Prevent dosa from sticking: ದೋಸೆ ಕಬ್ಬಿಣದ ಪ್ಯಾನ್‌ಗೆ ಅಂಟಿಕೊಂಡೇ ಇದ್ದರೆ ಈ ಟ್ರಿಕ್ ಪ್ರಯತ್ನಿಸಿ. ಆಗ ಯಾವುದೇ ಸಮಸ್ಯೆ ಇರುವುದಿಲ್ಲ. ಜೊತೆಗೆ ಇಲ್ಲಿ ನಿಮಗೆ ರುಚಿಕರವಾದ ಮತ್ತು ಪರಿಪೂರ್ಣವಾದ ದೋಸೆ ಮಾಡುವುದು ಹೇಗೆಂದು ಸಹ ಕೊಡಲಾಗಿದೆ ನೋಡಿ..
ಬೆಳಗ್ಗೆ ಬೇಗನೆ ತಿಂಡಿ ತಯಾರಿಸುವ ಆತುರದಲ್ಲಿ ಅಡುಗೆ ಎಡವಟ್ಟಾದರೆ ನಿರಾಶೆಗೊಳ್ಳುವುದು ಸಹಜ. ವಿಶೇಷವಾಗಿ ದೋಸೆ ಮಾಡುವಾಗ ಅದು ಪ್ಯಾನ್‌ಗೆ ಅಂಟಿಕೊಳ್ಳುತ್ತದೆ. ಆಗ ಎಲ್ಲಾ ಕೆಲಸ ಹಾಳಾಗುತ್ತದೆ. ನೀವು ಸಹ ಈ ಸಮಸ್ಯೆಯನ್ನು ಎದುರಿಸುತ್ತಿದ್ದರೆ ನಾವು ನಿಮಗಾಗಿ ಒಂದು ವಿಶೇಷ ಟಿಪ್ಸ್ ತಂದಿದ್ದೇವೆ.
26
ಆ ಟ್ರಿಕ್ ಏನು?
ಈ ಟೆಕ್ನಿಕ್‌ನೊಂದಿಗೆ ನೀವು ಸಾಮಾನ್ಯ ಕಬ್ಬಿಣದ ಹಂಚಿನಲ್ಲಿಯೂ ಸಹ ಸುಲಭವಾಗಿ ದೋಸೆ ಮಾಡಬಹುದು ಮತ್ತು ಅದು ಅಂಟಿಕೊಳ್ಳುವುದಿಲ್ಲ. ಹಾಗಾದರೆ ಆ ಟ್ರಿಕ್ ಏನೆಂದು ನೋಡೋಣ ಬನ್ನಿ..
36
ಉಪ್ಪು ಸಿಂಪಡಿಸಿ
ಮೊದಲಿಗೆ ಕಬ್ಬಿಣದ ಹಂಚು ಬಿಸಿ ಮಾಡಿ. ಅದರ ಮೇಲೆ ನೇರವಾಗಿ ದೋಸೆ ಹರಡಿದರೆ ಹಿಟ್ಟು ಅಂಟಿಕೊಳ್ಳುತ್ತದೆ. ದೋಸೆ ಅಂಟಿಕೊಳ್ಳದಂತೆ ತಡೆಯಲು ಮೊದಲು ಪ್ಯಾನ್ ಅಥವಾ ಹಂಚು ಬಿಸಿ ಮಾಡಿ. ನಂತರ ಅದರ ಮೇಲೆ ಉಪ್ಪು ಸಿಂಪಡಿಸಿ.
ಇದರ ಮೇಲೆ ಕೆಲವು ನಿಮಿಷಗಳ ಕಾಲ ಉಪ್ಪನ್ನು ಉಜ್ಜಿ. ನಂತರ ಅದನ್ನು ಪ್ಯಾನ್‌ನಿಂದ ತೆಗೆದುಹಾಕಿ. ಪ್ಯಾನ್‌ಗೆ ಸ್ವಲ್ಪ ಎಣ್ಣೆ ಹಚ್ಚಿ. ಕೊನೆಯಲ್ಲಿ ಅದರ ಮೇಲೆ ನೀರು ಸಿಂಪಡಿಸಿ. ಸ್ವಚ್ಛವಾದ ಒಣಗಿದ ಬಟ್ಟೆಯಿಂದ ನೀರನ್ನು ಒರೆಸಿ. ಪ್ಯಾನ್ ಮೇಲೆ ದೋಸೆ ಹರಡಿ ಮತ್ತು ಅದು ಗರಿಗರಿಯಾಗುವವರೆಗೆ ಬೇಯಿಸಿ. ಈ ರೀತಿಯಾಗಿ ನಿಮ್ಮ ದೋಸೆ ಎಂದಿಗೂ ಅಂಟಿಕೊಳ್ಳುವುದಿಲ್ಲ.
56
ದೋಸೆ ಮಾಡುವ ವಿಧಾನ
ಅಕ್ಕಿ, ಉದ್ದಿನಬೇಳೆ ಮತ್ತು ಮೆಂತ್ಯ ಬೀಜಗಳನ್ನು ಹಲವಾರು ಬಾರಿ ಚೆನ್ನಾಗಿ ತೊಳೆಯಿರಿ. ಪ್ರತ್ಯೇಕ ಬಟ್ಟಲುಗಳಲ್ಲಿ ಕನಿಷ್ಠ 7-8 ಗಂಟೆಗಳ ಕಾಲ ನೆನೆಸಿಡಿ. ನೆನೆಸಿದ ಪದಾರ್ಥಗಳಿಂದ ನೀರನ್ನು ಬಸಿದುಕೊಳ್ಳಿ. ಈಗ ಅವುಗಳನ್ನು ಬ್ಲೆಂಡರ್‌ನಲ್ಲಿ ಹಾಕಿ ಎಲ್ಲವನ್ನೂ ಒಟ್ಟಿಗೆ ರುಬ್ಬಿಕೊಳ್ಳಿ.
66
ಈಗ ಹುಯ್ಯಿರಿ
ಹಿಟ್ಟು ಹೆಚ್ಚು ನುಣ್ಣಗೂ ಇರಬಾರದು. ದಪ್ಪಗೂ ಇರಬಾರದು. ಪ್ಯಾನ್ ಮೇಲೆ ಹರಡಲು ಸುಲಭವಾಗಿರಬೇಕು. ಬ್ಯಾಟರ್ ಅಂದರೆ ಹಿಟ್ಟು 7-8 ಗಂಟೆಗಳ ಕಾಲ ಹುದುಗಲು ಬಿಡಿ ಮತ್ತು ಹುಯ್ಯುವ ಮೊದಲು ಚೆನ್ನಾಗಿ ಬೀಟ್ ಮಾಡಿ. ಮೇಲೆ ವಿವರಿಸಿದಂತೆ ದೋಸೆಯನ್ನು ಪ್ಯಾನ್ ಅಥವಾ ನಾನ್-ಸ್ಟಿಕ್ ಪ್ಯಾನ್‌ನಲ್ಲಿ ಬೇಯಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.