ಹೃದಯದ ಆರೋಗ್ಯ ಚೆನ್ನಾಗಿ ಇರ್ಬೇಕಾ?, ದಿನಾ ಒಂದು ಕೋಳಿ ಮೊಟ್ಟೆ ತಿನ್ನಿ!

Published : Nov 11, 2025, 02:26 PM IST

Egg Benefits: ಕೋಳಿ ಮೊಟ್ಟೆ ತಿಂದರೆ ಕೊಲೆಸ್ಟ್ರಾಲ್ ಹೆಚ್ಚುತ್ತದೆ, ಇದರಿಂದ ಹೃದಯ ಸಂಬಂಧಿ ಸಮಸ್ಯೆಗಳು ಬರುತ್ತವೆ ಎಂದು ಭಾವಿಸುತ್ತಾರೆ. ಆದರೆ ಅದರಲ್ಲಿ ಯಾವುದೇ ಸತ್ಯವಿಲ್ಲ ಎಂದು ತಜ್ಞರು ಹೇಳುತ್ತಾರೆ.ಹೃದಯದ ಆರೋಗ್ಯಕ್ಕೆ ಕೋಳಿ ಮೊಟ್ಟೆ ಶತ್ರು ಅಲ್ಲ, ಮಿತ್ರ ಎನ್ನುತ್ತಾರೆ ವೈದ್ಯರು.

PREV
16
ಶತ್ರು ಅಲ್ಲ, ಮಿತ್ರ

ಕೋಳಿ ಮೊಟ್ಟೆಯನ್ನ ಸಾಮಾನ್ಯವಾಗಿ ಎಲ್ಲರೂ ತಿಂತಾರೆ. ಬಹಳಷ್ಟು ಜನ ಇಷ್ಟಪಟ್ಟು ತಿನ್ನುವ ಈ ಮೊಟ್ಟೆ ನಮ್ಮ ಆರೋಗ್ಯಕ್ಕೆ ತುಂಬಾ ಸಹಾಯ ಮಾಡುತ್ತದೆ. ಆದರೆ ಈ ಮೊಟ್ಟೆಯ ವಿಷಯದಲ್ಲಿ ಅನೇಕರಿಗೆ ಹಲವು ತಪ್ಪು ಕಲ್ಪನೆಗಳಿವೆ. ಕೋಳಿ ಮೊಟ್ಟೆ ತಿಂದರೆ ಕೊಲೆಸ್ಟ್ರಾಲ್ ಹೆಚ್ಚುತ್ತದೆ, ಇದರಿಂದ ಹೃದಯ ಸಂಬಂಧಿ ಸಮಸ್ಯೆಗಳು ಬರುತ್ತವೆ ಎಂದು ಭಾವಿಸುತ್ತಾರೆ. ಆದರೆ ಅದರಲ್ಲಿ ಯಾವುದೇ ಸತ್ಯವಿಲ್ಲ ಎಂದು ತಜ್ಞರು ಹೇಳುತ್ತಾರೆ. ಹೃದಯದ ಆರೋಗ್ಯಕ್ಕೆ ಕೋಳಿ ಮೊಟ್ಟೆ ಶತ್ರು ಅಲ್ಲ, ಮಿತ್ರ ಎನ್ನುತ್ತಾರೆ ವೈದ್ಯರು.

26
ಹೃದಯದ ಆರೋಗ್ಯ ಸುಧಾರಿಸುತ್ತೆ

ದಿನಕ್ಕೆ ಒಂದು ಕೋಳಿ ಮೊಟ್ಟೆ ತಿನ್ನುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ, ಮೆದುಳು ಚುರುಕಾಗುತ್ತದೆ ಮತ್ತು ದೀರ್ಘಾಯುಷ್ಯ ಸಾಧ್ಯ ಎಂದು ಪ್ರಸಿದ್ಧ ಕಾರ್ಡಿಯೋಥೊರಾಸಿಕ್ ಸರ್ಜನ್ ಡಾ. ಜೆರೆಮಿ ಲಂಡನ್ ಹೇಳಿದ್ದಾರೆ.

36
ಒಂದು ದೊಡ್ಡ ಮೊಟ್ಟೆಯಲ್ಲಿ ಏನೆಲ್ಲಾ ಇರುತ್ತೆ?

*ಒಂದು ದೊಡ್ಡ ಕೋಳಿ ಮೊಟ್ಟೆಯಲ್ಲಿ ಉತ್ತಮ ಗುಣಮಟ್ಟದ ಪ್ರೋಟೀನ್ ಇರುತ್ತದೆ. ಇದು ದೇಹದ ಅಂಗಾಂಶಗಳು ಮತ್ತು ಸ್ನಾಯುಗಳ ದುರಸ್ತಿಗೆ ಅವಶ್ಯಕ.
*ಇನ್ನು ಕೋಲಿನ್- ಜ್ಞಾಪಕಶಕ್ತಿ, ಮೆದುಳಿನ ಕಾರ್ಯವನ್ನು ಸುಧಾರಿಸುವ ಪ್ರಮುಖ ಪೋಷಕಾಂಶ.
*ವಿಟಮಿನ್‌ಗಳಾದ ಎ, ಡಿ, ಇ, ಬಿ12, ಫೋಲೇಟ್- ಕಣ್ಣು, ಚರ್ಮ, ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತವೆ.
*ಆ್ಯಂಟಿಆಕ್ಸಿಡೆಂಟ್‌ಗಳಾದ ಲುಟೀನ್ ಮತ್ತು ಜಿಯಾಕ್ಸಾಂಥಿನ್- ಕಣ್ಣಿನ ಆರೋಗ್ಯವನ್ನು ಕಾಪಾಡುತ್ತವೆ. ವಯಸ್ಸಾಗುವಿಕೆಯ ಪರಿಣಾಮಗಳನ್ನು ಕಡಿಮೆ ಮಾಡುತ್ತವೆ. 

46
ಇದೆಲ್ಲಾ ತಪ್ಪು ತಿಳುವಳಿಕೆ

ಮೊಟ್ಟೆಗಳಲ್ಲಿ ಕೊಲೆಸ್ಟ್ರಾಲ್ ಇದ್ದರೂ, ಅದು ನಮ್ಮ ರಕ್ತದಲ್ಲಿರುವ 'ಕೆಟ್ಟ ಕೊಲೆಸ್ಟ್ರಾಲ್' ಅನ್ನು ಹೆಚ್ಚಿಸುವುದಿಲ್ಲ. ಸಂಶೋಧನೆಗಳ ಪ್ರಕಾರ, 70% ಜನರು ಪ್ರತಿದಿನ ಮೊಟ್ಟೆ ತಿಂದರೂ ರಕ್ತದ ಕೊಲೆಸ್ಟ್ರಾಲ್‌ನಲ್ಲಿ ದೊಡ್ಡ ಬದಲಾವಣೆ ಇರುವುದಿಲ್ಲ. 30% ಜನರಲ್ಲಿ ಸ್ವಲ್ಪ ಮಾತ್ರ ಹೆಚ್ಚಾಗುತ್ತದೆ. ಆದರೂ, ಮೊಟ್ಟೆಯಲ್ಲಿರುವ ಒಳ್ಳೆಯ ಕೊಲೆಸ್ಟ್ರಾಲ್ ಹೃದಯವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ಮೊಟ್ಟೆ ತಿನ್ನುವುದರಿಂದ ಹೃದ್ರೋಗ ಬರುತ್ತದೆ ಎಂದುಕೊಳ್ಳುವುದು ತಪ್ಪು ಎನ್ನುತ್ತಾರೆ ತಜ್ಞರು.

56
ಹೃದಯದ ಆರೋಗ್ಯ ಚೆನ್ನಾಗಿರುತ್ತೆ

ದಿನಕ್ಕೆ ಒಂದು ಮೊಟ್ಟೆ ತಿನ್ನುವುದರಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ. ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಮೆದುಳು ಚುರುಕಾಗಿ ಕೆಲಸ ಮಾಡುತ್ತದೆ. ಜ್ಞಾಪಕಶಕ್ತಿ ಸುಧಾರಿಸುತ್ತದೆ. ತೂಕ ನಿಯಂತ್ರಣದಲ್ಲಿರುತ್ತದೆ. ಹೆಚ್ಚುವರಿಯಾಗಿ, ಮೊಟ್ಟೆಗಳು ಒಮೆಗಾ-3 ಸಮೃದ್ಧವಾಗಿದ್ದರೆ, ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡಿ ಹೃದಯದ ಆರೋಗ್ಯವನ್ನು ಮತ್ತಷ್ಟು ಬಲಪಡಿಸುತ್ತವೆ.

66
ಬೇಯಿಸಿದ ಮೊಟ್ಟೆ

ಹಳದಿ ಲೋಳೆ ಸೇರಿದಂತೆ ಪೂರ್ತಿ ಮೊಟ್ಟೆಯನ್ನು ತಿನ್ನಿ. ಅದರಲ್ಲಿಯೇ ಹೆಚ್ಚು ಪೋಷಕಾಂಶಗಳಿರುತ್ತವೆ. ಬೇಯಿಸಿದ ಕೋಳಿ ಮೊಟ್ಟೆಯನ್ನು ಮಾತ್ರ ತೆಗೆದುಕೊಳ್ಳಬೇಕು. ಎಣ್ಣೆಯಲ್ಲಿ ಹುರಿದು ತಿನ್ನಬಾರದು. ತರಕಾರಿಗಳು, ಸಿರಿಧಾನ್ಯಗಳು ಅಥವಾ ಧಾನ್ಯಗಳೊಂದಿಗೆ ಸೇರಿಸಿ ತೆಗೆದುಕೊಂಡರೆ ಹೆಚ್ಚು ಪ್ರಯೋಜನಕಾರಿ. ದಿನಕ್ಕೆ ಒಂದು ಮೊಟ್ಟೆ ತಿಂದರೆ ಸಾಕು. ಇದಲ್ಲದೆ... ನಿಯಮಿತವಾಗಿ ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ತಪ್ಪದೇ ಪರೀಕ್ಷಿಸಿಕೊಳ್ಳುತ್ತಿರಬೇಕು.

Read more Photos on
click me!

Recommended Stories