ಉಳಿದ ಇಡ್ಲಿ ಹಿಟ್ಟಿನಿಂದ ಗರಿಗರಿಯಾದ ಮತ್ತು ಮೃದುವಾದ ದೋಸೆ ಮಾಡುವ ವಿಭಿನ್ನ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ಬಾಣಲೆಯಲ್ಲಿ ಹಿಟ್ಟು ಹಾಕಿ ಮಧ್ಯದಲ್ಲಿ ಗ್ಲಾಸ್ ಇಟ್ಟು ಬೇಯಿಸುವ ಮೂಲಕ ರುಚಿಯಾದ ಸೆಟ್ ದೋಸೆ ತಯಾರಿಸಬಹುದು. ಇದು ತೆಂಗಿನಕಾಯಿ ಚಟ್ನಿಯೊಂದಿಗೆ ಸವಿಯಲು ಅದ್ಭುತವಾಗಿರುತ್ತದೆ.
ಬಹತೇಕರ ಮನೆಯಲ್ಲಿ ಬೆಳಗ್ಗೆ ಇಡ್ಲಿ ಮಾಡಿದ್ರೆ, ಅಂದು ನಿಮಗೆ ಸಂಜೆಯವರೆಗೂ ಇಡ್ಲಿ ಸಿಗುತ್ತಿರುತ್ತವೆ. ಇಂದು ನಾವು ಇಡ್ಲಿಹಿಟ್ಟಿನಿಂದ ರುಚಿಯಾದ ಮತ್ತು ಗರಿಗರಿಯಾದ ದೋಸೆ ಹೇಗೆ ಮಾಡೋದು ಎಂದು ಹೇಳುತ್ತಿದ್ದೇವೆ. ಒಮ್ಮೆ ಈ ದೋಸೆ ರುಚಿ ನಿಮ್ಮ ನಾಲಿಗೆಗೆ ತಾಗಿದ್ರೆ ಇದಕ್ಕೆ ನೀವು ಅಡಿಕ್ಟ್ ಆಗುತ್ತೀರಿ.
25
ಸಖತ್ ಟೇಸ್ಟಿಯಾಗಿರುವ ವಿಭಿನ್ನ ಶೈಲಿಯ ದೋಸೆ
ಕಾವಲಿ ಮೇಲೆ ಇಡ್ಲಿ ಬ್ಯಾಟರ್ ಹರಡಿದ್ರೆ ದೋಸೆ ಬರಲ್ಲ. ಇಡ್ಲಿ ಮತ್ತು ದೋಸೆ ಬ್ಯಾಟರ್ ನಡುವೆ ಸಾಕಷ್ಟು ವ್ಯತ್ಯಾಸವಿದೆ. ದೋಸೆಗಾಗಿ ಹಿಟ್ಟನ್ನು ನುಣ್ಣಗೆ ರುಬ್ಬಿಕೊಳ್ಳಬೇಕು. ಅದೇ ಇಡ್ಲಿ ಆದ್ರೆ ಹಿಟ್ಟು ತರಿ ತರಿಯಾದ್ರೆ ಸಾಕು. ಆದ್ರೆ ಇಂದು ಇಡ್ಲಿಹಿಟ್ಟು ಬಳಸಿ ದೋಸೆ ತಯಾರಿಸುವ ಸಖತ್ ಮತ್ತು ವಿಭಿನ್ನ ಶೈಲಿಯನ್ನು ನಿಮಗಾಗಿ ತಂದಿದ್ದೇವೆ.
35
ಇಡ್ಲಿ ಬ್ಯಾಟರ್ನಿಂದ ದೋಸೆ ಮಾಡುವ ವಿಧಾನ
ಮೊದಲಿಗೆ ಬಾಣಲೆಯೊಂದನ್ನು ತೆಗೆದುಕೊಳ್ಳಿ. ಬಾಣಲೆ ಬಿಸಿಯಾಗುತ್ತಿದ್ದಂತೆ ಎರಡರಿಂದ ಮೂರು ಟೇಬಲ್ ಸ್ಪೂನ್ನಷ್ಟು ಎಣ್ಣೆಯನ್ನು ಹಾಕಿಕೊಳ್ಳಿ. ಎಣ್ಣೆ ಬಿಸಿಯಾಗುತ್ತಿದ್ದಂರೆ ಎರಡ್ಮೂರು ದೋಸೆಗಾಗುವಷ್ಟು ಹಿಟ್ಟನ್ನು ಬಾಣಲೆಗೆ ಸುರಿದುಕೊಳ್ಳಬೇಕು.
ನಂತರ ಇದಾದ ಬಳಿಕ ದೋಸೆ ಮಧ್ಯೆ ಚಿಕ್ಕದಾದ ಗ್ಲಾಸ್ನಿಟ್ಟುಕೊಳ್ಳಬೇಕು. ನಂತರ ಮುಚ್ಚಳ ಮುಚ್ಚಿ ಕಡಿಮೆ ಉರಿಯಲ್ಲಿ 4 ರಿಂದ 5 ನಿಮಿಷ ಬೇಯಿಸಿಕೊಳ್ಳಿ. ಈ ದೋಸೆಯನ್ನು ಒಂದು ಬದಿ ಬೇಯಿಸಿಕೊಂಡರೆ ಸಾಕು. ಮುಚ್ಚಳ ಮುಚ್ಚಿರೋ ಕಾರಣ ಮೇಲಿನ ಭಾಗ ಹಬೆಯಲ್ಲಿ ಬೆಂದಿರುತ್ತದೆ. ತಳಭಾಗದಲ್ಲಿ ಕ್ರಿಸ್ಪಿ ಮತ್ತು ಮೇಲ್ಭಾಗದಲ್ಲಿ ಸಾಫ್ಟ್ ಆಗಿರುತ್ತದೆ.
55
ಸೆಟ್ ದೋಸೆ
ಇದು ನಿಮಗೆ ಸೆಟ್ ದೋಸೆಯ ಫೀಲ್ ನೀಡುತ್ತದೆ. ನಾಲ್ಕೈದು ದೋಸೆಗೆ ಬೇಕಾಗುವಷ್ಟು ಹಿಟ್ಟನ್ನು ಹಾಕಿಕೊಳ್ಳಬೇಕು. ಹಾಗಾದ್ರೆ ಮಾತ್ರ ಈ ಇಡ್ಲಿ ಬ್ಯಾಟರ್ನಿಂದ ದೋಸೆ ಸಿಗುತ್ತದೆ. ತೆಂಗಿನಕಾಯಿಯ ಗಟ್ಟಿ ಚಟ್ನಿಗೆ ಈ ದೋಸೆ ಬೆಸ್ಟ್ ಕಾಂಬಿನೇಷನ್ ಆಗುತ್ತದೆ. ಬೇಕಿದ್ರೆ ದೋಸೆ ಮೇಲೆ ಕೆಂಪುಚಟ್ನಿಯನ್ನು ಸವರಿಕೊಳ್ಳಬಹುದು.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.