Published : May 01, 2025, 04:33 PM ISTUpdated : May 02, 2025, 10:34 AM IST
ಮೈಕ್ರೋವೇವ್ (Microwave) ಆಹಾರ ಬಿಸಿ ಮಾಡುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಇದರ ಸಂಪೂರ್ಣ ಪ್ರಯೋಜನವನ್ನು ಪಡೆಯಲು ಹಲವಾರು ಮಾರ್ಗಗಳಿದ್ದು, ಮಾಸ್ಟರ್‌ಶೆಫ್ ಪಂಕಜ್ ಭದೌರಿಯಾ ಕೆಲವು ಕಿಚನ್ ಹ್ಯಾಕ್‌ಗಳನ್ನು ಹಂಚಿಕೊಂಡಿದ್ದಾರೆ.
ಸಾಮಾನ್ಯವಾಗಿ ಭಾರತೀಯರ ಮನೆಗಳಲ್ಲಿ ಮೈಕ್ರೊವೇವ್‌ಗಳನ್ನು ಪ್ರತಿದಿನ ಆಹಾರವನ್ನು ಬಿಸಿಮಾಡಲು ಮಾತ್ರ ಬಳಸಲಾಗುತ್ತದೆ. ನೀವು ಕೂಡ ಏನನ್ನಾದರೂ ಬೇಯಿಸಲು ಅಥವಾ ಕೇಕ್ ತಯಾರಿಸಲು, ಮುಂತಾದ ರುಚಿಕರವಾದ ಖಾದ್ಯವನ್ನು ಮಾಡಲು ಮಾತ್ರ ಮೈಕ್ರೊವೇವ್ ಬಳಸುತ್ತಿದ್ದರೆ ನಿಮಗಾಗಿ ಇಲ್ಲಿದೆ ನೋಡಿ ಕೆಲವು ಕಿಚನ್ ಹ್ಯಾಕ್ ಗಳು. ಮಾಸ್ಟರ್‌ಶೆಫ್ ಪಂಕಜ್ ಭದೌರಿಯಾ (masterchefpankajbhadouria) ಹೇಳುವಂತೆ ಮೈಕ್ರೋವೇವ್ ಅನ್ನು ಒಂದಲ್ಲ ಹತ್ತು ರೀತಿಯಲ್ಲಿ ಬಳಸಬಹುದು. ಈಗ ನೀವು ಆಹಾರವನ್ನು ಬಿಸಿಮಾಡಲು ಮಾತ್ರ ಮೈಕ್ರೋವೇವ್ ಅನ್ನು ಅವಲಂಬಿಸಬೇಕಾಗಿಲ್ಲ, ದೈನಂದಿನ ಜೀವನದಲ್ಲಿಯೂ ಮೈಕ್ರೋವೇವ್ ಅನ್ನು ಬಳಸಿಕೊಳ್ಳಬಹುದಾದ ಇತರ ಹಲವು ಮಾರ್ಗಗಳಿವೆ. ನೀವು ಸಹ ಈ ಹ್ಯಾಕ್‌ಗಳನ್ನು ತಿಳಿದಿರಬೇಕು.
212
ಆಲೂಗಡ್ಡೆಯನ್ನು ಒಂದು ಫೋರ್ಕ್ ಸ್ಪೂನ್‌ನಲ್ಲಿ ಚುಚ್ಚಿ. ಅದನ್ನು ಒಂದು ಟ್ರಾನ್ಸಪರೆಂಟ್ ಕವರ್‌ನಲ್ಲಿ ಕವರ್ ಮಾಡಿ, ಮೈಕ್ರೋವೇವ್‌ನಲ್ಲಿ 4 ನಿಮಿಷಗಳ ಕಾಲ ಇಟ್ಟರೆ ಅವು ಬೇಯುತ್ತವೆ. ಆಲೂಗಡ್ಡೆಯನ್ನು ಬೇಯಿಸಲು ಇದಕ್ಕಿಂತ ಅದ್ಭುತ ಮಾರ್ಗ ಮತ್ತೊಂದಿಲ್ಲ.
312
ರಾತ್ರಿಯಲ್ಲಿ ನಾದಿಟ್ಟ ಹಿಟ್ಟು ಬೆಳಗ್ಗೆ ವೇಳೆಗೆ ಗಟ್ಟಿಯಾಗುತ್ತದೆ. ಆದ್ದರಿಂದ ರಿಫ್ರೆಶ್ ಮಾಡಲು ಅದನ್ನು 30 ಸೆಕೆಂಡುಗಳ ಕಾಲ ಮೈಕ್ರೋವೇವ್‌ನಲ್ಲಿ ಇರಿಸಿ.
ನಿಂಬೆ ಅಥವಾ ಕಿತ್ತಳೆಯಂತಹ ಸಿಟ್ರಸ್ ಹಣ್ಣುಗಳಿಂದ ಸಂಪೂರ್ಣ ರಸವನ್ನು ಹೊರತೆಗೆಯಲು ಅವುಗಳನ್ನು ಮೈಕ್ರೋವೇವ್‌ನಲ್ಲಿ 30 ಸೆಕೆಂಡುಗಳ ಕಾಲ ಇಡಬಹುದು. ಆ ನಂತರ ಹಿಂಡಿದರೆ ಬಹಳಷ್ಟು ರಸವನ್ನು ಹೊರತೆಗೆಯಬಹುದು.
512
ಮೊಟ್ಟೆ ಪ್ರಿಯರೇ, ನೀವು ಮೊಟ್ಟೆಯನ್ನು ಸಹ ಒಡೆದು ಮೈಕ್ರೋವೇವ್‌ನಲ್ಲಿ 30 ಸೆಕೆಂಡುಗಳ ಕಾಲ ಇರಿಸಬಹುದು. ಈ ವಿಚಾರ ಕೆಲವೇ ಜನರಿಗೆ ಮಾತ್ರ ತಿಳಿದಿದೆ.
612
ಬೆಳ್ಳುಳ್ಳಿ ಸಿಪ್ಪೆ ತೆಗೆಯುವುದು ಸಹ ಕೆಲವರಿಗೆ ದೊಡ್ಡ ಟಾಸ್ಕ್. ಆದರೆ ಇದನ್ನು ಮೈಕ್ರೋವೇವ್‌ನಲ್ಲಿ 30 ಸೆಕೆಂಡುಗಳ ಕಾಲ ಇರಿಸಿ. ನಂತರ ಹೊರತೆಗೆದರೆ ಸಿಪ್ಪೆ ತೆಗೆಯುವುದು ಸುಲಭವಾಗುತ್ತದೆ.
712
ಒಣಗಿರುವ ಬ್ರೆಡ್ ಮೇಲೆ ನೀರನ್ನು ಸಿಂಪಡಿಸಿ ಮೈಕ್ರೋವೇವ್‌ನಲ್ಲಿ ಇಡುವುದರಿಂದ, ಬ್ರೆಡ್ 15 ಸೆಕೆಂಡುಗಳಲ್ಲಿ ಮೊದಲಿನಷ್ಟೇ ಫ್ರೆಶ್ ಆಗುತ್ತದೆ.
812
ಕೊತ್ತಂಬರಿ ಸೊಪ್ಪು ಅಥವಾ ಮೆಂತ್ಯವನ್ನು ಮೈಕ್ರೋವೇವ್‌ನಲ್ಲಿ 2 ನಿಮಿಷಗಳ ಕಾಲ ಇಡುವುದರಿಂದ ಒಣಗುತ್ತವೆ. ಇದೇ ರೀತಿಯಾಗಿ, ನೀವು ಮನೆಯಲ್ಲಿಯೇ ಕಸೂರಿ ಮೇಥಿಯನ್ನು ತಯಾರಿಸಬಹುದು.
912
ಎಣ್ಣೆಯಲ್ಲಿ ಹುರಿಯದೆ ಚಿಪ್ಸ್ ಮಾಡಲು ಸಹ ಮೈಕ್ರೋವೇವ್ ಬಳಸಬಹುದು. ಹೌದು, ಚಿಪ್ಸ್ ಅನ್ನು ಕೇವಲ 4 ನಿಮಿಷಗಳಲ್ಲಿ ತಯಾರಿಸಬಹುದು. ಉದಾಹರಣೆಗೆ ಚಿಪ್ಸ್ ತಯಾರಿಸಲು ಬೇಕಾದ ಯಾವುದೇ ತರಕಾರಿಯನ್ನು ತೆಗೆದುಕೊಂಡು ತೆಳುವಾಗಿ ಕತ್ತರಿಸಿ, ಅದರ ಮೇಲೆ ನಿಮಗೆ ಬೇಕಾದ ಪುಡಿಯನ್ನು ಉದುರಿಸಿ, ಅದನ್ನು ಎಣ್ಣೆ ಸವರಿಸಿದ ಪ್ಲೇಟ್‌ನಲ್ಲಿ ಇರಿಸಿ. ನಂತರ ಇದನ್ನು ಮೈಕ್ರೋವೇವ್ ಒಳಗಿಟ್ಟರೆ ಮುಗಿಯಿತು. ಬಿಸಿ ಬಿಸಿಯಾದ ಚಿಪ್ಸ್ ರೆಡಿ.
1012
ಗಾಜಿನ ಜಾಡಿಗಳು, ಬೇಬಿ ಬೌಲ್ ಅಥವಾ ಕಿಚನ್ ಡಸ್ಟರ್‌ಗಳನ್ನು ಮೈಕ್ರೋವೇವ್‌ನಲ್ಲಿ 4 ನಿಮಿಷಗಳ ಕಾಲ ಇರಿಸುವ ಮೂಲಕ ನೀವು ಕ್ರಿಮಿಗಳನ್ನು ನಾಶಗೊಳಿಸಬಹುದು.
1112
ಬಹುತೇಕರಿಗೆ ಗೊತ್ತಿರದ ವಿಚಾರವೆಂದರೆ ಒಣ ಹಣ್ಣುಗಳು ಮತ್ತು ನಟ್ಸ್ ಅನ್ನು ಕೂಡ ಒಂದು ನಿಮಿಷದಲ್ಲಿ ಇದರಲ್ಲಿ ಹುರಿಯಬಹುದು.
1212
ಮಗ್ ಕೇಕ್ ಅಥವಾ ಮಗ್ ಆಮ್ಲೆಟ್ ಅನ್ನು ಸಹ ಮೈಕ್ರೋವೇವ್‌ನಲ್ಲಿ ತಯಾರಿಸಬಹುದು. ಹೆಪ್ಪುಗಟ್ಟಿದ ಆಹಾರವನ್ನು ಡಿಫ್ರಾಸ್ಟ್ ಮಾಡಲು ಸಹ ನೀವು ಮೈಕ್ರೋವೇವ್ ಬಳಸಬಹುದು. ತರಕಾರಿಗಳು ಅಥವಾ ಮೀನುಗಳನ್ನು ಮೈಕ್ರೋವೇವ್‌ನಲ್ಲಿ ಆವಿಯಲ್ಲಿ ಬೇಯಿಸಬಹುದು. ಇದರಲ್ಲಿ, ಚಾಕೊಲೇಟ್ ಅಥವಾ ಬೆಣ್ಣೆಯನ್ನು ನಿಮಿಷಗಳಲ್ಲಿ ಕರಗಿಸಬಹುದು. ಚೀಸ್ ಅನ್ನು ಮೃದುಗೊಳಿಸಲು ಮೈಕ್ರೋವೇವ್‌ನಲ್ಲಿ ಇರಿಸಿ. ಪಾಸ್ತಾವನ್ನು ಮೈಕ್ರೋವೇವ್‌ನಲ್ಲಿ ಸುಲಭವಾಗಿ ತಯಾರಿಸಬಹುದು. ಇದರಲ್ಲಿ ಚೀಸ್ ಟೋಸ್ಟ್ ಅನ್ನು ಸುಲಭವಾಗಿ ಮಾಡಬಹುದು. ಸೇಬುಗಳನ್ನು ಕತ್ತರಿಸಿ ಮೈಕ್ರೋವೇವ್‌ನಲ್ಲಿ ಇಡುವುದರಿಂದ ಒಣಗಿದ ಚಿಪ್ಸ್ ತಯಾರಿಸಲಾಗುತ್ತದೆ. ನಿಮಗೆ ಪಾತ್ರೆ ತೊಳೆಯುವ ಭಯವಿದ್ದರೆ, ಪಾತ್ರೆಗಳು ಕೊಳಕಾಗದಂತೆ ಪ್ಯಾಕ್ ಮಾಡಿದ ಆಹಾರಗಳನ್ನು ಮೈಕ್ರೋವೇವ್‌ನಲ್ಲಿ ಬಿಸಿ ಮಾಡಬಹುದು.