ಇಡ್ಲಿ ಕುಕ್ಕರ್ ಇಲ್ವಾ? ಚಿಂತೆ ಬೇಡ, ಹೀಗೂ ಮಾಡಬಹುದು ಮಲ್ಲಿಗೆಯಂಥ ಇಡ್ಲಿ

Published : May 01, 2025, 02:39 PM ISTUpdated : May 01, 2025, 03:10 PM IST

Kitchen Hacks: ಇಡ್ಲಿ ಅಚ್ಚು (ಇಡ್ಲಿ ಕುಕ್ಕರ್) ಇಲ್ಲ ಅಂದ್ರೆ ಏನು? ಸ್ಟೀಲ್ ಬಟ್ಟಲು ಇದ್ರೆ ಸಾಕು! ಮೆತ್ತಗೆ, ಸ್ಪಂಜಿ ತರ ಇಡ್ಲಿ ಮಾಡೋದು ಹೇಗೆ ಅಂತ ತಿಳ್ಕೊಳ್ಳಿ. ಸುಲಭ ಟಿಪ್ಸ್ ಇಲ್ಲಿವೆ.

PREV
16
ಇಡ್ಲಿ ಕುಕ್ಕರ್ ಇಲ್ವಾ? ಚಿಂತೆ ಬೇಡ, ಹೀಗೂ ಮಾಡಬಹುದು ಮಲ್ಲಿಗೆಯಂಥ ಇಡ್ಲಿ
ಅಚ್ಚಿಲ್ಲದೆ ಇಡ್ಲಿ ಮಾಡುವುದು ಹೇಗೆ?

ಇಡ್ಲಿ ಅಚ್ಚು ಇಲ್ದಿದ್ರೂ ಪರವಾಗಿಲ್ಲ. ಸ್ಟೀಲ್ ಬಟ್ಟಲುಗಳಲ್ಲಿ ಮೆತ್ತನೆಯ ಇಡ್ಲಿ ಮಾಡಬಹುದು. ಮನೆಯಲ್ಲಿರುವ ಸಣ್ಣ ಪಾತ್ರೆಗಳಿಂದ ಹೇಗೆ ಇಡ್ಲಿ ಮಾಡಬಹುದು ಎಂದು ನೋಡೋಣ ಬನ್ನಿ.

26
ಇಡ್ಲಿಗೆ ಬೇಕಾಗುವ ಸಾಮಗ್ರಿಗಳು

ಇಡ್ಲಿ ಹಿಟ್ಟು - 2 ಕಪ್, ಉಪ್ಪು - ರುಚಿಗೆ ತಕ್ಕಷ್ಟು, ನೀರು - ಸ್ಟೀಮ್ ಗೆ, ಎಣ್ಣೆ - ಸ್ವಲ್ಪ, ಸ್ಟೀಲ್ ಬಟ್ಟಲುಗಳು  3 ರಿಂದ 4 ಬೇಕಾಗುತ್ತವೆ. (ಟೀ ಕುಡಿಯುವ ಕಪ್ ಬಳಸಬಹುದು)

36
ಪಾತ್ರೆ ಸಿದ್ಧ ಮಾಡಿಕೊಳ್ಳಿ

ಕುಕ್ಕರ್ ಅಥವಾ ದೊಡ್ಡ ಪಾತ್ರೆ ತಗೊಳ್ಳಿ. ಸ್ವಲ್ಪ ನೀರು ಹಾಕಿ, ಸ್ಟಾಂಡ್ ಇಡಿ. ಇಡ್ಲಿ ಬಟ್ಟಲು ನೀರಿಗೆ ತಾಗಬಾರದು. ಆದ್ದರಿಂದ ಸ್ಟೀಲ್ ಸ್ಟ್ಯಾಂಡ್ ಇರಿಸಿಕೊಳ್ಳಿ. (ಮಾರುಕಟ್ಟೆಯಲ್ಲಿ ನಿಮಗೆ ಕಡಿಮೆ ಬೆಲೆಯಲ್ಲಿ ಇಡ್ಲಿ ಸ್ಟ್ಯಾಂಡ್ ಸಿಗುತ್ತದೆ)

46
ಬಟ್ಟಲುಗಳಿಗೆ ಎಣ್ಣೆ ಹಚ್ಚಿ

ಬಟ್ಟಲುಗಳಿಗೆ ಎಣ್ಣೆ ಹಚ್ಚಿ. ಹಿಟ್ಟನ್ನ ¾ ರಷ್ಟು ತುಂಬಿ. ಹಿಟ್ಟು ಉಬ್ಬುತ್ತದೆ. (ನೀವು ಕಪ್ ತುಂಬಾ ಹಿಟ್ಟು ತುಂಬಿದ್ರೆ  ಅದು ಉಬ್ಬಿ ಹೊರಗೆ ಚೆಲ್ಲುತ್ತದೆ)

56
ಸ್ಟೀಮ್ ಮಾಡಿ

ಬಟ್ಟಲುಗಳನ್ನ ಪಾತ್ರೆಗೆ ಇಟ್ಟು ಮುಚ್ಚಳ ಮುಚ್ಚಬೇಕು. ನಂತರ ಕಡಿಮೆ ಉರಿಯಲ್ಲಿ ಸುಮಾರು 10 ರಿಂದ 15  ನಿಮಿಷ ಸ್ಟೀಮ್ (ಬೇಯಿಸಿಕೊಳ್ಳಿ) ಮಾಡಿ. ನಂತರ ಮುಚ್ಚಳ ತೆಗೆದು ಟೂತ್ ಪಿಕ್ ಚುಚ್ಚಿ ಬೆಂದಿದೆಯಾ ಇಲ್ಲವಾ ಎಂಬುದನ್ನು ಚೆಕ್ ಮಾಡಿಕೊಳ್ಳಿ.

66
ಮೆತ್ತನೆಯ ಇಡ್ಲಿಗೆ ಟಿಪ್ಸ್

ಕುಕ್ಕರ್ ಗೆ ಸೀಟಿ ಹಾಕಬೇಡಿ. ಮುಚ್ಚಳ ಚೆನ್ನಾಗಿ ಮುಚ್ಚಿ. ಹಿಟ್ಟನ್ನ ಹೆಚ್ಚು ಕಲಸಬೇಡಿ. ಇದರಿಂದ ನಿಮ್ಮ ಇಡ್ಲಿ ಹತ್ತಿಯಂತೆ ಮೃದುವಾಗುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories