ಎಲ್ಲರ ಮನೆಯ ಅಡುಗೆಮನೆಯಲ್ಲೂ ಸ್ಥಾನ ಪಡೆಯುವ ತರಕಾರಿ ಒಂದಿದ್ದರೆ ಅದು ಆಲೂಗಡ್ಡೆ. ಏನೂ ಇಲ್ಲದೇ ಇದ್ದರೂ, ಕೊನೆಗೆ ರುಚಿಕರವಾಗಿ ಆಲೂಗಡ್ಡೆ ಪಲ್ಯ ಮಾಡಿದರೂ ಒಂದೊತ್ತಿನ ಊಟ ನೆಮ್ಮದಿಯಿಂದ ಆಗುತ್ತದೆ.
ಆದರೆ, ಆಲೂಗಡ್ಡೆ ಮೊಳಕೆ ಒಡೆದಾಗ ಎಂದಿನ ಟೇಸ್ಟ್ ಇರೋದಿಲ್ಲ. ಅದನ್ನು ಹಾಗೇ ಬಿಟ್ಟರೆ ಕೊಳೆತು ಹೋಗುತ್ತದೆ. ಆದರೆ, ಆಲೂಗಡ್ಡೆ ಮೊಳಕೆಯೊಡೆಯದೇ ತಾಜಾವಾಗಿ ಹಲವು ದಿನಗಳ ಕಾಲ ಶೇಖರಿಸಿಡುವ ವಿಧಾನ ಇಲ್ಲಿದೆ.
ಆಲೂಗಡ್ಡೆಯನ್ನು ತಂಪಾಗಿರುವ, ಗಾಳಿ ಹಾಗೂ ಬೆಳಕು ಬರುವ ಜಾಗದಲ್ಲಿ ಇಡಬೇಕು. ಸಾಧ್ಯವಾದಷ್ಟು ಫ್ರಿಜ್‌ನಲ್ಲಿ ಇಡುವುದಕ್ಕೆ ಹೋಗಬೇಡಿ. ತುಂಬಾ ತಂಪನೆಯ ವಾತಾವರಣ ಪಿಷ್ಟವನ್ನು ಸಕ್ಕರೆಯಾಗಿ ಪರಿವರ್ತಿಸುತ್ತದೆ, ಇದರಿಂದ ಆಲೂಗಡ್ಡೆಯ ರುಚಿ ಬದಲಾಗುತ್ತದೆ.
ಆಲೂಗಡ್ಡೆಗಳನ್ನು ಸೂರ್ಯನ ಬೆಳಕಿನಿಂದ ಸಾಧ್ಯವಾದಷ್ಟು ದೂರವಿಡುವುದು ಒಳ್ಳೆಯದು. ಹೆಚ್ಚಿನ ಬೆಳಕು ಹಸಿರೀಕರಣವನ್ನು ಪ್ರಚೋದಿಸಿ ಕ್ಲೋರೊಫಿಲ್ ಅನ್ನು ಉತ್ಪಾದಿಸುತ್ತದೆ. ಹಸಿರುಗೊಳಿಸುವಿಕೆಯು ಆಲೂಗಡ್ಡೆಯನ್ನು ಕಹಿಯಾಗಿಸುತ್ತದೆ, ಇದರಿಂದ ರುಚಿಯು ಬದಲಾಗುತ್ತದೆ.
ಕಪ್ಪಾದ ಕಲೆ ಇರೋ ಹಾಳಾದ ಆಲೂಗಡ್ಡೆಯನ್ನು ಖರೀದಿಸಬೇಡಿ. ಮಾರುಕಟ್ಟೆಯಿಂದ ತಂದ ಈ ತರಕಾರಿಯನ್ನು ತಂಪಾದ, ಶುಷ್ಕ ಮತ್ತು ಗಾಢವಾದ ಸ್ಥಳದಲ್ಲಿ ಇಡಬೇಕು.
ಆಲೂಗಡ್ಡೆಯಲ್ಲಿ ಮೊಳಕೆಯೊಡೆಯುವುದನ್ನು ತಪ್ಪಿಸಲು ಅತ್ಯುತ್ತಮ ಮಾರ್ಗವೆಂದರೆ ಅವುಗಳನ್ನು ರಾಶಿ ರಾಶಿ ತಂದಿಡೋದನ್ನು ತಪ್ಪಿಸುವುದು. ಅವಶ್ಯಕತೆಗಳಿಗೆ ಅನುಗುಣವಾಗಿ ಖರೀದಿಸುವುದು ಉತ್ತಮ.