ಬಾಳೆ ಎಲೆಯಲ್ಲಿ ಊಟ ಬಡಿಸುವುದೇಕೆ?
ಬಾಳೆ ಎಲೆಯಲ್ಲಿ ಊಟ ಮಾಡುವುದು ವಿಷ ನಿವಾರಣೆ ಮಾತ್ರವಲ್ಲ, ಇತರ ಲಾಭಗಳನ್ನೂ ಹೊಂದಿದೆ. ಬಾಳೆ ಎಲೆ ಊಟ ಮಾಡಲು ಅನುಕೂಲಕರವಾಗಿರುವುದರ ಜೊತೆಗೆ ಅದರಲ್ಲಿ ವಿವಿಧ ಪೋಷಕಾಂಶಗಳಿವೆ. ಅದರಲ್ಲಿ ನಮ್ಮ ದೇಹಕ್ಕೆ ಅಗತ್ಯವಾದ ಆಂಟಿ ಆಕ್ಸಿಡೆಂಟ್ ಹೇರಳವಾಗಿದೆ. ಬಾಳೆ ಎಲೆಯಲ್ಲಿ ಆಗಾಗ್ಗೆ ಊಟ ಮಾಡುವುದರಿಂದ ಜೀವಕೋಶಗಳ ನಾಶವನ್ನು ತಡೆದು ವೃದ್ಧಾಪ್ಯವನ್ನು ವಿಳಂಬಗೊಳಿಸುತ್ತದೆ. ಬಾಳೆ ಎಲೆಯಲ್ಲಿ ಬಿಸಿ ಊಟ ಮಾಡುವುದರಿಂದ ಮಾನಸಿಕ ಸ್ಥಿತಿ ಸಮತೋಲನಗೊಂಡು ಒತ್ತಡ ಕಡಿಮೆಯಾಗುತ್ತದೆ. ಹೃದ್ರೋಗದ ಅಪಾಯ ಕಡಿಮೆಯಾಗುತ್ತದೆ.