ನೀವು ತಯಾರಿಸುವ ಚಪಾತಿ ಗಟ್ಟಿಯಾಗುತ್ತದೆಯೇ? ಗಂಟೆಗಳ ಕಾಲ ಮೃದುವಾಗಿರುವ ಸಾಫ್ಟ್ ಚಪಾತಿ ಮಾಡುವ ರಹಸ್ಯ ಇಲ್ಲಿದೆ. ಹಿಟ್ಟು ಕಲಿಸುವುದರಿಂದ ಹಿಡಿದು ಸಂಗ್ರಹಿಸುವವರೆಗಿನ ಸಂಪೂರ್ಣ ಟಿಪ್ಸ್ ತಿಳಿಯಿರಿ.
ಇಂದಿನ ಯುವ ಸಮುದಾಯಕ್ಕೆ ಸಾಫ್ಟ್ ಚಪಾತಿ ಮಾಡೋದು ಅಂದ್ರೆ ಸವಾಲಿನ ಕೆಲಸ. ಎಷ್ಟೇ ತುಪ್ಪ-ಎಣ್ಣೆ ಹಾಕಿ ಬೇಯಿಸಿದರೂ ಕೆಲವೇ ಗಂಟೆಗಳಲ್ಲಿಯೇ ಅದು ಬಿರುಸು ಆಗುತ್ತೆ ಅನ್ನೋದು ಹಲವರ ಸಮಸ್ಯೆ. ಮೃದುವಾದ ಚಪಾತಿ ತಯಾರಿಸೋದು ಸಹ ಒಂದು ಕಲೆ. ಅಮ್ಮಂದಿರುವ ಈ ಕಲೆಯನ್ನು ಕರಗತ ಮಾಡಿಕೊಂಡಿರೋ ಕಾರಣ, ಇವರು ತಯಾರಿಸೋ ಎಲ್ಲಾ ಆಹಾರ ಟೇಸ್ಟಿಯಾಗಿರುತ್ತದೆ. ಈ ಲೇಖನದಲ್ಲಿ ಸಾಫ್ಟ್ ಚಪಾತಿಗೆ ಹಂತ ಹಂತವಾಗಿ ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು ಅನ್ನೋದನ್ನು ನೋಡೋಣ ಬನ್ನಿ.
26
ಚಪಾತಿ ಹಿಟ್ಟು ಕಲಿಸೋದು
ಚಪಾತಿಗಾಗಿ ಗೋಧಿ ಹಿಟ್ಟು ತೆಗೆದುಕೊಂಡು ಅದನ್ನು ಜರಡಿ ಹಿಡಿದುಕೊಳ್ಳಿ. ಈಗ ಇದಕ್ಕೆ ಚಿಟಿಕೆ ಉಪ್ಪು, ಒಂದು ಟೀ ಸ್ಪೂನ್‌ನಷ್ಟು ಅಡುಗೆಎಣ್ಣೆ ಹಾಕಿಕೊಂಡು ಚೆನ್ನಾಗಿ ಕಲಿಸಿಕೊಳ್ಳಬೇಕು. ಇದೇ ವೇಳೆ ಕೆಲವರು ಒಂದು ಬೌಲ್‌ನಷ್ಟು ಬಿಸಿನೀರಿನಲ್ಲಿ ಎರಡು ಟೀ ಸ್ಪೂನ್‌ನಷ್ಟು ಮೊಸರು ಸೇರಿಸಿ ಮಿಕ್ಸ್ ಮಾಡಿಕೊಳ್ಳುತ್ತಾರೆ. ಈ ಮೊಸರು ಮಿಶ್ರಿತ ನೀರಿನಿಂದ ಹಿಟ್ಟು ಕಲಿಸಿಕೊಳ್ಳುತ್ತಾರೆ.
36
ಒದ್ದೆ ಬಟ್ಟೆ
ಚೆನ್ನಾಗಿ ಕಲಿಸಿಕೊಂಡು ಹಿಟ್ಟನ್ನ ಸುಮಾರು 15 ರಿಂದ 20 ನಿಮಿಷ ಎತ್ತಿಟ್ಟುಕೊಳ್ಳಬೇಕು. ತೆಳುವಾದ ಕಾಟನ್ ಬಟ್ಟೆಯನ್ನು ನೀರಿನಲ್ಲಿ ಅದ್ದಿ ಈ ಹಿಟ್ಟಿನ ಮೇಲೆ ಹಾಕಬೇಕು. ಹಿಟ್ಟು ತೇವಾಂಶ ಹೋಗದಂತೆ ಕಾಪಾಡುತ್ತದೆ. ಹೀಗೆ ಮಾಡೋದರಿಂದ ಹಿಟ್ಟು ಸಹ ಸಾಫ್ಟ್ ಆಗುತ್ತದೆ. ಹಿಟ್ಟು ಕಲಿಸಿದ ನಂತ್ರವೇ ಚಪಾತಿ ಮಾಡಲು ಮುಂದಾಗಬಾರದು.
ಚಪಾತಿಯ್ನು ಬೇಯಿಸುವ ವಿಧಾನವೂ ಪ್ರಮುಖವಾಗುತ್ತದೆ. ಚಪಾತಿ ಹಾಕುವಾಗ ಕಾವಲಿ ಚೆನ್ನಾಗಿ ಬಿಸಿಯಾಗಿರುವಂತೆ ನೋಡಿಕೊಳ್ಳಿ. ಕಾವಲಿ ಬಿಸಿಯಾಗಿದ್ರೆ ಚಪಾತಿಯನ್ನು ಎರಡೂ ಬದಿಯಲ್ಲಿ ಹದವಾಗಿ ಬೇಯಿಸಬಹುದು. ಹದವಾಗಿ ಬೇಯಿಸಿರುವ ಚಪಾತಿ ಮೃದುವಾಗಿರುತ್ತದೆ.
56
ಅತಿಯಾಗಿ ಎಣ್ಣೆ ಬೇಡ
ಕೆಲವರು ಚಪಾತಿ ರುಚಿ ಹೆಚ್ಚಳಕ್ಕಾಗಿ ಅಧಿಕವಾಗಿ ತುಪ್ಪ ಅಥವಾ ಅಡುಗೆಎಣ್ಣೆ ಬಳಸುತ್ತಾರೆ. ಇದು ಆ ಕ್ಷಣಕ್ಕೆ ಮಾತ್ರ ರುಚಿ ನೀಡುತ್ತದೆ. ನಂತರ ಖಡಕ್ ರೊಟ್ಟಿಯಂತೆ ಬದಲಾಗುತ್ತದೆ. ಕಡಿಮೆ ಎಣ್ಣೆ ಬಳಸಿಯೂ ರುಚಿಯಾಗಿರೋ ಮೃದುವಾದ ಚಪಾತಿಯನ್ನು ಮಾಡಿಕೊಳ್ಳಬಹುದು.
66
ಚಪಾತಿ ಸ್ಟೋರ್ ಮಾಡೋದು
ಚಪಾತಿಯನ್ನು ಬಿದಿರಿನ ಬುಟ್ಟಿಯಲ್ಲಿಷ್ಟು ಹೆಚ್ಚು ಮೃದುವಾಗಿರುತ್ತದೆ. ಇಂದಿಗೂ ಗ್ರಾಮೀಣ ಭಾಗಗಳಲ್ಲಿ ಬಿದಿರಿನ ಬುಟ್ಟಿಗಳನ್ನೇ ಬಳಕೆ ಮಾಡಲಾಗುತ್ತದೆ. ಚಪಾತಿ ಹಾಕುವ ಮುನ್ನ ಬುಟ್ಟಿ ಮೇಲೆ ಕಾಟನ್ ಬಟ್ಟೆ ಹಾಕಿ. ಈ ಬಟ್ಟೆ ಮೇಲೆ ಚಪಾತಿ ಹಾಕಿ. ನಂತರ ಇದೇ ಬಟ್ಟೆಯಿಂದ ಮುಚ್ಚಿಡಿ. ಈ ಬಟ್ಟೆ ಚಪಾತಿಯನ್ನು ಫ್ರೆಶ್ ಆಗಿಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.