Soft chapati tips: ನಿಮಗೂ ಇದೇ ಸಮಸ್ಯೆ ಕಾಡುತ್ತಿದ್ದರೆ ಚಪಾತಿ ದಿನಗಟ್ಟಲೇ ಮೃದುವಾಗಿಡಲು ಸಹಾಯ ಮಾಡುವ ಕೆಲವು ಸುಲಭವಾದ ಮನೆಮದ್ದುಗಳನ್ನ ಇಲ್ಲಿ ಶೇರ್ ಮಾಡಿದ್ದೇವೆ. ಆದ್ದರಿಂದ ಮುಂದಿನ ಬಾರಿ ಚಪಾತಿ ಮಾಡುವಾಗ ಹೀಗೆ ಮಾಡಿ..
ಮೊದಲೆಲ್ಲಾ ಉತ್ತರ ಭಾರತದ ಜನರು ಮಾತ್ರ ಹೆಚ್ಚಾಗಿ ಸೇವಿಸುತ್ತಿದ್ದ ಚಪಾತಿ, ರೋಟಿ, ಪರೋಠವನ್ನು ಇತ್ತೀಚೆಗೆ ದಕ್ಷಿಣ ಭಾರತೀಯರು ಹೆಚ್ಚು ಇಷ್ಟಪಟ್ಟು ಸೇವಿಸುತ್ತಿದ್ದಾರೆ. ಬೆಳಗ್ಗೆ ತಿಂಡಿಯಿಂದ ಹಿಡಿದು ರಾತ್ರಿ ಊಟದ ತನಕ, ಎಲ್ಲಾ ಸೀಸನ್‌ನಲ್ಲೂ ಸೇವಿಸಬಹುದಾದ ಚಪಾತಿ ಚಳಿಗಾಲದಲ್ಲಿ ಮಾತ್ರ ಮಾಡಿದ ತಕ್ಷಣ ಗಟ್ಟಿಯಾಗಿ ಹಪ್ಪಳದಂತಾಗುತ್ತದೆ. ನಿಮಗೂ ಇದೇ ಸಮಸ್ಯೆ ಕಾಡುತ್ತಿದ್ದರೆ ಚಪಾತಿ ದಿನಗಟ್ಟಲೇ ಮೃದುವಾಗಿಡಲು ಸಹಾಯ ಮಾಡುವ ಕೆಲವು ಸುಲಭವಾದ ಮನೆಮದ್ದುಗಳನ್ನ ಇಲ್ಲಿ ಶೇರ್ ಮಾಡಿದ್ದೇವೆ. ಆದ್ದರಿಂದ ಮುಂದಿನ ಬಾರಿ ಚಪಾತಿ ಮಾಡುವಾಗ ಹೀಗೆ ಮಾಡಿ..
25
ಹಿಟ್ಟಿಗೆ ಎಣ್ಣೆ ಅಥವಾ ತುಪ್ಪ ಸೇರಿಸಿ
ನೀವು ಸಹ ನಿಮ್ಮ ಚಪಾತಿಯನ್ನು ಗಂಟೆಗಟ್ಟಲೆ ಮೃದುವಾಗಿಡಲು ಬಯಸಿದರೆ ಹಿಟ್ಟನ್ನು ಬೆರೆಸುವಾಗ ಸ್ವಲ್ಪ ತುಪ್ಪ ಅಥವಾ ಎಣ್ಣೆಯನ್ನು ಬಳಸಬಹುದು.
35
ಸ್ವಲ್ಪ ಸಮಯ ಬಿಡಿ
ಆಗಾಗ್ಗೆ ಸಮಯದ ಅಭಾವದಿಂದಾಗಿ ಅನೇಕ ಜನರು ಹಿಟ್ಟನ್ನು ಬೆರೆಸಿ, ನಾದಿದ ತಕ್ಷಣ ಚಪಾತಿ ಮಾಡಲು ಪ್ರಾರಂಭಿಸುತ್ತಾರೆ. ಇದರಿಂದಾಗಿ ಚಪಾತಿ ಕಲ್ಲಿನಂತೆ ತುಂಬಾ ಬಿಗಿಯಾಗುತ್ತವೆ. ಆದ್ದರಿಂದ ನೀವು ಮೃದುವಾದ, ಹತ್ತಿಯಂತಹ ಚಪಾತಿ ಮಾಡಲು ಬಯಸಿದರೆ ಬೆರೆಸಿದ ನಂತರ ಹಿಟ್ಟನ್ನು ಸ್ವಲ್ಪ ಹೊತ್ತು ಹಾಗೆಯೇ ಬಿಡಿ.
ನಿಮ್ಮ ಚಪಾತಿಯನ್ನು ದೀರ್ಘಕಾಲದವರೆಗೆ ಮೃದುವಾಗಿಡಲು ಹಿಟ್ಟನ್ನು ಬೆರೆಸುವಾಗ ತಣ್ಣನೆಯ ನೀರಿನ ಬದಲಿಗೆ ಉಗುರು ಬೆಚ್ಚಗಿನ ನೀರನ್ನು ಬಳಸಿ. ಹಿಟ್ಟನ್ನು ತಣ್ಣನೆಯ ನೀರಿನಿಂದ ಬೆರೆಸುವುದರಿಂದ ಚಪಾತಿ ಬೇಗನೆ ಗಟ್ಟಿಯಾಗುತ್ತದೆ. ಆದರೆ ಹಿಟ್ಟನ್ನು ಉಗುರು ಬೆಚ್ಚಗಿನ ನೀರಿನಿಂದ ಬೆರೆಸುವುದರಿಂದ ಚಪಾತಿ ಹೆಚ್ಚು ಸಮಯದವರೆಗೆ ಮೃದುವಾಗಿರುತ್ತದೆ.
55
ಇದನ್ನು ಸಂಗ್ರಹಿಸುವುದು ಹೇಗೆ?
ಚಪಾತಿ ಗಟ್ಟಿಯಾಗಿವೆಯೇ ಅಥವಾ ಮೃದುವಾಗಿವೆಯೇ ಎಂಬುದು ನೀವು ಅವುಗಳನ್ನು ಹೇಗೆ ಸಂಗ್ರಹಿಸುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ನಿಮ್ಮ ಚಪಾತಿ ದೀರ್ಘಕಾಲದವರೆಗೆ ಮೃದುವಾಗಿರಬೇಕೆಂದು ನೀವು ಬಯಸಿದರೆ ಅವುಗಳನ್ನು ಹೊರಗೆ ಬಿಡಬೇಡಿ. ಅವುಗಳನ್ನು ಸಂಗ್ರಹಿಸಲು ಮೊದಲು ಚಪಾತಿಗೆ ಸ್ವಲ್ಪ ತುಪ್ಪ ಹಚ್ಚಿ, ನಂತರ ಅದನ್ನು ಸ್ವಚ್ಛವಾದ ಹತ್ತಿ ಬಟ್ಟೆಯಲ್ಲಿ ಸುತ್ತಿ ಡಬ್ಬಿಯಲ್ಲಿ ಇರಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.