cooking tips : ಹಾಲನ್ನು ಕಾಯಿಸಿದಾಗ ಮೇಲ್ಭಾಗದಲ್ಲಿ ಕೆನೆ ಕಟ್ಟುವುದು ಸಾಮಾನ್ಯ. ಹೆಚ್ಚಿನ ಮನೆಗಳಲ್ಲಿ ಈ ಕೆನೆಯನ್ನು ಸಂಗ್ರಹಿಸಿ ತುಪ್ಪ ತಯಾರಿಸ್ತಾರೆ. ಬರೀ ತುಪ್ಪಕ್ಕೆ ಮಾತ್ರ ನೀವು ಸಂಗ್ರಹಿಸಿಟ್ಟ ಕೆನೆ ಉಪಯೋಗಕ್ಕೆ ಬರೋದಿಲ್ಲ. ಕೆನೆಯನ್ನು ನೀವು ಇನ್ನೂ ಅನೇಕ ಖಾದ್ಯ ಬಳಸಬಹುದು.
ಮನೆಯಲ್ಲಿ ಪನೀರ್ ಮಸಾಲಾ, ಶಾಹಿ ಪನೀರ್ ಅಥವಾ ಮಲಾಯಿ ಕೋಫ್ತಾ ಮಾಡುವಾಗ ಗ್ರೇವಿ ಗಟ್ಟಿಯಾಗಿ ಮತ್ತು ಕ್ರೀಮಿಯಾಗಿ ಬರಬೇಕೆಂದರೆ ನೀವು ಹಾಲಿನ ಕೆನೆಯನ್ನು ಬಳಸಬಹುದು. ಇದರಿಂದ ಗ್ರೇವಿಯ ರುಚಿ ಚೆನ್ನಾಗಿರುತ್ತೆ. ಇದಕ್ಕಾಗಿ ಮೊದಲು ತಾಜಾ ಕೆನೆಯನ್ನು ಚೆನ್ನಾಗಿ ಕಲಕಿಕೊಳ್ಳಿ. ತರಕಾರಿ ಬೆಂದ ನಂತರ ಒಂದರಿಂದ ಎರಡು ಚಮಚ ಕೆನೆಯನ್ನು ಸೇರಿಸಿ. ಕೆನೆ ಹಾಕಿದ ಬಳಿಕ ಹೆಚ್ಚಿನ ಉರಿಯಲ್ಲಿ ಜೋರಾಗಿ ಕುದಿಸುವುದನ್ನು ತಪ್ಪಿಸಿ. ಕಡಿಮೆ ಉರಿಯಲ್ಲಿ ಸ್ವಲ್ಪ ಹೊತ್ತು ಬೇಯಿಸಿದರೆ ಗ್ರೇವಿ ಚೆನ್ನಾಗಿ ತಯಾರಾಗುತ್ತದೆ.
26
ರುಚಿಯಾದ ಟೋಸ್ಟ್
ಬೆಳಗಿನ ಉಪಾಹಾರಕ್ಕೆ ಅಥವಾ ಸಂಜೆ ಹಸಿವಾದಾಗ ಏನಾದರೂ ಲೈಟ್ ಆಗಿ ತಿನ್ನಬೇಕು ಎನಿಸಿದರೆ ಕೆನೆ ಟೋಸ್ಟ್ ಟ್ರೈ ಮಾಡಬಹುದು. ಇದನ್ನು ತಯಾರಿಸಲು ತಾಜಾ ಹಾಲಿನ ಕೆನೆ, ಸ್ವಲ್ಪ ಉಪ್ಪು ಮತ್ತು ಕಾಳುಮೆಣಸಿನ ಪುಡಿ ಬೇಕಾಗುತ್ತದೆ. ಈ ಮೂರನ್ನೂ ಚೆನ್ನಾಗಿ ಮಿಶ್ರಣ ಮಾಡಿ ಬ್ರೆಡ್ ಮೇಲೆ ಹಚ್ಚಿ. ನಂತರ ತವೆಯ ಮೇಲೆ ಅಥವಾ ಟೋಸ್ಟರ್ನಲ್ಲಿ ಬ್ರೆಡ್ ಅನ್ನು ಗರಿಗರಿಯಾಗುವವರೆಗೆ ಬೇಯಿಸಿ. ಕಡಿಮೆ ಪದಾರ್ಥಗಳನ್ನು ಬಳಸಿ ಸುಲಭವಾಗಿ ತಯಾರಿಸಬಹುದಾದ ತಿಂಡಿ ಇದು.
36
ರೊಟ್ಟಿ -ಪರೋಟ
ಮನೆಯಲ್ಲಿ ಮಾಡುವ ರೊಟ್ಟಿ ಬೇಗ ಗಟ್ಟಿಯಾಗ್ತಿದೆ ಅನ್ನಿಸಿದ್ರೆ ಹಿಟ್ಟು ಕಲಸುವಾಗ ಸ್ವಲ್ಪ ಹಾಲಿನ ಕೆನೆಯನ್ನು ಸೇರಿಸಿ ನೋಡಿ. ಕೆನೆಯಲ್ಲಿರುವ ಕೊಬ್ಬಿನ ಅಂಶ ಹಿಟ್ಟನ್ನು ಮೃದುವಾಗಿಸಲು ಸಹಾಯ ಮಾಡುತ್ತದೆ. ಇದರಿಂದ ರೊಟ್ಟಿ ಮತ್ತು ಪರೋಟ ಮೃದುವಾಗುತ್ತದೆ. ಹಿಟ್ಟಿಗೆ ಹೆಚ್ಚು ಕೆನೆ ಸೇರಿಸಬೇಡಿ. ಸ್ವಲ್ಪ ಪ್ರಮಾಣದಲ್ಲಿ ಸೇರಿಸಿ, ಅಗತ್ಯಕ್ಕೆ ತಕ್ಕಂತೆ ನೀರು ಹಾಕಿ ಹಿಟ್ಟನ್ನು ಕಲಸಿಕೊಳ್ಳಿ.
ಹಾಲಿನ ಕೆನೆಯನ್ನು ಕೆಲವರು ನೈಸರ್ಗಿಕ ಮಾಯಿಶ್ಚರೈಸರ್ ಆಗಿಯೂ ಬಳಸುತ್ತಾರೆ. ವಿಶೇಷವಾಗಿ ಒಣ ತ್ವಚೆಗೆ ಇದು ತಾತ್ಕಾಲಿಕವಾಗಿ ತೇವಾಂಶ ನೀಡಬಹುದು. ಮುಖಕ್ಕೆ ಬಳಸುವ ಮೊದಲು ಸ್ವಲ್ಪ ಪ್ರಮಾಣದಲ್ಲಿ ತ್ವಚೆಯ ಒಂದು ಸಣ್ಣ ಭಾಗದಲ್ಲಿ ಪರೀಕ್ಷಿಸಿ. ಮೊಡವೆಗಳು ಹೆಚ್ಚಾಗುವ ಅಥವಾ ಅಲರ್ಜಿಯಾಗುವ ಸಾಧ್ಯತೆ ಇರುವವರು ಎಚ್ಚರಿಕೆ ವಹಿಸಬೇಕು. ಸೂಕ್ಷ್ಮ ತ್ವಚೆ ಅಥವಾ ಮೊಡವೆ ಸಮಸ್ಯೆ ಇರುವವರು ಕೆನೆ ಬಳಸುವ ಮುನ್ನ ತಜ್ಞರ ಸಲಹೆ ಪಡೆಯಿರಿ.
56
ಕೂದಲಿನ ಆರೈಕೆ
ಕೂದಲು ಒಣಗಿದ್ದರೆ, ಹಾಲಿನ ಕೆನೆ ಮತ್ತು ಸ್ವಲ್ಪ ಜೇನುತುಪ್ಪವನ್ನು ಮಿಶ್ರಣ ಮಾಡಿ ಹೇರ್ ಮಾಸ್ಕ್ ಆಗಿ ಬಳಸಬಹುದು. ಎರಡು ಚಮಚ ತಾಜಾ ಕೆನೆಗೆ ಸ್ವಲ್ಪ ಜೇನುತುಪ್ಪ ಸೇರಿಸಿ ಮಿಶ್ರಣ ಮಾಡಿ. ಕೂದಲಿಗೆ ಹಚ್ಚಿ ಸ್ವಲ್ಪ ಹೊತ್ತಿನ ಬಳಿಕ ಶಾಂಪೂ ಬಳಸಿ ಚೆನ್ನಾಗಿ ತೊಳೆಯಿರಿ. ಆದರೆ ಈ ವಿಧಾನ ಕೂದಲಿನ ಒಣತನವನ್ನು ಶಾಶ್ವತವಾಗಿ ಕಡಿಮೆ ಮಾಡುತ್ತದೆ.
66
ಇದನ್ನು ನೆನಪಿಡಿ
ಕೆನೆಯನ್ನು ಸಂಗ್ರಹಿಸುವಾಗ ಸ್ವಚ್ಛವಾದ, ಮುಚ್ಚಳವಿರುವ ಪಾತ್ರೆಯಲ್ಲಿ ಫ್ರಿಜ್ನಲ್ಲಿ ಇಡಿ. ಕೆನೆಗೆ ಹುಳಿ ವಾಸನೆ ಬಂದರೆ, ಬಣ್ಣ ಬದಲಾಗಿದ್ದರೆ ಅದನ್ನು ಬಳಸಬೇಡಿ. ಒಂದು ವಾರದವರೆಗೆ ಇಟ್ಟ ಕೆನೆ ಯಾವಾಗಲೂ ಸುರಕ್ಷಿತವಾಗಿರುತ್ತದೆ ಎಂದು ಭಾವಿಸಬೇಡಿ. ಕೆನೆ ಎಷ್ಟು ಸಮಯದಿಂದ ಸಂಗ್ರಹಿಸಲಾಗಿದೆ ಮತ್ತು ಹೇಗೆ ಇಡಲಾಗಿದೆ ಎಂಬುದರ ಮೇಲೆ ಅದರ ಸುರಕ್ಷತೆ ಅವಲಂಬಿತವಾಗಿರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.