ನೇರಳೆ ಹಣ್ಣು ಕೇವಲ ಹಣ್ಣಲ್ಲ, ಆಯುರ್ವೇದದ ಅಮೃತ! ನಿಮ್ಮನೆ ಹತ್ತಿರದ ಮಾರ್ಕೆಟ್‌ಗೆ ಬಂದರೆ ತಿನ್ನದೇ ಬಿಡಬೇಡಿ!

Published : Jun 05, 2026, 07:43 PM IST

ನೇರಳೆ ಹಣ್ಣು, ಅದರ ಬೀಜ, ಎಲೆ ಮತ್ತು ತೊಗಟೆಯು ಆಯುರ್ವೇದದಲ್ಲಿ ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿದೆ. ಪ್ರಾಚೀನ ಭಾರತವನ್ನು 'ಜಂಬೂದ್ವೀಪ' ಎಂದು ಕರೆಯಲು ಈ ಹಣ್ಣೇ ಕಾರಣವಾಗಿತ್ತು. ಇದನ್ನು ಆಯುರ್ವೇದದ ಅಮೃತ ಎಂದು ಏಕೆ ಕರೆಯುತ್ತಾರೆ? ನೀವೇ ನೋಡಿ.

PREV
16
ನೇರಳೆ ಹಣ್ಣು ಆಯುರ್ವೇದದ ಅಮೃತ

ನೇರಳೆ ಹಣ್ಣನ್ನು ಸಂಸ್ಕೃತದಲ್ಲಿ 'ಜಂಬೂ' ಎಂದು ಕರೆಯಲಾಗುತ್ತದೆ. ಇದರ ಹಣ್ಣು ಮಾತ್ರವಲ್ಲದೆ ಬೀಜ, ಎಲೆ, ಮತ್ತು ಮರದ ತೊಗಟೆಯೂ ಔಷಧೀಯ ಗುಣಗಳಿಂದ ಕೂಡಿದೆ.

ಇದು ರಕ್ತ ಶುದ್ಧೀಕರಣ ಮತ್ತು ಮಧುಮೇಹ ನಿಯಂತ್ರಣಕ್ಕೆ ಜಗತ್ತಿನಲ್ಲೇ ಪ್ರಸಿದ್ಧವಾದ ನೈಸರ್ಗಿಕ ಹಣ್ಣು.

26
ಮಧುಮೇಹಿಗಳಿಗೆ ಇದು 'ರಾಮಬಾಣ'

ಮಧುಮೇಹ (Diabetes) ನಿಯಂತ್ರಣದಲ್ಲಿ ನೇರಳೆ ಬೀಜದ ಪುಡಿ ಪ್ರಮುಖ ಪಾತ್ರ ವಹಿಸುತ್ತದೆ.

ಒಣಗಿಸಿದ ನೇರಳೆ ಬೀಜದ ಪುಡಿಯನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ ಎಂದು ಆಯುರ್ವೇದ ಹೇಳುತ್ತದೆ.

36
ಜೀರ್ಣಕ್ರಿಯೆ ಮತ್ತು ರಕ್ತಹೀನತೆಗೆ ಮುಕ್ತಿ

ನೇರಳೆಯಲ್ಲಿ ಹೇರಳವಾದ ಕಬ್ಬಿಣಾಂಶ (Iron) ಮತ್ತು ವಿಟಮಿನ್ ಸಿ ಇರುವುದರಿಂದ ರಕ್ತಹೀನತೆಯನ್ನು (Anemia) ಹೋಗಲಾಡಿಸುತ್ತದೆ.

ಊಟದ ನಂತರ ಸ್ವಲ್ಪ ನೇರಳೆ ಹಣ್ಣು ತಿನ್ನುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ ಮತ್ತು ಅಜೀರ್ಣ, ಹೊಟ್ಟೆನೋವಿನಂತಹ ಸಮಸ್ಯೆಗಳು ದೂರವಾಗುತ್ತವೆ.

46
ಹಲ್ಲುಗಳ ಆರೋಗ್ಯ ಮತ್ತು ಹೊಳೆಯುವ ಚರ್ಮ

ಇದರ ಎಲೆಗಳನ್ನು ಅಗಿಯುವುದರಿಂದ ಬಾಯಿಯ ದುರ್ಗಂಧ ದೂರವಾಗುತ್ತದೆ. ತೊಗಟೆಯ ಪುಡಿಯಿಂದ ಹಲ್ಲುಜ್ಜಿದರೆ ಒಸಡುಗಳು ಗಟ್ಟಿಯಾಗುತ್ತವೆ.

ನೇರಳೆ ತೊಗಟೆಯ ಕಷಾಯದಿಂದ ಮುಖ ತೊಳೆಯುವುದರಿಂದ ಮೊಡವೆಗಳು ಕಡಿಮೆಯಾಗಿ ಚರ್ಮದ ಕಾಂತಿ ಹೆಚ್ಚುತ್ತದೆ.

56
ಸೇವಿಸುವ ಮುನ್ನ ಈ ಎಚ್ಚರಿಕೆಗಳು ಅತ್ಯಗತ್ಯ!

ನೇರಳೆ ಹಣ್ಣನ್ನು ಎಂದಿಗೂ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಡಿ, ಇದು ಅಸಿಡಿಟಿಗೆ ಕಾರಣವಾಗಬಹುದು.

ನೇರಳೆ ಹಣ್ಣು ತಿಂದ ತಕ್ಷಣ ಹಾಲು ಅಥವಾ ಮೊಸರನ್ನು ಸೇವಿಸಬಾರದು. ದಿನಕ್ಕೆ 100-150 ಗ್ರಾಂ ಮಿತಿಯಲ್ಲಿ ತಿನ್ನುವುದು ಉತ್ತಮ.

66
ಭಾರತದ ಹೆಮ್ಮೆ 'ಜಂಬೂದ್ವೀಪ'ದ ಕಥೆ

ಪ್ರಾಚೀನ ಕಾಲದಲ್ಲಿ ಭಾರತದಲ್ಲಿ ನೇರಳೆ ಮರಗಳು ಹೇರಳವಾಗಿದ್ದರಿಂದ ಭಾರತಕ್ಕೆ 'ಜಂಬೂದ್ವೀಪ' ಎಂಬ ಹೆಸರು ಬಂದಿತ್ತು.

ಉಪ್ಪು (ಸೈಂಧವ ಲವಣ) ಸೇರಿಸಿ ನೇರಳೆ ಹಣ್ಣು ತಿನ್ನುವ ಪದ್ಧತಿಯು ರುಚಿಯ ಜೊತೆಗೆ ಜೀರ್ಣಕ್ರಿಯೆಯನ್ನು ಸುಧಾರಿಸುವ ಪುರಾತನ ಸಂಪ್ರದಾಯವಾಗಿದೆ.

ಲೇಖನ ಕೃಪೆ: ಡಾ. ರವಿಕಿರಣ ಪಟವರ್ಧನ, ಶಿರಸಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories