ಮನ ಸೆಳೆಯೋ ಪರಿಮಳ, ಬೆಣ್ಣೆಯಂತೆ ಕರಗುವ ಜಗತ್ತಿನ ಅತೀ ಸಿಹಿ ಮಾವಿನ ಹಣ್ಣು ಇದು
ಜಗತ್ತಿನಲ್ಲೇ ಅತ್ಯಂತ ಸಿಹಿಯಾದ ಮಾವಿನ ಹಣ್ಣು ಯಾವುದು ಗೊತ್ತಾ? ಫಿಲಿಪೈನ್ಸ್ ಮೂಲದ 'ಕಾರಬಾವೊ' ಮಾವಿನ ಹಣ್ಣು, ಜಗತ್ತಿನ ಅತಿ ಸಿಹಿ ಹಣ್ಣು ಅಂತಾನೇ ಫೇಮಸ್ ಆಗಿದೆ.
food Jun 03 2026
Author: Govindaraj S Image Credits:Getty
Kannada
ವಿಶ್ವ ದಾಖಲೆ
ಈ ಹಣ್ಣು ತನ್ನ ಅಸಾಧಾರಣ ಸಿಹಿಯಿಂದಾಗಿಯೇ ಗಿನ್ನೆಸ್ ವಿಶ್ವ ದಾಖಲೆ ಪುಸ್ತಕದಲ್ಲಿ ಸ್ಥಾನ ಪಡೆದಿದೆ. ಜಗತ್ತಿನ ಅತ್ಯಂತ ಸಿಹಿಯಾದ ಮಾವಿನ ತಳಿ ಎಂಬ ಹೆಗ್ಗಳಿಕೆ ಇದರದ್ದು.
Image credits: Getty
Kannada
ಹೆಚ್ಚಿನ ಬ್ರಿಕ್ಸ್ ಮಟ್ಟ
ಹಣ್ಣುಗಳಲ್ಲಿ ಸಕ್ಕರೆ ಅಂಶವನ್ನು ಅಳೆಯುವ 'ಬ್ರಿಕ್ಸ್ ಮಟ್ಟ' ಕಾರಬಾವೊ ಮಾವಿನ ಹಣ್ಣಿನಲ್ಲಿ ತುಂಬಾ ಹೆಚ್ಚಾಗಿರುತ್ತದೆ. ಇದೇ ಇದರ ಸಿಹಿಗೆ ಕಾರಣ.
Image credits: Getty
Kannada
ರುಚಿಯ ವಿಶೇಷತೆ
ಇತರ ಮಾವಿನ ಹಣ್ಣುಗಳಂತೆ ಹುಳಿ-ಸಿಹಿ ಮಿಶ್ರಿತ ರುಚಿಯನ್ನು ಇದು ಹೊಂದಿಲ್ಲ. ಬದಲಾಗಿ, ಕ್ಯಾಂಡಿಯಂತೆ ಸಂಪೂರ್ಣ ಶುದ್ಧವಾದ ಸಿಹಿ ರುಚಿಯನ್ನು ಇದು ನೀಡುತ್ತದೆ.
Image credits: Getty
Kannada
ಬೆಣ್ಣೆಯಂತಹ ತಿರುಳು
ಹೊಳೆಯುವ ಚಿನ್ನದ ಬಣ್ಣದ ತಿರುಳು ಇದರ ವಿಶೇಷ. ಇದರಲ್ಲಿ ನಾರಿನಂಶ ಇರುವುದಿಲ್ಲ ಮತ್ತು ಬಾಯಲ್ಲಿ ಇಟ್ಟರೆ ಬೆಣ್ಣೆಯಂತೆ ಕರಗಿ ಹೋಗುತ್ತದೆ.
Image credits: Getty
Kannada
ಅದ್ಭುತ ಸುವಾಸನೆ
ಈ ಮಾವಿನ ಹಣ್ಣಿಗೆ ತಿನ್ನಬೇಕು ಎನಿಸುವಂತಹ ಗಾಢವಾದ ಸುವಾಸನೆ ಇದೆ. ಇದರ ಪರಿಮಳವೇ ಬಾಯಲ್ಲಿ ನೀರೂರಿಸುತ್ತದೆ.
Image credits: Getty
Kannada
ಅಲ್ಫೋನ್ಸೊ ಜೊತೆಗಿನ ವ್ಯತ್ಯಾಸ
ಕಾರಬಾವೊ ಮಾವು ತನ್ನ ಅತಿಯಾದ ಸಿಹಿಗೆ ಹೆಸರುವಾಸಿಯಾಗಿದೆ. ಆದರೆ, ನಮ್ಮಲ್ಲಿ ಫೇಮಸ್ ಆಗಿರುವ 'ಅಲ್ಫೋನ್ಸೊ' ಮಾವು ಸಿಹಿ ಮತ್ತು ಸಣ್ಣ ಪ್ರಮಾಣದ ಹುಳಿಯ ಮಿಶ್ರಣದ ರುಚಿಗೆ ಹೆಸರುವಾಸಿಯಾಗಿದೆ.
Image credits: Getty
Kannada
ಮಾವಿನ ಪ್ರಿಯರ ನೆಚ್ಚಿನ ತಳಿ
ಹೆಚ್ಚಿನ ಸಕ್ಕರೆ ಅಂಶ, ವಿಶಿಷ್ಟ ಸುವಾಸನೆ ಮತ್ತು ಆಕರ್ಷಕ ನೋಟದಿಂದಾಗಿ ಇದು ವಿಶ್ವಾದ್ಯಂತ ಮಾವು ಪ್ರಿಯರ ನೆಚ್ಚಿನ ತಳಿಯಾಗಿದೆ.