ಎಷ್ಟೇ ಡಯಟ್ ಮಾಡಿದ್ರೂ ತೂಕ ಕಮ್ಮಿ ಆಗ್ತಿಲ್ವಾ? ಕಾರಣ & ಸೂಕ್ತ ಪರಿಹಾರ ಇಲ್ಲಿದೆ ನೋಡಿ..!

Published : Sep 25, 2026, 02:30 PM IST

ಎಷ್ಟೇ ಕಟ್ಟುನಿಟ್ಟಾಗಿ ಡಯಟ್ ಮಾಡಿದ್ರೂ ತೂಕ ಮಾತ್ರ ಕಮ್ಮಿ ಆಗ್ತಿಲ್ಲ ಅಂತಾ ಬೇಜಾರ್ ಮಾಡ್ಕೊಳ್ತಿದ್ದೀರಾ? ಇದಕ್ಕೆ ಕಾರಣ ಏನು ಅಂತಾ ನಮಗೆ ಗೊತ್ತೇ ಇರಲ್ಲ. ನಾವು ದಿನನಿತ್ಯ ಮಾಡೋ ಸಣ್ಣಪುಟ್ಟ ತಪ್ಪುಗಳೇ ನಮ್ಮ ತೂಕ ಇಳಿಕೆಗೆ ಅಡ್ಡಿಯಾಗ್ತಿವೆ. ಏನದು ನೋಡಿ..

PREV
18
ಊಟಕ್ಕೂ ಮುನ್ನ ನೀರು ಕುಡಿಯಿರಿ

ಸರಿಯಾಗಿ ನೀರು ಕುಡಿಯೋದ್ರಿಂದ ನಮ್ಮ ದೇಹದ ಮೆಟಬಾಲಿಸಂ ಹೆಚ್ಚಾಗುತ್ತೆ. ಊಟ ಮಾಡೋಕೆ 30 ನಿಮಿಷ ಮುಂಚೆ ಸುಮಾರು 2 ಕಪ್ (500 ml) ನೀರು ಕುಡಿದರೆ, ನಮಗೆ ಹಸಿವು ಕಮ್ಮಿ ಆಗುತ್ತೆ. ಇದರಿಂದ ನಾವು ಅತಿಯಾಗಿ ಊಟ ಮಾಡೋದನ್ನ ತಪ್ಪಿಸಬಹುದು.

28
ಕೆಲವು ಮಾತ್ರೆಗಳ ಅಡ್ಡಪರಿಣಾಮ

ನಾವು ದಿನನಿತ್ಯ ತಗೊಳ್ಳೋ ಕೆಲವು ಮಾತ್ರೆಗಳು ಕೂಡ ತೂಕ ಹೆಚ್ಚಾಗಲು ಕಾರಣವಾಗುತ್ತವೆ. ಡಿಪ್ರೆಶನ್ ಮಾತ್ರೆಗಳು (antidepressants), ಕಾರ್ಟಿಕೊಸ್ಟೆರಾಯ್ಡ್‌ಗಳು, ಬಿಪಿ ಹಾಗೂ ಶುಗರ್ ಕಂಟ್ರೋಲ್ ಮಾಡಲು ಬಳಸುವ ಕೆಲವು ಮಾತ್ರೆಗಳು ನಮ್ಮ ದೇಹದ ತೂಕವನ್ನು ಹೆಚ್ಚಿಸುತ್ತವೆ.

38
ಊಟದಲ್ಲಿ ತರಕಾರಿ, ಫೈಬರ್ ಕಮ್ಮಿ ಇರೋದು

ನಾವು ಎಷ್ಟು ಕ್ಯಾಲೋರಿ ಊಟ ಮಾಡ್ತೀವಿ ಅನ್ನೋದಕ್ಕಿಂತ, ಎಂಥಾ ಊಟ ಮಾಡ್ತೀವಿ ಅನ್ನೋದು ಮುಖ್ಯ. ನಮ್ಮ ಊಟದಲ್ಲಿ ತರಕಾರಿಗಳು ಹಾಗೂ ಫೈಬರ್ ಅಂಶ ಕಮ್ಮಿ ಇದ್ರೆ, ತೂಕ ಇಳಿಸೋದು ಸುಲಭವಲ್ಲ. ಫೈಬರ್ ಅಂಶ ಹೊಟ್ಟೆ ತುಂಬಿದ ಫೀಲ್ ಕೊಡುತ್ತೆ.

48
ಒಂದೇ ಕಡೆ ಕೂತು ಕೆಲಸ ಮಾಡೋದು

ಬರೀ ಜಿಮ್‌ಗೆ ಹೋಗಿ ವರ್ಕೌಟ್ ಮಾಡಿದ್ರೆ ಸಾಲದು. ದಿನವಿಡೀ ನಾವು ಎಷ್ಟು ಆಕ್ಟಿವ್ ಆಗಿರ್ತೀವಿ ಅನ್ನೋದು ಕೂಡ ಮುಖ್ಯ. ಒಂದೇ ಕಡೆ ಗಂಟೆಗಟ್ಟಲೆ ಕೂತು ಕೆಲಸ ಮಾಡಿದ್ರೆ, ನಮ್ಮ ದೇಹದ ಕ್ಯಾಲೋರಿ ಕರಗುವ ಪ್ರಕ್ರಿಯೆ ತುಂಬಾನೇ ನಿಧಾನ ಆಗುತ್ತೆ.

58
ಥೈರಾಯ್ಡ್ ಮತ್ತು ಪಿಸಿಓಎಸ್ ಸಮಸ್ಯೆ

ಹೈಪೋಥೈರಾಯ್ಡಿಸಮ್ (Hypothyroidism) ಮತ್ತು ಪಿಸಿಓಎಸ್ (PCOS) ನಂತಹ ಆರೋಗ್ಯ ಸಮಸ್ಯೆಗಳು ನಮ್ಮ ತೂಕವನ್ನು ದಿಢೀರ್ ಅಂತಾ ಹೆಚ್ಚಿಸುತ್ತವೆ. ಈ ಕಾಯಿಲೆಗಳು ಇದ್ದಾಗ ತೂಕವನ್ನು ಕಂಟ್ರೋಲ್ ಮಾಡೋದು ತುಂಬಾನೇ ಕಷ್ಟದ ಕೆಲಸ.

68
ಅತಿಯಾದ ಟೆನ್ಷನ್ ತೂಕ ಹೆಚ್ಚಾಗಲು ಕಾರಣ

ಅತಿಯಾದ ಟೆನ್ಷನ್ ಅಥವಾ ಒತ್ತಡ ನಮ್ಮ ಊಟದ ಅಭ್ಯಾಸ ಹಾಗೂ ತೂಕದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ. ಟೆನ್ಷನ್ ಆದಾಗ ನಮ್ಮ ದೇಹದಲ್ಲಿ ಹಾರ್ಮೋನ್ ಬದಲಾವಣೆ ಆಗಿ ಹಸಿವು ಹೆಚ್ಚಾಗುತ್ತೆ. ಈ ಟೈಮ್‌ನಲ್ಲಿ ನಾವು ಅತಿ ಹೆಚ್ಚು ಕ್ಯಾಲೋರಿ ಇರೋ ಜಂಕ್ ಫುಡ್ ತಿನ್ನೋಕೆ ಶುರು ಮಾಡ್ತೀವಿ.

78
ನಿದ್ದೆ ಕಮ್ಮಿ ಆದ್ರೆ ತೂಕ ಇಳಿಸೋದು ಕಷ್ಟ

ಸರಿಯಾಗಿ ನಿದ್ದೆ ಮಾಡಿಲ್ಲ ಅಂದ್ರೆ ತೂಕ ಇಳಿಸೋದು ತುಂಬಾನೇ ಕಷ್ಟ. ನಿದ್ದೆ ಕಮ್ಮಿ ಆದಾಗ ನಮಗೆ ಜಾಸ್ತಿ ಹಸಿವಾಗುತ್ತೆ, ಇದರಿಂದ ನಾವು ಹೆಚ್ಚು ಕ್ಯಾಲೋರಿ ಇರೋ ಊಟ ಮಾಡ್ತೀವಿ. ಅದೇ ನಾವು ಚೆನ್ನಾಗಿ ನಿದ್ದೆ ಮಾಡಿದ್ರೆ, ಕ್ಯಾಲೋರಿ ತಗೊಳ್ಳೋದು ಕಮ್ಮಿ ಆಗುತ್ತೆ. ದೊಡ್ಡವರು ದಿನಕ್ಕೆ ಕನಿಷ್ಠ 7 ಗಂಟೆ ನಿದ್ದೆ ಮಾಡಲೇಬೇಕು.

88
Weight Loss Tipsಎಷ್ಟೇ ಡಯಟ್ ಮಾಡಿದ್ರೂ ತೂಕ ಕಮ್ಮಿ ಆಗ್ತಿಲ್ವಾ? ಕಾರಣ ಇಲ್ಲಿದೆ

ಎಷ್ಟೇ ಕಟ್ಟುನಿಟ್ಟಾಗಿ ಡಯಟ್ ಮಾಡಿದ್ರೂ ತೂಕ ಮಾತ್ರ ಕಮ್ಮಿ ಆಗ್ತಿಲ್ಲ ಅಂತಾ ಬೇಜಾರ್ ಮಾಡ್ಕೊಳ್ತಿದ್ದೀರಾ? ಇದಕ್ಕೆ ಕಾರಣ ಏನು ಅಂತಾ ನಮಗೆ ಗೊತ್ತೇ ಇರಲ್ಲ. ನಾವು ದಿನನಿತ್ಯ ಮಾಡೋ ಸಣ್ಣಪುಟ್ಟ ತಪ್ಪುಗಳೇ ನಮ್ಮ ತೂಕ ಇಳಿಕೆಗೆ ಅಡ್ಡಿಯಾಗ್ತಿವೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories