Is Egg Vegetarian: ಮೊಟ್ಟೆ ಸಸ್ಯಾಹಾರಿಯೇ ಅಥವಾ ಮಾಂಸಾಹಾರಿಯೇ ಎಂಬ ಗೊಂದಲ ನಿಮಗಿದೆಯೇ? ಹಾಗಿದ್ರೆ ಈ ಮಾಹಿತಿ ನಿಮಗಾಗಿ. ನೀವು ವೆಜಿಟೇರಿಯನ್ ಆಗಿದ್ದು, ಮೊಟ್ಟೆ ತಿನ್ನಬೇಕೆ? ಬೇಡವೇ? ಎನ್ನುವ ಯೋಚನೆಯಲ್ಲಿ ನೀವಿದ್ದರೆ, ಇಲ್ಲಿದೆ ಆ ಕುರಿತು ಸಂಪೂರ್ಣ ಮಾಹಿತಿ.
ಪ್ರತಿಯೊಂದು ಮೊಟ್ಟೆಯಲ್ಲೂ ಒಂದು ಮರಿ ಇರುತ್ತದೆ ಎಂದು ನೀವು ನಂಬುತ್ತೀರಾ? ಹಾಗಿದ್ದಲ್ಲಿ, ಈ ಮಾಹಿತಿ ನಿಮಗೆ ಅಚ್ಚರಿ ನೀಡುತ್ತದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಹೆಚ್ಚಿನ ಮೊಟ್ಟೆಗಳು ಮರಿ ಎಂದಿಗೂ ಹೊರಬರುವುದಿಲ್ಲ. ಅದಕ್ಕಾಗಿಯೇ ಜನರು ಇನ್ನೂ ಮೊಟ್ಟೆಗಳು ಸಸ್ಯಾಹಾರಿಯೋ ಅಥವಾ ಮಾಂಸಾಹಾರಿಯೋ ಎಂಬ ಸಂಶಯದಲ್ಲಿದ್ದಾರೆ. ನಮ್ಮ ದೇಶದಲ್ಲಿ, ಮೊಟ್ಟೆ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿರುತ್ತದೆ. ಒಂದು ಕಡೆ ಕೋಳಿಗಳು ಮೊಟ್ಟೆಗಳನ್ನು ಇಡುವುದರಿಂದ ಅವು ಮಾಂಸಾಹಾರ ಎನ್ನುತ್ತಾರೆ. ಮತ್ತೊಂದೆಡೆ, ಜಿಮ್‌ಗೆ ಹೋಗುವವರು ಮತ್ತು ಹೊಸ ಪೀಳಿಗೆ ಅವುಗಳನ್ನು ಸೂಪರ್‌ಫುಡ್ ಎನ್ನುತ್ತಾರೆ. ಇನ್ನೂ ಕೆಲವರು ಮೊಟ್ಟೆ ಸಸ್ಯಹಾರಿ ಎನ್ನುತ್ತಾರೆ.
26
ಮೊಟ್ಟೆ ಸಸ್ಯಾಹಾರಿಯೋ ಅಥವಾ ಮಾಂಸಾಹಾರಿಯೋ?
ವೈಜ್ಞಾನಿಕವಾಗಿ, ಫಲವತ್ತಾಗಿಸದ ಮೊಟ್ಟೆಯಲ್ಲಿ ಭ್ರೂಣ ಅಥವಾ ಯಾವುದೇ ಜೀವಂತ ರಚನೆ ಇರುವುದಿಲ್ಲ. ಈ ಕಾರಣಕ್ಕಾಗಿ, ಕೆಲವರು ಇದನ್ನು ಸಸ್ಯಾಹಾರಿ ಎಂದು ಪರಿಗಣಿಸುತ್ತಾರೆ. ಆದಾಗ್ಯೂ, ಧಾರ್ಮಿಕ, ಸಾಂಸ್ಕೃತಿಕ ಮತ್ತು ವೈಯಕ್ತಿಕ ನಂಬಿಕೆಗಳ ಆಧಾರದ ಮೇಲೆ ಅನೇಕ ಜನರು ಇದನ್ನು ಇನ್ನೂ ಮಾಂಸಾಹಾರಿ ಎಂದು ಪರಿಗಣಿಸುತ್ತಾರೆ. ಪ್ರತಿಯೊಂದು ಮೊಟ್ಟೆಯು ಮರಿಯನ್ನು ಉತ್ಪಾದಿಸಬಹುದೇ? ಎಂದು ಕೇಳಿದರೆ ಅದಕ್ಕೆ ಉತ್ತರ ಖಂಡಿತಾ ಇಲ್ಲ. ವಾಣಿಜ್ಯಿಕವಾಗಿ ಲಭ್ಯವಿರುವ ಹೆಚ್ಚಿನ ಮೊಟ್ಟೆಗಳು ಬಹುತೇಕ 100% ಫಲವತ್ತಾಗಿರದವು ಮತ್ತು ಮರಿಯನ್ನು ಉತ್ಪಾದಿಸಲು ಸಾಧ್ಯವಿಲ್ಲ. ಸರಿಯಾದ ತಾಪಮಾನ ಮತ್ತು ಪರಿಸ್ಥಿತಿಗಳನ್ನು ಪಡೆದರೆ ಮಾತ್ರ ಮರಿಯು ಫಲವತ್ತಾದ ಮೊಟ್ಟೆಯಿಂದ ಹೊರಬರಬಹುದು.
36
ಮೊಟ್ಟೆಗಳನ್ನು ಸಸ್ಯಾಹಾರಿ ಎಂದು ಪರಿಗಣಿಸುವವರು ಏನು ಹೇಳುತ್ತಾರೆ?
ವೈಜ್ಞಾನಿಕ ಮತ್ತು ತಾರ್ಕಿಕ ದೃಷ್ಟಿಕೋನದಿಂದ, ಮೊಟ್ಟೆಗಳನ್ನು ಸಸ್ಯಾಹಾರಿ ಎಂದು ಪರಿಗಣಿಸಲು ಒಂದು ಸರಳ ಕಾರಣವಿದೆ. ಹಸು ಅಥವಾ ಎಮ್ಮೆಯಿಂದ ಹಾಲು ಬರುತ್ತದೆ ಮತ್ತು ಅದಕ್ಕಾಗಿ ಪ್ರಾಣಿಯನ್ನು ಕೊಲ್ಲುವುದಿಲ್ಲ, ಕೋಳಿ ಕೂಡ ಮೊಟ್ಟೆಗಳನ್ನು ಇಡುತ್ತದೆ. ಭಾರತೀಯ ಸಂಪ್ರದಾಯ ಮತ್ತು ಧಾರ್ಮಿಕ ಚಿಂತನೆಯಲ್ಲಿ, ಮೊಟ್ಟೆಗಳನ್ನು ಮಾಂಸ ಎಂದು ವರ್ಗೀಕರಿಸಲಾಗಿದೆ ಏಕೆಂದರೆ ಅವು ಪಕ್ಷಿಗಳ ದೇಹದ ಭಾಗವಾಗಿದೆ. ಆದಾಗ್ಯೂ, ಪಾಶ್ಚಿಮಾತ್ಯ ದೇಶಗಳಲ್ಲಿ, ಅವುಗಳನ್ನು ಮಾಂಸವಲ್ಲ, ಪ್ರಾಣಿ ಉತ್ಪನ್ನವೆಂದು ಪರಿಗಣಿಸಲಾಗುತ್ತದೆ. ಅಲ್ಲಿ, ಅವುಗಳನ್ನು ಸಸ್ಯಾಹಾರಿ ಆಹಾರದ ಭಾಗವೆಂದು ಪರಿಗಣಿಸುವುದು ಸಾಮಾನ್ಯ.
ಭಾರತದಲ್ಲಿ ಮೊಟ್ಟೆಗಳನ್ನು ಸಾಮಾನ್ಯವಾಗಿ ಮಾಂಸಾಹಾರಿ ಎಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಹೆಚ್ಚಿನ ಸಸ್ಯಾಹಾರಿ ಕುಟುಂಬಗಳು ಅವುಗಳನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದಿಲ್ಲ. ಆದರೆ, ಕೆಲವು ಜನರು ತಮ್ಮನ್ನು ತಾವು "ಎಗಿಟೇರಿಯನ್" ಅಥವಾ "ಓವೋ ವೆಜಿಟೇರಿಯನ್" ಎಂದು ಪರಿಗಣಿಸುತ್ತಾರೆ ಮತ್ತು ಮೊಟ್ಟೆಗಳನ್ನು ತಿನ್ನುತ್ತಾರೆ.
56
ಮೊಟ್ಟೆ ತಿನ್ನದೆ ದೇಹವನ್ನು ನಿರ್ಮಿಸಬಹುದೇ?
ಖಂಡಿತ. ಸೋಯಾಬೀನ್, ತೋಫು, ಪನೀರ್, ಮಸೂರ, ಹಾಲು, ಮೊಸರು, ಕಡಲೆ, ಬೀನ್ಸ್ ಮತ್ತು ಇತರ ಹೆಚ್ಚಿನ ಪ್ರೋಟೀನ್ ಸಸ್ಯಾಹಾರಿ ಆಹಾರಗಳಿಂದ ಮಸಲ್ ಬಿಲ್ಡ್ ಮಾಡಬಹುದು ಅನೇಕ ಕ್ರೀಡಾಪಟುಗಳು ಮತ್ತು ಫಿಟ್ನೆಸ್ ಫ್ರೀಕ್ಸ್ ಸಂಪೂರ್ಣವಾಗಿ ಸಸ್ಯಾಹಾರಿ ಆಹಾರದ ಸೇವಿಸಿ ಮಸಲ್ ಬಿಲ್ಡ್ ಮಾಡುತ್ತಾರೆ.
66
ಸಸ್ಯಾಹಾರಿ ಮೊಟ್ಟೆಗಳು
ಅಂದ ಹಾಗೆ ಇತ್ತೀಚಿನ ದಿನಗಳಲ್ಲಿ ಸಸ್ಯಾಹಾರಿ ಮೊಟ್ಟೆಗಳು ಕೂಡ ಮಾರ್ಕೆಟ್ ನಲ್ಲಿ ಲಭ್ಯವಿದೆ. ಇವು ಸಂಪೂರ್ಣವಾಗಿ ಸಸ್ಯಹಾರಿಯಾಗಿವೆ. ಸಸ್ಯಾಹಾರಿ ಮೊಟ್ಟೆಗಳನ್ನು ಸಾಮಾನ್ಯವಾಗಿ ಮುಂಗ್ ಬೀನ್ಸ್, ಸೋಯಾ, ಚಿಯಾ ಬೀಜಗಳು ಮತ್ತು ಇತರ ಸಸ್ಯಗಳಿಂದ ತಯಾರಿಸಲಾಗುತ್ತದೆ. ಅವು ಯಾವುದೇ ಪ್ರಾಣಿ ಅಥವಾ ಪಕ್ಷಿ ಉತ್ಪನ್ನಗಳನ್ನು ಹೊಂದಿರುವುದಿಲ್ಲ, ಇದು 100% ಸಸ್ಯಾಹಾರಿಯಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.