ಭಾರತದ ಮಾವಿನ ಹಣ್ಣು ಆಮದಿಗೆ ನಿಷೇಧ ಹೇರಿದ ನೇಪಾಳ, ಅತೀ ರುಚಿಕರ ಹಣ್ಣು ಬ್ಯಾನ್ ಆಗಿದ್ದೇಕೆ?

Published : Jun 09, 2026, 02:49 PM IST

ಭಾರತದದ ಮಾವಿನ ಹಣ್ಣಿಗೆ ನೇಪಾಳ ನಿಷೇಧ ಹೇರಿದೆ. ಭಾರತದಿಂದ ಯಾವುದೇ ಮಾವಿನ ಹಣ್ಣ ಆಮದು ಮಾಡಿಕೊಳ್ಳದಿರಲು ನಿರ್ಧರಿಸಿದೆ. ನೇಪಾಳ ಈ ನಿರ್ಧಾರ ಮಾಡಿದ್ದೇಕೆ? ಭಾರತದ ರೈತರಿಗೆ ಎದುರಾಯ್ಕು ಸಂಕಷ್ಟ

PREV
16
ಭಾರತದಲ್ಲಿ ಮುಗಿಬಿದ್ದು ಖರೀದಿಸುವ ಮಾವಿನ ಹಣ್ಣಿಗೆ ನಿಷೇಧ

ಭಾರತದ ಪ್ರತಿ ರಾಜ್ಯದಲ್ಲಿ ವಿವಿದ ತಳಿಯ ಮಾವಿನ ಹಣ್ಣುಗಳು ಲಭ್ಯವಿದೆ. ಅತೀ ಹೆಚ್ಚು ತಳಿ, ಅತ್ಯಂತ ರುಚಿಕರ ಮಾವಿಗೆ ಜನರು ಮುಗಿಬಿದ್ದು ಖರೀದಿಸುತ್ತಾರೆ. ಕರ್ನಾಟಕ ಸೇರಿದಂತೆ ದೇಶದ ಹಲವು ಭಾಗದಲ್ಲಿ ಮಾವು ಮೇಳ, ಹಲಸು ಮೇಳ ಸೇರಿದಂತೆ ಹಲವು ಮೇಳಗಳ ಮೂಲಕ ಮತ್ತಷ್ಟು ಜನರನ್ನು ಆಕರ್ಷಿಸುತ್ತದೆ. ಭಾರಿ ಬೇಡಿಕೆಯ ಈ ಮಾವಿನ ಹಣ್ಣಿಗೆ ನೇಪಾಳ ನಿಷೇಧ ಹೇರಿದೆ.

26
ನೇಪಾಳ ಈ ನಿರ್ಧಾರ ತೆಗೆದುಕೊಂಡಿದ್ದೇಕೆ?

ಭಾರತದ ಮಾವಿನ ಹಣ್ಣಿಗೆ ವಿಪರೀತ ಕೀಟನಾಶಗಳನ್ನು ಸಿಂಪಡಿಸುತ್ತಿದ್ದಾರೆ. ನೇಪಾಳದ ಆಹಾರ ಸುರಕ್ಷತಾ ಇಲಾಖೆ ಪರಿಶೀಲನೆಯಲ್ಲಿ ಭಾರತದ ಮಾವಿನ ಹಣ್ಣ ಕ್ಯಾನ್ಸರ್ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಲಿದೆ ಎಂದು ಎಚ್ಚರಿಸಿದೆ. ಇದರ ಬೆನ್ನಲ್ಲೇ ನೇಪಾಳ ಭಾರತದ ಮಾವಿನ ಹಣ್ಣು ಆಮದು ಬ್ಯಾನ್ ಮಾಡಿದೆ.

36
ಚೆಕ್‌ಪೋಸ್ಟ್‌ನಲ್ಲಿ 15.8 ಮೆಟ್ರಿಕ್ ಟನ್ ಮಾವು ಸ್ಥಗಿತ

ನೇಪಾಳ ನಿಷೇಧ ಹೇರಿದ ಬೆನ್ನಲ್ಲೇ ಭಾರತದ ಗಡಿ ಮೂಲಕ ನೇಪಾಳ ಗಡಿಯತ್ತ ಸಾಗಿದ ಬರೋಬ್ಬರಿ 15.8 ಮೆಟ್ರಿಕ್ ಟನ್ ಮಾವಿನ ಹಣ್ಣು ಚೆಕ್‌ಪೋಸ್ಟ್‌ನಲ್ಲೇ ಬಾಕಿಯಾಗಿದೆ. ನೇಪಾಳದ ಒಳ ಬಿಡಲು ನಿಷೇಧವಿದೆ. ವಾಪಸ್ ತರುವ ಪರಿಸ್ಥಿತಿಯಲ್ಲಿ ವಿತರಕರು ಇಲ್ಲ.

46
ಮಾವಿನ ಹಣ್ಣು ವಶಕ್ಕೆ ಪಡೆದು ನಾಶಪಡಿಸಿದ ಅಧಿಕಾರಿಗಳು

ಭಾರತದ ಮಾವಿನ ಹಣ್ಣಿನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ರಾಸಾಯನಿಕ ಹಾಗೂ ಕೀಟನಾಶಗಳು ಪತ್ತೆಯಾಗಿದೆ. ಭಾರತದಿಂದ ಆಮದ್ದಾಗಿರುವ ಮಾವಿನ ಹಣ್ಣುಗಳನ್ನು ನೇಪಾಲ ಅಧಿಕಾರಿಗಳು ವಶಕ್ಕೆ ಪಡೆದು ನಾಶ ಪಡಿಸಿದ್ದಾರೆ. ಇದರಿಂದ ನೇಪಾಳದಲ್ಲಿ ಮಾವಿನ ಹಣ್ಣಿನ ಕೊರತೆ ಎದುರಾಗಿದೆ.

56
ಕೆಲ ದಿನಗಳ ಹಿಂದೆ ಜಪಾನ್ ನಿರ್ಧಾರ

ನೇಪಾಳಕ್ಕೂ ಮೊದಲು ಜಪಾನ್ ಕೂಡ ಭಾರತದ ಮಾವಿನ ಹಣ್ಣುಗಳನ್ನು ನಿಷೇಧಿಸಿತ್ತು. ಉತ್ತರ ಪ್ರದೇಶದ ಸಂಸ್ಕಾರಣ ಘಟಕದಲ್ಲಿ ಕೀಟ ನಿಯಂತ್ರಕ ಬಳಕೆ ಮಾವಿನಲ್ಲೂ ಪತ್ತೆಯಾಗಿತ್ತು. ಪರಿಣಾಮ ಭಾರತದ ಅಲ್ಫಾನ್ಸೋ, ಕೇಸರ್ ಸೇರಿದಂತೆ ಪ್ರಮುಖ ತಳಿಗಳ ಆಮದು ಜಪಾನ್ ನಿಷೇಧಿಸಿದೆ.

66
ಭಾರತದ ರೈತರು ಕಂಗಾಲು

ಭಾರತದ ಸಂಸ್ಕರಣ ಘಟಕಗಳಲ್ಲಿ ರಾಸಾಯನಿಕ ಬಳಸಿ ಮಾವು ಶೇಖರಿಸಲಾಗುತ್ತಿದೆ. ಜೊತೆಗೆ ರಫ್ತು ವೇಳೆ ಮಾವು ಫ್ರೆಶ್ ಆಗಿ ಕಾಣಲು ರಾಸಾಯನಿಕ ಬಳಸಲಾಗುತ್ತದೆ. ಇತ್ತ ಕೆಲವರು ಬೆಳೆಗೂ ಕೀಟನಾಶ, ರಾಸಾಯನಿಕ ಬಳಕ ಮಾಡುತ್ತಿದ್ದಾರೆ. ಇದರಿಂದ ಮಾವು ಬೆಳಗಾರರಿಗೆ ಸಂಕಷ್ಟ ಎದುರಾಗಿದೆ. ಸಾವಯವ ಮೂಲಕ ಮಾವು ಬೆಳೆದು ರಫ್ತು ಮಾಡಲು ನಿರ್ಧರಿಸಿರುವ ರೈತರು ನಿಷೇಧದಿಂದ ಕಂಗಾಲಾಗಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories