Best and Worst Snacks: ಸಂಜೆ ಸ್ನ್ಯಾಕ್ಸ್‌ಗೆ ಏನು ತಿಂತೀರಿ? ನಿಮ್ಮ ಆರೋಗ್ಯದ ಗುಟ್ಟು ಇಲ್ಲೇ ಅಡಗಿದೆ

First Published | Oct 22, 2022, 6:59 PM IST

ಊಟದ ನಡುವಿನ ಸ್ನಾಕ್ಸ್ ನಿಮ್ಮ ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತೆ, ಅದರ ಜೊತೆಗೆ ನೀವು ಊಟ ಮಾಡಲು ಕುಳಿತಾಗ ಅತಿಯಾಗಿ ತಿನ್ನೋದನ್ನು ಸಹ ಇದು ತಡೆಯುತ್ತೆ. ಉತ್ತಮ ಸ್ನಾಕ್ಸ್ ತಿನ್ನೋದರ ಮೂಲಕ, ನಿಮಗೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಪಡೆಯಬಹುದು. ಹಾಗೇ, ದಿನವಿಡೀ ಸ್ನಾಕ್ಸ್ ಸೇವಿಸೋದು ಎಂದರೆ ಕಡಿಮೆ ಪೌಷ್ಠಿಕಾಂಶದ ಮೌಲ್ಯದ ಹೆಚ್ಚಿನ ಆಹಾರವನ್ನು ತಿನ್ನುವುದು ಎಂದರ್ಥ. ಇದರಿಂದ ಆರೋಗ್ಯಕ್ಕೆ ಹಾನಿಯಾಗಬಹುದು. 

ನಾವು ತಿನ್ನುವ ಸ್ನ್ಯಾಕ್ಸ್(Snacks) ನಮ್ಮ ಆರೋಗ್ಯವನ್ನು ಕಾಪಾಡುವಂತದ್ದಾಗಿರಬೇಕು. ಇಲ್ಲವಾದರೆ ಸಾಲು ಸಾಲು ಕಾಯಿಲೆಗಳು ನಮ್ಮನ್ನು ಆವರಿಸುತ್ತವೆ. ಆದುದರಿಂದ ಪ್ರೋಟೀನ್, ಕೊಬ್ಬು ಅಥವಾ ಫೈಬರ್ ಹೊಂದಿರುವ ಸ್ನಾಕ್ಸ್ ಆರಿಸಿ. ಈ ಎಲ್ಲಾ ಪೋಷಕಾಂಶಗಳು ಜೀರ್ಣವಾಗಲು ಹೆಚ್ಚಿನ ಸಮಯ ಬೇಕಾಗುತ್ತೆ. ಆದ್ದರಿಂದ ನಿಮ್ಮ ಹೊಟ್ಟೆ ತುಂಬುತ್ತೆ. ನಿಮ್ಮ ದೈನಂದಿನ ಪೋಷಣೆಗೆ ಪೂರಕವಾಗಿ ಸ್ನಾಕ್ಸ್ ಮತ್ತೊಂದು ಪರಿಣಾಮಕಾರಿ ಆಹಾರವಾಗಿದೆ. ರಾತ್ರಿ ಊಟಕ್ಕೆ ಮೊದಲು ತಿನ್ನಲು ಉತ್ತಮ ಮತ್ತು ಕೆಟ್ಟ ಸಂಜೆಯ ಸ್ನಾಕ್ಸ್ ಗಳ ಬಗ್ಗೆ ತಿಳಿಯಿರಿ

ನಟ್ಸ್(Nuts): ನಟ್ಸ್ ಸರಿಯಾದ ಪ್ರಮಾಣದ ಫೈಬರ್, ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬು ಹೊಂದಿರುವ ಉತ್ತಮ ಸ್ನ್ಯಾಕ್ಸ್ ಆಗಿದೆ. ಇವು ಹೆಚ್ಚು ರುಚಿಕರವಾಗುವುದರ ಜೊತೆಗೆ, ಅನೇಕ ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿವೆ. ಹೆಚ್ಚಿನ ಕ್ಯಾಲೋರಿ ಮತ್ತು ಕೊಬ್ಬಿನ ಅಂಶದ ಹೊರತಾಗಿಯೂ ಸಣ್ಣ ಪ್ರಮಾಣದಲ್ಲಿ ನಟ್ಸ್ಗಳನ್ನು ಸೇವಿಸೋದು ತೂಕ ನಷ್ಟಕ್ಕೆ ಸಹಾಯ ಮಾಡುತ್ತೆ ಎಂದು ಸಂಶೋಧನೆಯು ತೋರಿಸಿದೆ.

Tap to resize

ಹಣ್ಣುಗಳೊಂದಿಗೆ ಮೊಸರು(Curd): ಹಣ್ಣು ಮತ್ತು ಸಾದಾ ಮೊಸರು ಒಟ್ಟಿಗೆ ರುಚಿಕರವಾದ ಮತ್ತು ಆರೋಗ್ಯಕರ ಸ್ನ್ಯಾಕ್ಸ್  ಆಗಿದೆ. ಹಣ್ಣು ಉತ್ಕರ್ಷಣ ನಿರೋಧಕ, ಫೈಬರ್ ಇತ್ಯಾದಿಗಳ ಅತ್ಯುತ್ತಮ ಮೂಲಗಳಲ್ಲಿ ಒಂದಾಗಿದೆ. ಮೊಸರು ಪ್ರೋಟೀನ್ ನಿಂದ ಸಮೃದ್ಧವಾಗಿದೆ. ವಿವಿಧ ಪೋಷಕಾಂಶಗಳು, ಟೇಸ್ಟಿಯಾದ ಆಹಾರದ ರುಚಿ ಪಡೆಯಲು ಮೊಸರಿನಲ್ಲಿ ವಿವಿಧ ಹಣ್ಣುಗಳನ್ನು ಸೇರಿಸಿ ಸೇವಿಸಿ.
 

ಡಾರ್ಕ್ ಚಾಕೊಲೇಟ್ನಲ್ಲಿ (Dark chocolate)ಅದ್ದಿದ ಬಾದಾಮಿ: ಬಾದಾಮಿ ಮತ್ತು ಡಾರ್ಕ್ ಚಾಕೊಲೇಟ್ ಎರಡೂ ಆರೋಗ್ಯಕರ ಕೊಬ್ಬಿನ ಉತ್ತಮ ಮೂಲಗಳಾಗಿವೆ. ಒಟ್ಟಿಗೆ ಅವು ರುಚಿಕರವಾದ, ಅನುಕೂಲಕರ ಮತ್ತು ಹೃದಯಕ್ಕೆ ಉತ್ತಮವಾದ ಸ್ನ್ಯಾಕ್ಸ್ . ಕೆಲವು ಟೇಬಲ್ ಸ್ಪೂನ್ ಡಾರ್ಕ್ ಚಾಕೊಲೇಟ್ ಚಿಪ್ಸ್ ಅಥವಾ ಒಂದು ಹಿಡಿ ನಟ್ಸ್ ಹೊಂದಿರುವ ಡಾರ್ಕ್ ಚಾಕಲೇಟ್ ತುಂಡನ್ನು ತಿನ್ನೋದರಿಂದ ದೇಹಕ್ಕೆ ತುಂಬಾ ಒಳ್ಳೇದು. 

ಪೀ ನಟ್ ಬಟರ್ ಜೊತೆ ಸೇಬು(Peanut butter with apple): ಸೇಬು ನಾರಿನಂಶದಿಂದ ಸಮೃದ್ಧವಾಗಿರುವ ಹಣ್ಣಾಗಿದೆ. ಪೀ ನಟ್ ಬಟರ್ ಆರೋಗ್ಯಕರ ಕೊಬ್ಬು, ಸಸ್ಯ ಆಧಾರಿತ ಪ್ರೋಟೀನ್ ಮತ್ತು ನಾರಿನಂಶದಿಂದ ತುಂಬಿದೆ. ಪೀ ನಟ್ ಬಟರ್ ಜೊತೆ ಸೇಬುಗಳನ್ನು ಬೆರೆಸುವ ಮೂಲಕ ನೀವು ರುಚಿಯಾದ ಸ್ಯಾಕ್ಸ್ ಆನಂದಿಸಬಹುದು. ಹೆಚ್ಚುವರಿ ಪರಿಮಳವ ಪಡೆಯಲು ಸ್ವಲ್ಪ ದಾಲ್ಚಿನ್ನಿ ಪುಡಿ ಸೇರಿಸಿ.

ಯಾವ ಆಹಾರವನ್ನು ನೀವು ಸಂಜೆಯ ಸ್ನಾಕ್ಸ್ ಜೊತೆ ತಿನ್ನಬಾರದು

ಮಿಲ್ಕ್ ಚಾಕೊಲೇಟ್(Milk chocolate): ತೂಕ ಅಥವಾ ಆಹಾರವನ್ನು ನಿರ್ವಹಿಸಲು ಪ್ರಯತ್ನಿಸುವಾಗ ಡಾರ್ಕ್ ಚಾಕೊಲೇಟ್ ಮತ್ತು ಮಿಲ್ಕ್ ಚಾಕೊಲೇಟ್ ಅನ್ನು ಪರ್ಯಾಯವಾಗಿ ತೆಗೆದುಕೊಳ್ಳಬೇಡಿ. ಚಾಕೊಲೇಟ್ ನಲ್ಲಿ ಸಕ್ಕರೆ, ಹಾಲು ಮತ್ತು ಕೆಲವೊಮ್ಮೆ ಪ್ರೆಸೆರ್ವೆಟಿವ್ಸ್ ಅಧಿಕವಾಗಿರುತ್ತೆ. ಅವುಗಳನ್ನು ಸಂಪೂರ್ಣವಾಗಿ ತಪ್ಪಿಸೋದು ಒಳ್ಳೇದು.

ಚಿಪ್ಸ್(Chips): ಆಲೂಗಡ್ಡೆ ಚಿಪ್ಸ್ ಅಥವಾ ಕರಿದ ಚಿಪ್ಸನ್ನು ಅನಾರೋಗ್ಯಕರ ಸ್ನಾಕ್ಸ್ ಎಂದು ಕರೆಯಲಾಗುತ್ತೆ. ಇದರಲ್ಲಿ ಸೋಡಿಯಂ (ಉಪ್ಪು), ಪ್ರೆಸೆರ್ವೆಟಿವ್ಸ್ ಮತ್ತು ಆರೋಗ್ಯಕರವಲ್ಲದ ಇತರ ಅಂಶಗಳನ್ನು ಸೇರಿಸಲಾಗುತ್ತೆ. ಈ ಅನಾರೋಗ್ಯಕರ ಅಂಶಗಳಿಂದಾಗಿ ತರಕಾರಿಗಳ ಪೌಷ್ಟಿಕಾಂಶದ ಮೌಲ್ಯ ಸಹ ಕಡಿಮೆ ಮಾಡುತ್ತೆ.
 

ಕರಿದ ಆಹಾರ(Fried food): ಕರಿದ ಆಹಾರಗಳಲ್ಲಿ ಕೊಬ್ಬು, ಉಪ್ಪು ಮತ್ತು ಕೊಲೆಸ್ಟ್ರಾಲ್ ನಂತಹ ರೋಗಗಳಿಗೆ ಕಾರಣವಾಗುವ ಇತರ ಅನೇಕ ಅಂಶಗಳಿಂದ ತುಂಬಿರೋದರಿಂದ ಅವುಗಳನ್ನು ಅವಾಯ್ಡ್ ಮಾಡೋದು ಬೆಸ್ಟ್. ಪಕೋಡಾ, ಸಮೋಸಾ ಮತ್ತು ಇತರ ಚಹಾ ಸ್ನೇಹಿ ತಿಂಡಿಗಳನ್ನು ತಿನ್ನೋದು ನಿಮಗೆ ಟೇಸ್ಟಿ ಅನಿಸಬಹುದು, ಆದರೆ ಅದರ ಸೇವನೆಯನ್ನು ಮಿತಿಗೊಳಿಸಬೇಕು.

ಸಿಹಿ ಆಹಾರ(Sweets): ಸೂರ್ಯಾಸ್ತದ ಮೊದಲು ಸಿಹಿ ಆಹಾರಗಳನ್ನು ತಿನ್ನೋದರಿಂದ ಹೆಚ್ಚು ಹಾನಿಯಾಗೋದಿಲ್ಲ ಎಂದು ಅನೇಕ ಜನರು ನಂಬುತ್ತಾರೆ. ಇದು ತಪ್ಪು. ಸಕ್ಕರೆ ಭರಿತ ಆಹಾರಗಳನ್ನು ನಿಯಮಿತವಾಗಿ ಸೇವಿಸೋದರಿಂದ ಮಧುಮೇಹದಂತಹ ಅನೇಕ ದೀರ್ಘಕಾಲದ ಕಾಯಿಲೆಗಳು ಉಂಟಾಗುವ ಅಪಾಯ ತುಂಬಾನೆ ಹೆಚ್ಚಿದೆ.

ನೀವು ಏನು ತಿನ್ನುತ್ತೀರಿ ಮತ್ತು ಎಷ್ಟು ತಿನ್ನುತ್ತೀರಿ ಎಂಬುದು ಅದನ್ನು ತಿನ್ನುವುದಕ್ಕಿಂತ ಹೆಚ್ಚು ಮುಖ್ಯವಾಗುತ್ತೆ. ಈ ಬಗ್ಗೆ ನೀವು ಸರಿಯಾಗಿ ಗಮನ ಹರಿಸಿ, ಆರೋಗ್ಯಕರ ಆಹಾರ ಸೇವನೆ ಮಾಡೋದ್ರಿಂದ ನೀವು ಕೂಡ ಆರೋಗ್ಯದಿಂದ (Healthy)ಇರಲು ಸಾಧ್ಯವಾಗುತ್ತೆ. ಹೊಟ್ಟೆ ಕೂಡ ತುಂಬಿರುತ್ತೆ.
 

Latest Videos

click me!