ಖಾರವಾದ ಬಾಡೂಟ ಇಷ್ಟಪಡುವವರಿಗಾಗಿ ಆಂಧ್ರ-ತಮಿಳುನಾಡು ಶೈಲಿಯ ಚಂದ್ರಮುಖಿ ಚಿಕನ್ ಫ್ರೈ ಮಾಡುವ ವಿಧಾನ ಇಲ್ಲಿದೆ. ವಿಶೇಷ ಮಸಾಲೆಗಳನ್ನು ಬಳಸಿ ತಯಾರಿಸುವ ಈ ಖಾದ್ಯವು ವಿಭಿನ್ನ ರುಚಿಯನ್ನು ನೀಡುತ್ತದೆ ಮತ್ತು ಇದನ್ನು ಚಪಾತಿ, ರೊಟ್ಟಿ ಅಥವಾ ದೋಸೆಯೊಂದಿಗೆ ಸವಿಯಬಹುದು.
ಕೆಲವರಿಗೆ ಬಾಡೂಟ ಅಂದ್ರೆ ಖಾರ ಖಾರವಾಗಿರಬೇಕು ಮತ್ತು ನೋಡಿದ್ರೆ ಬಾಯಲ್ಲಿ ನೀರೂರಿಸುವಂತಿರಬೇಕಾಗುತ್ತದೆ. ಒಂದೇ ರೀತಿಯ ಚಿಕನ್ ಅಡುಗೆ ತಿಂದು ಬೇಸರವಾಗಿದ್ರೆ ಇಂದು ಆಂಧ್ರ-ತಮಿಳುನಾಡು ಶೈಲಿಯ ಚಂದ್ರಮುಖಿ ಚಿಕನ್ ಫ್ರೈ ಟ್ರೈ ಮಾಡಿ. ಖಂಡಿತ ಈ ಶೈಲಿಯ ಚಿಕನ್ ಅಡುಗೆ ನಿಮಗೆ ಇಷ್ಟವಾಗುತ್ತೆ ಮತ್ತು ಒಮ್ಮೆ ರುಚಿ ನೋಡಿದ್ಮೇಲೆ ನೀವೇ ಪದೇ ಪದೇ ಮಾಡಿಕೊಳ್ಳಲು ಆರಂಭಿಸುತ್ತೀರಿ. ಈ ಚಿಕನ್ ಫ್ರೈನಲ್ಲಿರುವ ವಿಶೇಷವಾದ ರುಚಿ ನಿಮ್ಮನ್ನು ಹೊಸ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ.
28
ಚಂದ್ರಮುಖಿ ಚಿಕನ್ ಫ್ರೈ ಮಾಡಲು ಬೇಕಾಗುವ ಸಾಮಾಗ್ರಿಗಳು
750 ಗ್ರಾಂ ಚಿಕನ್, ಒಂದೂವರೆ ಕಪ್ ನೀರು, ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು, 2-3 ಟೀ ಸ್ಪೂನ್ ಎಣ್ಣೆ, 3 ಲವಂಗ, ಅರ್ಧ ತುಂಡು ಅನಾನಸ್ ಹೂವು, ಎರಡು ಏಲಕ್ಕಿ, ಒಂದೂವರೆ ಇಂಚು ದಾಲ್ಚಿನ್ನಿ, ಒಂದು ಚಮಚ ಮೆಣಸು, ಒಂದು ಚಮಚ ಜೀರಿಗೆ, ಮೂರು ಒಣ ಮೆಣಸಿನಕಾಯಿ, ಎರಡು ಚಮಚ ಕೊತ್ತಂಬರಿ, ಸ್ವಲ್ಪ ಸೋಂಪು, ಒಂದು ಈರುಳ್ಳಿ, 2-3 ಹಸಿಮೆಣಸಿನಕಾಯಿ, ಒಂದು ಹಿಡಿಯಷ್ಟು ಗೋಡಂಬಿ, ಸ್ವಲ್ಪ ಕರಿಬೇವು, ಒಂದೂವರೆ ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಒಂದು ಟೀ ಸ್ಪೂನ್ ಕಸೂರಿ ಮೇಥಿ, 2 ಟೀ ಸ್ಪೂನ್ ಅಚ್ಚ ಖಾರದ ಪುಡಿ, 2 ಟೀ ಸ್ಪೂನ್ ಒಣ ತೆಂಗಿನಕಾಯಿ ಪುಡಿ, ಸ್ವಲ್ಪ ಕೊತ್ತಂಬರಿ, ನಿಂಬೆ ರಸ ಮತ್ತು ಚೆಟ್ಟಿನಾಡು ಮಸಾಲ
38
ಚಿಕನ್ ಬೇಯಿಸಿಕೊಳ್ಳುವುದು
ಒಂದು ಪಾತ್ರೆಯಲ್ಲಿ ಚಿಕನ್ ತೆಗೆದುಕೊಂಡು ಅರ್ಧ ಕಪ್‌ನಷ್ಟು ನೀರು ಹಾಕಿಕೊಳ್ಳಿ. ಇದಕ್ಕೆ ಅರಿಶಿನ ಪುಡಿ ಮತ್ತು ಉಪ್ಪು ಸೇರಿಸಿಕೊಂಡು ಮಧ್ಯಮ ಉರಿಯಲ್ಲಿ ಬೇಯಿಸಿಕೊಳ್ಳಿ. ಚಿಕನ್ ಶೇ.80ರಷ್ಟು ಬೆಂದಾಗ ಒಲೆ ಆಫ್ ಮಾಡಿ, ಹೆಚ್ಚುವರಿ ನೀರನ್ನು ಬೇರ್ಪಡಿಸಿಕೊಂಡು ಎತ್ತಿಟ್ಟುಕೊಳ್ಳಿ. ಶೇ.80ರಷ್ಟು ಚಿಕನ್ ಬೇಯಲು ಗರಿಷ್ಠ 5 ನಿಮಿಷ ಸಾಕು.
ಮಸಾಲೆ ಪೇಸ್ಟ್ ಮಾಡಿಕೊಳ್ಳಲು ಒಲೆ ಆನ್ ಮಾಡ್ಕೊಂಡು ಬಾಣಲೆ ಇಟ್ಕೊಳ್ಳಿ. ಈಗ ಇದಕ್ಕೆ ಲವಂಗ, ಅನಾನಸ್ ಹೂವು, ಏಲಕ್ಕಿ, ದಾಲ್ಚಿನ್ನಿ, ಮೆಣಸು ಸೇರಿಸಿಕೊಳ್ಳಿ. ಈ ಎಲ್ಲಾ ಮಸಾಲೆ ಪದಾರ್ಥಕ್ಕೆ 2 ಟೀ ಸ್ಪೂನ್‌ನಷ್ಟು ಎಣ್ಣೆ ಸೇರಿಸಿ ಪರಿಮಳ ಬರೋವರೆಗೂ ಹುರಿದುಕೊಳ್ಳಿ. ಪರಿಮಳ ಬಂದ ನಂತರ ಇದೇ ಬಾಣಲೆಗೆ ಒಣಮೆಣಸಿಕಾಯಿ, ಜೀರಿಗೆ, ಧನಿಯಾ, ಸೋಂಪು ಸೇರಿಸಿಕೊಂಡು ಸ್ವಲ್ಪ ಹುರಿದುಕೊಂಡು ಬೇರೊಂದು ಪಾತ್ರೆಗೆ ಹಾಕಿಕೊಳ್ಳಿ.
58
ಈರುಳ್ಳಿ, ಹಸಿಮೆಣಸಿನಕಾಯಿ
ನಂತರ ಇದೇ ಬಾಣಲೆಗೆ ಕತ್ತರಿಸಿದ ಈರುಳ್ಳಿ, ಹಸಿಮೆಣಸಿನಕಾಯಿಯನ್ನು ಫ್ರೈ ಮಾಡಿಕೊಳ್ಳಬೇಕು. ಕೊನೆಗೆ ಎಲ್ಲಾ ಮಸಾಲೆ ಪದಾರ್ಥ ಮತ್ತು ಈರುಳ್ಳಿ-ಹಸಿಮೆಣಸಿನಕಾಯಿ ತಣ್ಣಗಾದ ಮೇಲೆ ಜಾರ್‌ನಲ್ಲಿ ಹಾಕಿಕೊಂಡು ಸಣ್ಣದಾಗಿ ರುಬ್ಬಿಕೊಳ್ಳಿ.
68
ಗೋಡಂಬಿ, ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕ
ತದನಂತರ ಒಲೆ ಮೇಲೆ ಮತ್ತೊಂದು ಪ್ಯಾನ್ ಇಟ್ಕೊಂಡು ಎಣ್ಣೆ ಹಾಕಿಕೊಳ್ಳಿ. ಇದಕ್ಕೆ ಏಲಕ್ಕಿ, ಲವಂಗ, ದಾಲ್ಚಿನ್ನಿ ಸೇರಿಸಿ ಹುರಿಯಿರಿ. ತದನಂತರ ಗೋಡಂಬಿ, ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕರೀಬೇವು ಸೇರಿಸಿಕೊಂಡು ಎರಡರಿಂದ ಮೂರು ನಿಮಿಷ ಬೇಯಿಸಿಕೊಳ್ಳಬೇಕು.
78
ರುಬ್ಬಿಕೊಂಡಿರುವ ಮಸಾಲೆ
ಈಗ ಇದಕ್ಕೆ ರುಬ್ಬಿಕೊಂಡಿರುವ ಮಸಾಲೆ ಹಾಕಿ ತಳಕ್ಕೆ ಅಂಟಿಕೊಳ್ಳದಂತೆ ಎರಡು ನಿಮಿಷ ಬೇಯಿಸಿಕೊಳ್ಳಬೇಕು. ಕೊನೆಗೆ ಇದಕ್ಕೆ ಬೇಯಿಸಿಕೊಂಡಿರುವ ಚಿಕನ್ ಸೇರಿಸಿ ಚೆನ್ನಾಗಿ ಮಸಾಲೆಯಲ್ಲಿ ಮಿಕ್ಸ್ ಮಾಡಿಕೊಳ್ಳಿ.
88
ಚಪಾತಿ, ರೊಟ್ಟಿ, ದೋಸೆಕ್ಕೆ ಇದು ಒಳ್ಳೆಯ ಕಾಂಬಿನೇಷನ್
ಅಂತಿಮವಾಗಿ ಕಸೂರಿ ಮೇಥಿ, ಅಚ್ಚ ಖಾರದ ಪುಡಿ, ಒಣತೆಂಗಿನಕಾಯಿ ಪುಡಿ ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಎರಡು ನಿಮಿಷ ಬೇಯಿಸಿಕೊಂಡ್ರೆ ಚಿಕನ್ ರೆಡಿಯಾಗುತ್ತದೆ. ಅಂತಿಮವಾಗಿ ಒಲೆ ಆಫ್ ಮಾಡಿ ಕೋತಂಬರಿ ಸೊಪ್ಪು, ನಿಂಬೆರಸ ಮತ್ತು ಚೆಟ್ಟಿನಾಡ್ ಮಸಾಲೆ ಸೇರಿಸಿದ್ರೆ ರುಚಿಯಾದ ಚಂದ್ರಮುಖಿ ಚಿಕನ್ ಫ್ರೈ ಸವಿಯಲು ಸಿದ್ಧವಾಗುತ್ತದೆ. ಚಪಾತಿ, ರೊಟ್ಟಿ, ದೋಸೆಕ್ಕೆ ಇದು ಒಳ್ಳೆಯ ಕಾಂಬಿನೇಷನ್ ಆಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.