ಮಂಗಳೂರು ಶೈಲಿಯಲ್ಲಿ ಬೆಣ್ಣೆಯಷ್ಟು ಮೃದುವಾದ ಸ್ಪಾಂಜಿ ಇಡ್ಲಿ ತಯಾರಿಸುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ಚಿಕ್ಕ ಬಟ್ಟಲುಗಳಲ್ಲಿ ಹಿಟ್ಟು ಹಾಕಿ ಸ್ಟೀಮ್ ಮಾಡಿದರೆ ರುಚಿಯಾದ ಇಡ್ಲಿ ಸಿದ್ಧವಾಗುತ್ತದೆ. ಬಾಳೆಎಲೆ ಬಳಸಿಯೂ ಮಂಗಳೂರು ಶೈಲಿಯ ಇಡ್ಲಿ ಮಾಡಬಹುದಾಗಿದೆ.
ರುಚಿಯಾದ ಮೃದುವಾದ ಇಡ್ಲಿ ಮಾಡೋದು ಸಹ ಒಂದು ಕಲೆ. ಮಂಗಳೂರು ಭಾಗದಲ್ಲಿ ಇಡ್ಲಿಗಳನ್ನು ಚಿಕ್ಕ ಚಿಕ್ಕ ಬಟ್ಟಲುಗಳಲ್ಲಿ ತಯಾರಿಸುತ್ತಾರೆ. ಇಂದು ನಾವು ನಿಮಗೆ ಮಂಗಳೂರು ಶೈಲಿಯಲ್ಲಿ ಬೆಣ್ಣೆಯಷ್ಟು ಮೃದುವಾದ ಸ್ಪಾಂಜಿ ಇಡ್ಲಿ ಮಾಡೋದು ಹೇಗೆ ಎಂದು ಹೇಳುತ್ತಿದ್ದೇವೆ.
25
ಬೇಕಾಗುವ ಸಾಮಾಗ್ರಿಗಳು
ಸೋನಾ ಮಸೂರಿ ಅಕ್ಕಿ: 2 ಕಪ್ (ಕಟ್ ಸಾಂಬಾರ್ ಅಕ್ಕಿ), ದೋಸೆ ಅಕ್ಕಿ: 1 ಕಪ್, ಉದ್ದಿನಬೇಳೆ: 2 ಟೀ ಸ್ಪೂನ್, ಸಬ್ಬಕ್ಕಿ: 2 ಟೋ ಸ್ಪೂನ್, ಚಿಟಿಕೆಯಷ್ಟು ಯೀಸ್ಟ್, ಅರ್ಧ ಟೀ ಸ್ಪೂನ್ ಸಕ್ಕರೆ, ಅಡುಗೆ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು
35
ಮಾಡುವ ವಿಧಾನ
ಮೊದಲಿಗೆ ಸೋನಾ ಮಸೂರಿ ಮತ್ತು ದೋಸೆ ಅಕ್ಕಿಯನ್ನು ಮೇಲೆ ಹೇಳಿದ ಪ್ರಮಾಣದಲ್ಲಿ ತೆಗೆದುಕೊಂಡು ತೊಳೆದುಕೊಳ್ಳಿ. ನಂತರ ನೀರು ಸೇರಿಸಿ ಎತ್ತಿಟ್ಟುಕೊಳ್ಳಿ. ಮತ್ತೊಂದು ಬೌಲ್‌ನಲ್ಲಿ ಉದ್ದಿನಬೇಳೆ ಮತ್ತು ಸಬ್ಬಕ್ಕಿಯನ್ನು ಸಹ ತೊಳೆದುಕೊಂಡು ನೆನೆಸಿಟ್ಟುಕೊಳ್ಳಿ. ಕನಿಷ್ಠ 6 ರಿಂದ 7 ಗಂಟೆಗಳ ಕಾಲ ನೆನೆಸಿಟ್ಟುಕೊಳ್ಳಬೇಕಾಗುತ್ತದೆ. ನಂತರ ಎರಡನ್ನೂ ಸಹ ಪ್ರತ್ಯೇಕವಾಗಿ ನುಣ್ಣಗೆ ರುಬ್ಬಿಕೊಳ್ಳಿ.
ಈಗ ರುಬ್ಬಿಕೊಂಡಿರುವ ಎರಡು ಹಿಟ್ಟನ್ನು ಒಂದು ಪಾತ್ರೆಗೆ ಸೇರಿಸಿಕೊಂಡು ಮಿಶ್ರಣ ಮಾಡಿಕೊಂಡು ಚಿಟಿಕೆಯಷ್ಟು ಯೀಸ್ಟ್ ಮತ್ತು ಸಕ್ಕರೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈಗ ಪಾತ್ರೆಯನ್ನು ಮುಚ್ಚಿ ಕನಿಷ್ಠ 6 ರಿಂದ 7 ಗಂಟೆ ಎತ್ತಿಟ್ಟುಕೊಳ್ಳಬೇಕಾಗುತ್ತದೆ.
55
ಮಂಗಳೂರು ಇಡ್ಲಿ ಮಾಡುವಾಗ ಈ ವಿಷಯ ಗಮನದಲ್ಲಿರಲಿ
ಇಡ್ಲಿ ಮಾಡುವಾಗ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಳ್ಳಿ. ಈಗ ಚಿಕ್ಕ ಚಿಕ್ಕ ಕಪ್‌ನೊಳಗೆ ಒಂದು ಹನಿ ಎಣ್ಣೆ ಹಾಕಿ ಸವರಿಕೊಳ್ಳಿ. ನಂತರ ಕಪ್‌ನೊಳಗೆ ಮುಕ್ಕಾಲು ಭಾಗದಷ್ಟು ಹಿಟ್ಟನ್ನು ಹಾಕಿಕೊಳ್ಳಬೇಕು. ನಂತರ ಹಿಟ್ಟು ಹಾಕಿಕೊಂಡಿರುವ ಕಪ್‌ಗಳನ್ನು ಸ್ಪೀಮರ್ ಪಾತ್ರೆಯಲ್ಲಿಟ್ಟು 15 ನಿಮಿಷ ಸ್ಪೀಮ್ ಮಾಡಿಕೊಂಡ್ರೆ ಸ್ಪಾಂಜಿ ಇಡ್ಲಿ ರೆಡಿಯಾಗುತ್ತದೆ. (ಸ್ಪೀಮ್‌ನಿಂದ ಬಿಸಿಯಾಗಿರೋ ಕಪ್ ಸಂಪೂರ್ಣವಾಗಿ ತಣ್ಣಾಗದ ನಂತರವೇ ಇಡ್ಲಿಯನ್ನು ತೆಗೆದ್ರೆ ಮಾತ್ರ ಕರೆಕ್ಟ್ ಶೇಪ್‌ನಲ್ಲಿ ಬರುತ್ತದೆ)
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.