ ಅಥವಾ ಮನೆಯವರು ಊಟಕ್ಕೆ ಬರುವ ಮುನ್ನ ಅನ್ನ ಮಾಡಲು ಹೇಳಿರುತ್ತಾರೆ, ಆದರೆ ನೀವು ಮರೆತುಬಿಟ್ಟಿರುತ್ತೀರಿ. ಇನ್ನೇನು ಅವರು ಮನೆ ಬಾಗಿಲಿಗೆ ಬಂದೇ ಬಿಟ್ಟರು ಅನ್ನುವಾಗ ಅನ್ನ ಬೇಯಿಸಲು ಇಟ್ಟರೆ ಕನಿಷ್ಠ ಅರ್ಧ ಗಂಟೆಯಾದರೂ ಬೇಕು. ಅಂತಹ ಸಮಯದಲ್ಲಿ ಕೇವಲ 15-20 ನಿಮಿಷಗಳಲ್ಲಿ ಉದುರು ಉದುರಾದ ಬಿಸಿಬಿಸಿ ಅನ್ನ ರೆಡಿ ಮಾಡಲು ಇಲ್ಲಿದೆ ಒಂದು ಸೂಪರ್ ಟ್ರಿಕ್!
25
ಅನ್ನ ಬೇಗ ಬೇಯಲು ಈ ಸರಳ ಟ್ರಿಕ್ ಅನುಸರಿಸಿ
ಅನ್ನ ಬೇಗ ಬೇಯಲು ಈ ಸರಳ ಟ್ರಿಕ್ ಅನುಸರಿಸಿ ಮೊದಲು ನೀರು ಕುದಿಯಲು ಇಡಿ ಒಲೆಯ ಒಂದು ಬದಿಯಲ್ಲಿ ಅನ್ನಕ್ಕೆ ಬೇಕಾಗುವಷ್ಟು ನೀರನ್ನು ಪಾತ್ರೆಯಲ್ಲಿಟ್ಟು ಚೆನ್ನಾಗಿ ಕುದಿಯಲು ಬಿಡಿ.
35
ಅಕ್ಕಿಯನ್ನು ಹುರಿಯಿರಿ (Toast the Rice)
ಅಕ್ಕಿಯನ್ನು ಹುರಿಯಿರಿ (Toast the Rice) ಇನ್ನೊಂದು ಬದಿಯಲ್ಲಿ ಪಾತ್ರೆಗೆ ಅಕ್ಕಿಯನ್ನು ಹಾಕಿ (ಎಣ್ಣೆ ಹಾಕದೆ) ಡ್ರೈ ರೋಸ್ಟ್ ಮಾಡಿ. ಅಕ್ಕಿ ಪಾರದರ್ಶಕತೆ (translucent) ಕಳೆದುಕೊಂಡು ಬೆಳ್ಳಗಾಗುವವರೆಗೆ 2-3 ನಿಮಿಷ ಸಣ್ಣ ಉರಿಯಲ್ಲಿ ಹುರಿಯಿರಿ. ಹೀಗೆ ಹುರಿಯುವುದರಿಂದ ಅಕ್ಕಿಯಲ್ಲಿರುವ ಸ್ಟಾರ್ಚ್ ಹಗುರವಾಗಿ, ಅದು ಅತಿ ವೇಗವಾಗಿ ಬೇಯಲು ನೆರವಾಗುತ್ತದೆ.
ಕುದಿಯುವ ನೀರು ಸೇರಿಸಿ ಅಕ್ಕಿ ಸ್ವಲ್ಪ ಹುರಿದ ತಕ್ಷಣ, ಮೊದಲೇ ಕುದಿಸಿಟ್ಟುಕೊಂಡ ನೀರನ್ನು ಎಚ್ಚರಿಕೆಯಿಂದ ಅಕ್ಕಿಯ ಪಾತ್ರೆಗೆ ಸುರಿಯಿರಿ.
55
ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿಡಿ
ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿಡಿ ತಕ್ಷಣ ಪಾತ್ರೆಗೆ ಮುಚ್ಚಳ ಮುಚ್ಚಿ, ಉರಿಯನ್ನು ಅತ್ಯಂತ ಸಣ್ಣದಾಗಿ (low flame) ಇಡಿ. ಕೇವಲ 10 ರಿಂದ 12 ನಿಮಿಷಗಳಲ್ಲಿ ನೀರನ್ನೆಲ್ಲ ಹೀರಿಕೊಂಡು ಹೂವಿನಂತಹ ಅನ್ನ ಸಿದ್ಧವಾಗುತ್ತದೆ!
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.