ಅರ್ಧ ಬೇಯಿಸಿದ ಮೊಟ್ಟೆ ತಿನ್ನುವುದರಿಂದ ಆಗುವ ಪ್ರಯೋಜನಗಳು
ಪೋಷಕಾಂಶಗಳು ಹೆಚ್ಚಿರುತ್ತವೆ
ಅರ್ಧ ಬೇಯಿಸಿದ ಮೊಟ್ಟೆಯಲ್ಲಿ ನಮ್ಮ ಶರೀರಕ್ಕೆ ಬೇಕಾದ ಖನಿಜಗಳು, ಪ್ರೋಟೀನ್‌ಗಳು, ವಿವಿಧ ಜೀವಸತ್ವಗಳು ಹೇರಳವಾಗಿರುತ್ತವೆ. ತಜ್ಞರ ಪ್ರಕಾರ.. ಅರ್ಧ ಬೇಯಿಸಿದ ಮೊಟ್ಟೆಯಲ್ಲಿ ಹಲವು ಆರೋಗ್ಯ ಪ್ರಯೋಜನಗಳಿವೆ. ಯಾಕಂದ್ರೆ ಈ ಮೊಟ್ಟೆಯಲ್ಲಿ ಪೋಷಕಾಂಶಗಳು ಚೆನ್ನಾಗಿರುತ್ತವೆ. ಅದೇ ನಾವು ಮೊಟ್ಟೆಯನ್ನು ಪೂರ್ತಿ ಬೇಯಿಸಿದರೆ ಪೋಷಕಾಂಶಗಳ ಪ್ರಮಾಣ ಕಡಿಮೆಯಾಗುತ್ತದೆ.
ಫೈಬರ್, ಪ್ರೋಟೀನ್‌ಗಳು ಹೆಚ್ಚಿರುತ್ತವೆ
ಪೂರ್ತಿ ಬೇಯಿಸಿದ ಮೊಟ್ಟೆಗಿಂತ ಅರ್ಧ ಬೇಯಿಸಿದ ಮೊಟ್ಟೆಯಲ್ಲಿ ಪ್ರೋಟೀನ್‌ಗಳು, ಫೈಬರ್ ಹೆಚ್ಚಿರುತ್ತದೆ. ಇವು ನಮ್ಮ ಶರೀರಕ್ಕೆ ತುಂಬಾ ಒಳ್ಳೆಯದು. ವಿಶೇಷವಾಗಿ ಚಳಿಗಾಲದಲ್ಲಿ ಅರ್ಧ ಬೇಯಿಸಿದ ಮೊಟ್ಟೆ ತಿಂದ್ರೆ ಫೈಬರ್, ಪ್ರೋಟೀನ್‌ಗಳು ಚೆನ್ನಾಗಿ ಸಿಗುತ್ತವೆ. ನಿಜಕ್ಕೂ ಈ ಎರಡೂ ಚಳಿಗಾಲದಲ್ಲಿ ನಮ್ಮ ಶರೀರಕ್ಕೆ ತುಂಬಾ ಅವಶ್ಯಕ. ಇವು ನಮ್ಮ ಜೀರ್ಣಕ್ರಿಯೆಯನ್ನು ಚೆನ್ನಾಗಿಡಲು ಸಹಾಯ ಮಾಡುತ್ತವೆ.