ಫ್ರಿಡ್ಜ್‌ನಲ್ಲಿ ಬಿಯರ್ (Beer Storage in fridge tips) ಎಷ್ಟು ದಿನ ತಾಜಾ ಇರುತ್ತದೆ? ತೆರೆದ ಮತ್ತು ತೆರೆಯದ ಬಿಯರ್ ಬಾಟಲಿಗಳನ್ನು ಸಂಗ್ರಹಿಸುವ ಸರಿಯಾದ ವಿಧಾನ ಮತ್ತು ಬಿಯರ್ ಹಾಳಾಗಿದೆಯೇ ಎಂದು ತಿಳಿಯುವುದು ಹೇಗೆ? ಇಲ್ಲಿ ತಿಳಿಯಿರಿ.
ಸಾಮಾನ್ಯವಾಗಿ ವೀಕೆಂಡ್ ಪಾರ್ಟಿ ಅಥವಾ ವಿಶೇಷ ದಿನಗಳಿಗಾಗಿ ಜನರು ಬಿಯರ್ ಬಾಟಲಿ ಅಥವಾ ಕ್ಯಾನ್‌ಗಳನ್ನು ಮುಂಚಿತವಾಗಿಯೇ ತಂದು ಫ್ರಿಡ್ಜ್‌ನಲ್ಲಿ ಸಂಗ್ರಹಿಸಿಡುತ್ತಾರೆ. ಆದರೆ, ಫ್ರಿಡ್ಜ್‌ನಲ್ಲಿ ಬಿಯರ್ ಅನ್ನು ಎಷ್ಟು ದಿನಗಳ ಕಾಲ ಇಡಬಹುದು ಮತ್ತು ಅದು ತನ್ನ ಮೂಲ ರುಚಿಯನ್ನು ಎಷ್ಟು ದಿನ ಉಳಿಸಿಕೊಳ್ಳುತ್ತದೆ ಎಂಬುದು ಹಲವರಿಗೆ ತಿಳಿದಿರುವುದಿಲ್ಲ.
26
ತೆರೆಯದ ಬಿಯರ್:
ಸಾಮಾನ್ಯವಾಗಿ ಸೀಲ್ ಆಗಿರುವ ಬಿಯರ್ ಅನ್ನು ಫ್ರಿಡ್ಜ್‌ನಲ್ಲಿ (ಸುಮಾರು 2 ರಿಂದ 4 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ) ಇಟ್ಟರೆ, ಅದರ ಎಕ್ಸ್‌ಪೈರಿ ದಿನಾಂಕ ಮುಗಿದ ಮೇಲೂ 6 ರಿಂದ 8 ತಿಂಗಳುಗಳ ಕಾಲ ಸುರಕ್ಷಿತವಾಗಿಡಬಹುದು.
36
ಡಾರ್ಕ್ ಬಿಯರ್ 2 ವರ್ಷ ಇಡಬಹುದು
ಇನ್ನು ಡಾರ್ಕ್ ಬಿಯರ್ ಅಥವಾ ಅಧಿಕ ಆಲ್ಕೋಹಾಲ್ ಅಂಶವಿರುವ ಬಿಯರ್‌ಗಳು 1 ರಿಂದ 2 ವರ್ಷಗಳವರೆಗೂ ಕೆಡುವುದಿಲ್ಲ. ಆದರೆ, ಯಾವುದೇ ರಾಸಾಯನಿಕ ಪ್ರಕ್ರಿಯೆಗೆ ಒಳಗಾಗದ ಕ್ರಾಫ್ಟ್ ಬಿಯರ್ (Craft Beer) ಆಗಿದ್ದರೆ ಅದನ್ನು 2 ರಿಂದ 3 ತಿಂಗಳೊಳಗೆ ಕುಡಿಯುವುದು ಉತ್ತಮ.
ಒಮ್ಮೆ ಬಿಯರ್ ಕ್ಯಾನ್ ಅಥವಾ ಬಾಟಲಿಯ ಮುಚ್ಚಳವನ್ನು ತೆರೆದರೆ, ಅದನ್ನು ಫ್ರಿಡ್ಜ್‌ನಲ್ಲಿಟ್ಟರೂ 24 ರಿಂದ 48 ಗಂಟೆಗಳ ಒಳಗೆ (1-2 ದಿನ) ಸೇವಿಸಬೇಕು. ಬಾಟಲಿ ಓಪನ್ ಆದ ತಕ್ಷಣ ಗಾಳಿ (ಆಮ್ಲಜನಕ) ಒಳಸೇರಿ ಆಕ್ಸಿಡೀಕರಣವಾಗುತ್ತದೆ. ಇದರಿಂದ ಕಾರ್ಬೊನೇಷನ್ (ನೊರೆ ಮತ್ತು ಗ್ಯಾಸ್) ಕಡಿಮೆಯಾಗಿ, ಬಿಯರ್ ರುಚಿ ಕಹಿಯಾಗಿ ಅಥವಾ ಸಪ್ಪೆಯಾಗಿ ಬದಲಾಗುತ್ತದೆ.
56
ಸಂಗ್ರಹಿಸುವ ಸರಿಯಾದ ವಿಧಾನ:
ನೆಟ್ಟಗೆ ಇಡಿ: ಬಿಯರ್ ಬಾಟಲಿಗಳನ್ನು ಫ್ರಿಡ್ಜ್‌ನಲ್ಲಿ ಮಲಗಿಸಿ ಇಡುವ ಬದಲು ಯಾವಾಗಲೂ ನೇರವಾಗಿ (Vertical) ಇಡಬೇಕು. ಇದರಿಂದ ಕ್ಯಾಪ್ ಭಾಗಕ್ಕೆ ಗಾಳಿ ತಾಗುವುದು ಕಡಿಮೆಯಾಗಿ ರುಚಿ ಹಾಳಾಗುವುದಿಲ್ಲ.
ಬೆಳಕಿನಿಂದ ದೂರವಿಡಿ: ನೇರ ಬೆಳಕು ಅಥವಾ ಸೂರ್ಯನ ಬಿಸಿಲು ತಾಗದ ಜಾಗದಲ್ಲಿಡಬೇಕು.
66
ಬಿಯರ್ ಹಾಳಾಗಿದೆ ಎಂದು ತಿಳಿಯುವುದು ಹೇಗೆ?
ಬಾಟಲಿ ಓಪನ್ ಮಾಡಿದಾಗ ಯಾವುದೇ ಗ್ಯಾಸ್ ಅಥವಾ ನೊರೆ ಬರದಿದ್ದರೆ, ವಾಸನೆ ಹುಳಿಯಾಗಿದ್ದರೆ ಅಥವಾ ಬಣ್ಣ ಬದಲಾಗಿದ್ದರೆ ಆ ಬಿಯರ್ ಕುಡಿಯಲು ಯೋಗ್ಯವಲ್ಲ ಎಂದು ಅರ್ಥ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.