ಪ್ರತಿಯೊಂದು ವಸ್ತುವಿಗೂ ಒಂದು ಎಕ್ಸ್ಪೈರಿ ಡೇಟ್ ಇರುತ್ತೆ. ಆದರೆ ನಿಮ್ಮ ಅಡುಗೆ ಮನೆಯಲ್ಲಿರುವ ಕೆಲವು ವಸ್ತುಗಳಿಗೆ ಎಕ್ಸ್ಪೈರಿ ಡೇಟ್ ಇದೆ ಅನ್ನೋದೇ ನಿಮಗೆ ಗೊತ್ತಿಲ್ಲ. ಹೀಗಾಗಿ ಅವುಗಳನ್ನು ವರ್ಷಗಳ ಕಾಲ ಬಳಸುತ್ತಲೇ ಇರ್ತೇವೆ. ಅವ್ಯಾವುದು ಗೊತ್ತಾ?
ಅಡುಗೆ ಮನೆಯಲ್ಲಿ ಕೆಲ ಒಣ ಮಸಾಲೆಗಳು ಅತಿ ಕಡಿಮೆ ಪ್ರಮಾಣದಲ್ಲಿ ಬಳಕೆ ಆಗುತ್ವೆ. ಆದ್ರೆ ಖರೀದಿ ಮಾತ್ರ ದೊಡ್ಡ ಪ್ರಮಾಣದಲ್ಲಿ ಆಗಿರುತ್ತದೆ. ಒಮ್ಮೆ ಖರೀದಿಸಿ ಅದನ್ನು ಡಬ್ಬದಲ್ಲಿಟ್ರೆ ಮತ್ತೆ ತೆಗೆಯೋದು ವರ್ಷ ಆಗ್ಬಹುದು. ಅದ್ರ ಪ್ಯಾಕೆಟ್ ಬಿಸಾಡಿರುವುದರಿಂದ ಅದರ ಎಕ್ಸ್ಪೈರಿ ಡೇಟ್ ಕೂಡ ನಮಗೆ ನೆನಪಿರುವುದಿಲ್ಲ. ಈ ಮಸಾಲೆಗಳಲ್ಲಿ ಫಂಗಸ್ ತಕ್ಷಣ ಕಾಣಿಸಿಕೊಳ್ಳದೇ ಇರಬಹುದು. ಆದರೆ ತುಂಬಾ ದಿನ ಇಟ್ಟರೆ ಅವುಗಳ ರುಚಿ ಮತ್ತು ಪರಿಮಳ ಕಡಿಮೆಯಾಗುತ್ತದೆ.
25
ಹಿಂಗು ಮತ್ತು ಕಸೂರಿ ಮೇತಿ
ಹಿಂಗು ಮತ್ತು ಕಸೂರಿ ಮೇತಿಯನ್ನು ಪ್ರತಿದಿನ ಬಳಸುವುದಿಲ್ಲ. ಹೀಗಾಗಿ ಇವು ಕೂಡ ಬಹಳ ದಿನಗಳ ಕಾಲ ಮಸಾಲೆ ಡಬ್ಬಿಯಲ್ಲೇ ಉಳಿದುಬಿಡುತ್ತವೆ. ಹಿಂಗನ್ನು ಪದೇಪದೇ ಬಳಸುವಾಗ ಗಾಳಿ ಮತ್ತು ತೇವಾಂಶಕ್ಕೆ ಒಡ್ಡಿಕೊಳ್ಳುವುದರಿಂದ ಅದರ ಪರಿಮಳ ನಿಧಾನವಾಗಿ ಕಡಿಮೆಯಾಗುತ್ತದೆ. ಇನ್ನು ಕಸೂರಿ ಮೇತಿ ತುಂಬಾ ದಿನ ಇಟ್ಟರೆ ಬಣ್ಣ ಬದಲಾಗುವುದರ ಜೊತೆಗೆ ಕಹಿ ರುಚಿಯೂ ಬರಬಹುದು. ಇವುಗಳನ್ನು ಹೆಚ್ಚು ಕಾಲ ತಾಜಾವಾಗಿ ಇಡಬೇಕೆಂದರೆ ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸುವುದು ಉತ್ತಮ. ದೀರ್ಘಕಾಲ ಇಟ್ಟು ಬಳಸುವ ಬದಲು ಸುಮಾರು 6 ತಿಂಗಳೊಳಗೆ ಬದಲಾಯಿಸುವುದು ಸೂಕ್ತ.
35
ಅಡುಗೆ ಎಣ್ಣೆ
ಸಾಸಿವೆ ಎಣ್ಣೆ ಸೇರಿದಂತೆ ಕೆಲವು ಕೋಲ್ಡ್ ಪ್ರೆಸ್ಡ್ ಎಣ್ಣೆಗಳನ್ನು ಒಲೆಯ ಪಕ್ಕದಲ್ಲೇ ಇಡುವ ಅಭ್ಯಾಸ ಹಲವರಿಗಿರುತ್ತದೆ. ಆದರೆ ಹೆಚ್ಚು ಶಾಖ ಮತ್ತು ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಎಣ್ಣೆಯಲ್ಲಿ ಆಕ್ಸಿಡೇಶನ್ ಹೆಚ್ಚಾಗಬಹುದು. ಅದೇ ರೀತಿ ಬಾಟಲಿಯನ್ನು ಪದೇಪದೇ ತೆರೆದು ಗಾಳಿಗೆ ಒಡ್ಡುವುದರಿಂದಲೂ ಎಣ್ಣೆಯ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಎಣ್ಣೆಯ ಬಾಟಲಿಯನ್ನು ಒಲೆ ಅಥವಾ ಹೆಚ್ಚು ಬಿಸಿಯಾಗುವ ಜಾಗದಲ್ಲಿ ಇಡಬೇಡಿ. ತಂಪಾದ ಮತ್ತು ನೇರ ಸೂರ್ಯನ ಬೆಳಕು ಬೀಳದ ಸ್ಥಳದಲ್ಲಿ ಇಡುವುದು ಉತ್ತಮ.
ಬೇಕಿಂಗ್ ಸೋಡಾ ಮತ್ತು ಬೇಕಿಂಗ್ ಪೌಡರ್ ಅನ್ನು ಪ್ರತಿದಿನ ಬಳಸುವುದಿಲ್ಲ. ಹೀಗಾಗಿ ಅವುಗಳ ಪ್ಯಾಕೆಟ್ಗಳು ತಿಂಗಳುಗಟ್ಟಲೆ ಅಡುಗೆ ಮನೆಯಲ್ಲಿ ಹಾಗೆಯೇ ಉಳಿದುಬಿಡುತ್ತವೆ. ಎಕ್ಸ್ಪೈರಿ ಡೇಟ್ ಕಳೆದ ನಂತರವೂ ಇವು ನೋಡಲು ಸಾಮಾನ್ಯವಾಗಿಯೇ ಕಾಣಿಸಬಹುದು. ಆದರೆ ಅವುಗಳ ಪರಿಣಾಮ ಕಡಿಮೆಯಾಗುತ್ತದೆ. ಇದರಿಂದ ನೀವು ತಯಾರಿಸುವ ಕೇಕ್, ಪಕೋಡ ಅಥವಾ ಇತರ ತಿಂಡಿಗಳ ನಿರೀಕ್ಷಿತ ಫಲಿತಾಂಶ ಸಿಗದೇ ಇರಬಹುದು. ಹೀಗಾಗಿ ಇವುಗಳನ್ನು ಬಳಸುವ ಮೊದಲು ಪ್ಯಾಕೆಟ್ನ ಎಕ್ಸ್ಪೈರಿ ಡೇಟ್ ಪರಿಶೀಲಿಸುವುದು ಒಳ್ಳೆಯದು.
55
ಪಾತ್ರೆ ತೊಳೆಯುವ ಸ್ಪಾಂಜ್
ಪಾತ್ರೆ ತೊಳೆಯುವ ಸ್ಪಾಂಜ್ ಗೆ ಎಕ್ಸ್ಪೈರಿ ಡೇಟ್ ಇಲ್ಲದಿದ್ದರೂ, ಅದನ್ನು ವರ್ಷಗಟ್ಟಲೆ ಬಳಸುವುದು ಸರಿಯಲ್ಲ. ಸ್ಪಾಂಜ್ ಯಾವಾಗಲೂ ಒದ್ದೆಯಾಗಿರುವುದರಿಂದ ಮತ್ತು ಅದರಲ್ಲಿ ಆಹಾರದ ಸಣ್ಣ ಕಣಗಳು ಉಳಿದುಕೊಳ್ಳುವುದರಿಂದ ಬ್ಯಾಕ್ಟೀರಿಯಾ ಬೆಳೆಯುವ ಸಾಧ್ಯತೆ ಇರುತ್ತದೆ. ಹೀಗಾಗಿ ಸ್ಪಾಂಜ್ ತುಂಬಾ ಹಳೆಯದಾಗುವವರೆಗೆ ಅಥವಾ ಸಂಪೂರ್ಣವಾಗಿ ಹಾಳಾಗುವವರೆಗೆ ಕಾಯಬೇಡಿ. ನಿಯಮಿತವಾಗಿ ಅದನ್ನು ಬದಲಾಯಿಸುವುದು ಮತ್ತು ಸ್ವಚ್ಛವಾಗಿ ಇಡುವುದು ಮುಖ್ಯ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.