How to store spices: ಹೆಚ್ಚಿನ ಜನರು ತಮ್ಮ ಅಡುಗೆಮನೆಯಲ್ಲಿರುವ ಮಸಾಲೆಗಳು ಬೇಗನೆ ಹಾಳಾಗುತ್ತವೆ. ಇದರಿಂದಾಗಿ ಆಹಾರವು ರುಚಿಯಿರಲ್ಲ ಎಂದು ದೂರುತ್ತಾರೆ. ಏಕೆಂದರೆ ಅವರು ಮಸಾಲೆಗಳನ್ನು ಸರಿಯಾಗಿ ಸಂಗ್ರಹಿಸುವುದಿಲ್ಲ.
ಅಡುಗೆ ರುಚಿಯಾಗಿ ಬರಬೇಕೆಂದ್ರೆ, ಘಮಘಮಿಸಬೇಕೆಂದ್ರೆ ಮಸಾಲೆಯೂ ಚೆನ್ನಾಗಿರಬೇಕು. ಮಸಾಲೆ ಫ್ರೆಶ್ ಆಗಿದ್ರೆ ಸಾಂಬಾರ್ ಅಥವಾ ಗ್ರೇವಿ ಕೂಡ ಟೇಸ್ಟಿಯಾಗಿರುತ್ತದೆ. ಆದರೆ ಮಸಾಲೆ ಪರಿಮಳ ಅಥವಾ ಸುವಾಸನೆ ಕಳೆದುಕೊಂಡರೆ ನೀವು ಅಡುಗೆಮನೆಯಲ್ಲಿ ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದರೂ ಅಡುಗೆ ರುಚಿ ರುಚಿಯಾಗಿ ಬರಲ್ಲ. ಹೆಚ್ಚಿನ ಜನರು ತಮ್ಮ ಅಡುಗೆಮನೆಯಲ್ಲಿರುವ ಮಸಾಲೆಗಳು ಬೇಗನೆ ಹಾಳಾಗುತ್ತವೆ. ಇದರಿಂದಾಗಿ ಆಹಾರವು ರುಚಿಯಿರಲ್ಲ ಎಂದು ದೂರುತ್ತಾರೆ. ಏಕೆಂದರೆ ಅವರು ಮಸಾಲೆಗಳನ್ನು ಸರಿಯಾಗಿ ಸಂಗ್ರಹಿಸುವುದಿಲ್ಲ.
25
ದೀರ್ಘಕಾಲದವರೆಗೆ ತಾಜಾವಾಗಿರಲ್ಲ
ವಾಸ್ತವವಾಗಿ ಮಸಾಲೆ ಸಾಮಗ್ರಿಗಳನ್ನ ಸರಿಯಾಗಿ ಸಂಗ್ರಹಿಸುವುದು ಹೇಗೆ ಎಂದು ಅನೇಕ ಜನರಿಗೆ ತಿಳಿದಿಲ್ಲ. ಆದ್ದರಿಂದ ಅವು ದೀರ್ಘಕಾಲದವರೆಗೆ ತಾಜಾವಾಗಿರಲ್ಲ. ಈ ಲೇಖನದಲ್ಲಿ ನಿಮ್ಮ ಅಡುಗೆಮನೆಯಲ್ಲಿ ಮಸಾಲೆಗಳನ್ನು ಸಂಗ್ರಹಿಸುವಾಗ ನೀವು ತಪ್ಪಿಸಬೇಕಾದ ಕೆಲವು ಸಾಮಾನ್ಯ ತಪ್ಪುಗಳನ್ನು ಶೇರ್ ಮಾಡಿದ್ದೇವೆ.
35
ಎಲ್ಲರೂ ಮಾಡುವ ಸಾಮಾನ್ಯ ತಪ್ಪು
ಮಸಾಲೆಗಳನ್ನು ಸಂಗ್ರಹಿಸುವಾಗ ಇದು ಎಲ್ಲರೂ ಮಾಡುವ ಸಾಮಾನ್ಯ ತಪ್ಪು. ಅದೇನಂದ್ರೆ ಡಬ್ಬಿಯಲ್ಲಿ ಮಸಾಲೆ ಖಾಲಿಯಾಗುತ್ತಿದ್ದಂತೆ ನಾವು ಅದರಲ್ಲಿ ಹೊಸ ಮಸಾಲೆ ತುಂಬಿಸುವುದು. ಇದು ಹೊಸ ಮಸಾಲೆಯೂ ರುಚಿಯನ್ನು ಕಳೆದುಕೊಳ್ಳಲು ಮತ್ತು ವೇಗವಾಗಿ ಹಾಳಾಗಲು ಕಾರಣವಾಗಬಹುದು. ಆದ್ದರಿಂದ ಯಾವಾಗಲೂ ಹಳೆಯ ಮಸಾಲೆಯನ್ನ ಮೊದಲು ಮುಗಿಸಿ, ಡಬ್ಬಿಯನ್ನ ಚೆನ್ನಾಗಿ ತೊಳೆದು ಒಣಗಿಸಿ, ನಂತರ ಹೊಸ ಮಸಾಲೆ ತುಂಬಿಸಿ.
ಡಬ್ಬಿಯಿಂದ ಮಸಾಲೆ ಪುಡಿ ತೆಗೆದುಕೊಳ್ಳುವಾಗ ಒದ್ದೆಯಾದ ಚಮಚವನ್ನು ಬಳಸುವುದರಿಂದ ಬೇಗನೆ ಹಾಳಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಷ್ಟೇ ಅಲ್ಲ, ಸ್ವಲ್ಪ ತೇವಾಂಶ ಕೂಡ ಮಸಾಲೆಗಳನ್ನು ಅಂಟು ಮಾಡುತ್ತದೆ ಮತ್ತು ಬೂಸ್ಟ್ ಬರುವ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಮಸಾಲೆ ಡಬ್ಬಿಗೆ ಪ್ರತ್ಯೇಕ ಚಮಚವನ್ನು ಇಟ್ಟುಕೊಳ್ಳುವುದಾದರೂ ಸಹ ಯಾವಾಗಲೂ ಒಣ ಚಮಚವನ್ನು ಬಳಸಿ.
55
ಸ್ಟೌವ್ ಬಳಿ ಮಸಾಲೆ ಇಡುವುದು
ಹಲವು ಬಾರಿ ಅಡುಗೆ ಕೆಲಸ ಬೇಗವಾಗಲೆಂದು ನಾವು ಮಸಾಲೆ ಡಬ್ಬಿಯನ್ನ ಸ್ಟೌವ್ ಬಳಿ ಇಡುತ್ತೇವೆ. ಇದು ನಿಮ್ಮ ಕೆಲಸವನ್ನು ಸ್ವಲ್ಪ ಸುಲಭಗೊಳಿಸಬಹುದಾದರೂ ಮಸಾಲೆ ಬೇಗನೆ ಹಾಳಾಗುತ್ತದೆ. ಏಕೆಂದರೆ ಅಡುಗೆ ಮಾಡುವಾಗ ಉತ್ಪತ್ತಿಯಾಗುವ ಶಾಖ ಮತ್ತು ಉಗಿ ಮಸಾಲೆಗಳಿಗೆ ತೇವಾಂಶವನ್ನು ಸೇರಿಸುತ್ತದೆ. ಇದು ಮಸಾಲೆ ಒದ್ದೆಯಾಗಿ ಒಟ್ಟಿಗೆ ಅಂಟಿಕೊಳ್ಳುವಂತೆ ಮಾಡುತ್ತದೆ. ಬಣ್ಣವೂ ಮಸುಕಾಗುತ್ತದೆ ಮತ್ತು ಅವುಗಳ ಸುವಾಸನೆ ಮಾಯವಾಗುತ್ತದೆ. ಕೆಲವೊಮ್ಮೆ ಧನಿಯಾ ಅಥವಾ ಅರಿಶಿನದಂತಹ ಪುಡಿಮಾಡಿದ ಮಸಾಲೆಗಳಲ್ಲೂ ಸಹ ಬೂಸ್ಟ್ ಬರುತ್ತದೆ. ಆದ್ದರಿಂದ ಯಾವಾಗಲೂ ತಂಪಾದ, ಒಣ ಸ್ಥಳದಲ್ಲಿ ಮಸಾಲೆಗಳನ್ನು ಸಂಗ್ರಹಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.