ಚಿಕನ್ ಸಾರು ಮಾಡಿದಾಗಲೆಲ್ಲಾ ಒಂದೇ ರುಚಿ ಬರ್ತಿಲ್ವಾ? ಎಷ್ಟೇ ಮಸಾಲೆ ಹಾಕಿದರೂ, ಚೆನ್ನಾಗಿ ಮಾಡಿದರೂ ಟೇಸ್ಟ್ ಸಿಗ್ತಿಲ್ವಾ? ಹಾಗಾದರೆ, ನೀವು ಮಾಡುವ ಈ ಸಣ್ಣ ತಪ್ಪುಗಳೇ ಇದಕ್ಕೆ ಕಾರಣ.
ಭಾನುವಾರ ಬಂದರೆ ಸಾಕು, ಎಲ್ಲರಿಗೂ ಬಿಸಿ ಬಿಸಿ ಚಿಕನ್ ತಿನ್ನಲು ಇಷ್ಟ. ಆದರೆ, ಚಿಕನ್ ಅನ್ನು ರುಚಿಯಾಗಿ ಮಾಡುವುದು ಎಲ್ಲರಿಗೂ ಬರುವುದಿಲ್ಲ. ಸ್ವಲ್ಪ ಹೆಚ್ಚು ಕಮ್ಮಿಯಾದರೂ ಚಿಕನ್ ಗಟ್ಟಿಯಾಗಿ, ಡ್ರೈ ಆಗಿಬಿಡುತ್ತದೆ. ಅಥವಾ ಮೇಲೆ ಬೆಂದಂತೆ ಕಂಡರೂ ಒಳಗೆ ಸರಿಯಾಗಿ ಬೇಯುವುದಿಲ್ಲ. ನಮಗೆ ಗೊತ್ತಿಲ್ಲದೆ ಮಾಡುವ ಕೆಲವು ತಪ್ಪುಗಳಿಂದಲೇ ಚಿಕನ್ ಸಾರಿನ ರುಚಿ ಹಾಳಾಗುತ್ತದೆ. ಆ ತಪ್ಪುಗಳು ಯಾವುವು ಅಂತ ಈಗ ನೋಡೋಣ...
26
1. ಫ್ರೋಜನ್ ಚಿಕನ್ ಬಳಸುವುದು
ತಾಜಾ ಚಿಕನ್‌ನಲ್ಲಿ ತೇವಾಂಶ ಹೆಚ್ಚಿರುತ್ತದೆ. ಇದನ್ನು ಬೇಯಿಸಿದಾಗ ಜ್ಯೂಸಿಯಾಗಿ ಬರುತ್ತದೆ. ಫ್ರೋಜನ್ ಅಥವಾ ಪ್ಯಾಕ್ ಮಾಡಿದ ಚಿಕನ್ ತನ್ನ ನೈಸರ್ಗಿಕ ತೇವಾಂಶವನ್ನು ಕಳೆದುಕೊಂಡು ಡ್ರೈ ಆಗುತ್ತದೆ. ಆದಷ್ಟು ಫ್ರೆಶ್ ಚಿಕನ್ ಬಳಸಲು ಪ್ರಯತ್ನಿಸಿ.
2. ಬೋನ್ ಲೆಸ್ ಚಿಕನ್..
ಬರೀ ಬೋನ್ ಲೆಸ್ ಪೀಸ್‌ಗಳಿಗಿಂತ ಮೂಳೆ ಇರುವ ಭಾಗಗಳಲ್ಲಿ (ಥೈಸ್) ಕೊಬ್ಬಿನಂಶ ಸರಿಯಾಗಿರುತ್ತದೆ. ಇದು ಬೇಯುವಾಗ ಕರಗಿ, ಮಾಂಸಕ್ಕೆ ಒಳ್ಳೆ ಫ್ಲೇವರ್ ಮತ್ತು ತೇವಾಂಶ ಕೊಡುತ್ತದೆ. ಬರೀ ಬೋನ್ ಲೆಸ್ ಮಾಡಿದರೆ ಅಷ್ಟು ರುಚಿ ಇರಲ್ಲ.
36
3. ಪಾತ್ರೆಯ ಮೇಲೆ ಮುಚ್ಚಳ ಮುಚ್ಚದಿರುವುದು
ಚಿಕನ್ ಬೇಯುತ್ತಿರುವಾಗ ಪಾತ್ರೆಯ ಮೇಲೆ ಕಡ್ಡಾಯವಾಗಿ ಮುಚ್ಚಳ ಮುಚ್ಚಬೇಕು. ಹಬೆ ಹೊರಹೋಗದಂತೆ ಒಳಗೆ ಲಾಕ್ ಆಗುವುದರಿಂದ ಆ ತೇವಾಂಶದಿಂದ ಚಿಕನ್ ಒಣಗದೆ, ತುಂಬಾ ಸಾಫ್ಟ್ ಆಗಿ ಬೇಯುತ್ತದೆ.
ಅವಸರದಲ್ಲಿ ಚಿಕನ್ ಅನ್ನು ನೆನೆಸದೆ ನೇರವಾಗಿ ಬೇಯಿಸಿಬಿಡುತ್ತಾರೆ. ಚಿಕನ್ ಅನ್ನು ಉಪ್ಪು, ಮೊಸರು, ನಿಂಬೆರಸ ಮತ್ತು ಮಸಾಲೆಗಳೊಂದಿಗೆ ಮ್ಯಾರಿನೇಟ್ ಮಾಡುವುದರಿಂದ ಪೀಸ್‌ಗಳಿಗೆ ಮಸಾಲೆ ಚೆನ್ನಾಗಿ ಹಿಡಿಯುತ್ತದೆ. ಬೇಯಿಸಿದಾಗ ಡ್ರೈ ಆಗದೆ ಜ್ಯೂಸಿಯಾಗಿರುತ್ತದೆ.
5. ಚಿಕನ್ ಅನ್ನು ನೀರಿನಿಂದ ತೊಳೆಯುವುದು
ಚಿಕನ್ ಅನ್ನು ನೀರಿನಿಂದ ತೊಳೆದರೆ ಕ್ಲೀನ್ ಆಗುತ್ತೆ ಅಂತ ಬಹಳಷ್ಟು ಜನ ಅಂದುಕೊಳ್ತಾರೆ. ಆದರೆ ಹೀಗೆ ಮಾಡುವುದರಿಂದ ಚಿಕನ್ ಮೇಲಿರುವ ಹಾನಿಕಾರಕ ಬ್ಯಾಕ್ಟೀರಿಯಾ ಅಡುಗೆಮನೆಯ ಪಾತ್ರೆಗಳು ಮತ್ತು ಸಿಂಕ್‌ಗೆ ಹರಡುತ್ತದೆ. ಸರಿಯಾಗಿ ಬೇಯಿಸುವುದರಿಂದ ಮಾತ್ರ ಚಿಕನ್‌ನಲ್ಲಿರುವ ಬ್ಯಾಕ್ಟೀರಿಯಾ ಸಾಯುತ್ತದೆ.
56
6. ಸ್ಕಿನ್ ಲೆಸ್ ಚಿಕನ್..
ಚಿಕನ್ ಮೇಲೆ ಕ್ರಿಸ್ಪಿಯಾಗಿ, ಒಳಗೆ ಸಾಫ್ಟ್ ಆಗಿ ಬರಬೇಕೆಂದರೆ ಸ್ಕಿನ್ ಇಡುವುದು ಒಳ್ಳೆಯದು. ಸ್ಕಿನ್ ಒಳಗಿನ ತೇವಾಂಶ ಹೊರಹೋಗದಂತೆ ಕಾಪಾಡಿ, ಚಿಕನ್ ಕ್ಯಾರಮೆಲೈಸ್ ಆಗಲು ಸಹಾಯ ಮಾಡುತ್ತದೆ.
7. ಚಿಕನ್ ಪೀಸ್ ಕಟ್ ಮಾಡುವುದು..
ಚಿಕನ್ ಬ್ರೆಸ್ಟ್ ಪೀಸ್‌ಗಳು ತುಂಬಾ ದಪ್ಪಗಿರುತ್ತವೆ. ಅವುಗಳನ್ನು ಹಾಗೆಯೇ ಬೇಯಿಸಿದರೆ ಮೇಲೆ ಬೆಂದು, ಒಳಗೆ ಹಸಿಯಾಗಿರುವ ಸಾಧ್ಯತೆ ಇರುತ್ತದೆ. ಅದಕ್ಕಾಗಿಯೇ ಮೀಟ್ ಹ್ಯಾಮರ್‌ನಿಂದ ಪೀಸ್ ಅನ್ನು ಸಮಾನ ದಪ್ಪದಲ್ಲಿರುವಂತೆ ಕಟ್ ಮಾಡಿಕೊಳ್ಳಬೇಕು. ಪೀಸ್ ಸಮಾನವಾಗಿದ್ದರೆ ಚೆನ್ನಾಗಿ ಬೇಯುತ್ತದೆ.
66
8. ಫ್ರೋಜನ್ ಚಿಕನ್
ಫ್ರೋಜನ್ ಚಿಕನ್ ಅನ್ನು ರೂಮ್ ಟೆಂಪರೇಚರ್‌ನಲ್ಲಿ ಹೊರಗೆ ಇಡಬಾರದು. ಇದರಿಂದ ಬ್ಯಾಕ್ಟೀರಿಯಾ ವೇಗವಾಗಿ ಬೆಳೆಯುತ್ತದೆ. ಚಿಕನ್ ಐಸ್ ಕರಗಲು ತಣ್ಣೀರಿನಲ್ಲಿ ಇಡುವುದು, ಮೈಕ್ರೋವೇವ್ ಮಾಡುವುದು ಅಥವಾ ಬೇಯಿಸುವ ಒಂದು ದಿನ ಮುಂಚೆ ಫ್ರಿಡ್ಜ್‌ನ ಕೆಳಗಿನ ಕಪಾಟಿನಲ್ಲಿ ಇಡುವುದು ಸರಿಯಾದ ವಿಧಾನ.
9. ಸಮಾನ ಗಾತ್ರದಲ್ಲಿ ಪೀಸ್ ಕಟ್ ಮಾಡದಿರುವುದು
ಚಿಕನ್ ಬೇಯಿಸುವಾಗ ಎಲ್ಲಾ ಪೀಸ್‌ಗಳು ಒಂದೇ ಗಾತ್ರದಲ್ಲಿ (Size) ಇರುವಂತೆ ನೋಡಿಕೊಳ್ಳಬೇಕು. ದೊಡ್ಡದು, ಸಣ್ಣದು ಸೇರಿಸಿ ಬೇಯಿಸಿದರೆ ಕೆಲವು ಪೀಸ್‌ಗಳು ಹೆಚ್ಚು ಬೆಂದು, ಇನ್ನು ಕೆಲವು ಹಸಿಯಾಗಿಯೇ ಉಳಿಯುತ್ತವೆ.
ಈ ಸಣ್ಣ ಸಣ್ಣ ಜಾಗ್ರತೆಗಳನ್ನು ಪಾಲಿಸಿದರೆ ನಿಮ್ಮ ಮನೆಯಲ್ಲಿ ಮಾಡುವ ಚಿಕನ್ ಪ್ರತಿ ಬಾರಿಯೂ ರೆಸ್ಟೋರೆಂಟ್ ಸ್ಟೈಲ್‌ನಲ್ಲಿ ಪರ್ಫೆಕ್ಟ್ ಆಗಿ, ಟೇಸ್ಟಿಯಾಗಿ ಬರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.