ಹಿಟ್ಟು ಕಲಸುವಾಗ ನೀರಿನ ಜೊತೆ ಈ ಒಂದು ಪದಾರ್ಥ ಬೆರೆಸಿದ್ರೆ ಚಪಾತಿ ರಾತ್ರಿಯಾದ್ರೂ ಹೂವ ಇದ್ದಂಗೆ ಇರುತ್ತೆ

Published : Jun 18, 2026, 09:34 PM IST

Soft chapati dough recipe: ಚಪಾತಿ ಮಾಡಿದ ಸ್ವಲ್ಪ ಹೊತ್ತಲ್ಲೇ ಗಟ್ಟಿಯಾಗಿ ಹಪ್ಪಳದ ಹಾಗೆ ಆಗ್ತಿದ್ಯಾ? ತಿನ್ನೋಕೆ ಕಷ್ಟ ಆಗ್ತಿದ್ಯಾ? ಹಾಗಿದ್ರೆ, ಹಿಟ್ಟು ಕಲಸುವಾಗ ನೀರಿನ ಜೊತೆಯಲ್ಲೇ ಈ ಒಂದು ಪದಾರ್ಥ ಬೆರೆಸಿದರೆ ಸಾಕು. ಬೆಳಗ್ಗೆ ಮಾಡಿದ ಚಪಾತಿ ರಾತ್ರಿವರೆಗೂ ಮೆತ್ತಗಿರುತ್ತೆ. 

PREV
13
ಈ ಚಿಕ್ಕ ಟ್ರಿಕ್ ಫಾಲೋ ಮಾಡಿ
ನಮ್ಮ ದೇಶದಲ್ಲಿ ಹೆಚ್ಚಿನವರು ಚಪಾತಿ ತಿನ್ನಲು ಇಷ್ಟಪಡುತ್ತಾರೆ. ಆದರೆ, ಚಪಾತಿ ಮಾಡುವುದು ಮಾತ್ರ ಹಲವರಿಗೆ ಕಷ್ಟದ ಕೆಲಸ. ಎಷ್ಟೇ ಕಷ್ಟಪಟ್ಟು ಹಿಟ್ಟು ಕಲಸಿ ಚಪಾತಿ ಮಾಡಿದರೂ, ಸ್ವಲ್ಪ ಹೊತ್ತಲ್ಲೇ ಅದು ಗಟ್ಟಿಯಾಗಿಬಿಡುತ್ತದೆ. ಹಪ್ಪಳದಂತಾದ ಚಪಾತಿ ತಿನ್ನುವುದು ತುಂಬಾ ಕಷ್ಟ. ಅಂಥವರು ಹಿಟ್ಟು ಕಲಸುವಾಗ ಈ ಚಿಕ್ಕ ಟ್ರಿಕ್ ಫಾಲೋ ಮಾಡಿದರೆ ಸಾಕು. ಅದೇನು ಅಂತ ಈಗ ನೋಡೋಣ.
23
ಇವೆರೆಡರಲ್ಲಿ ಒಂದನ್ನೂ ಆಯ್ಕೆ ಮಾಡಿಕೊಳ್ಳಿ

ಚಪಾತಿ ಹಿಟ್ಟು ಕಲಸುವಾಗ ಎಲ್ಲರೂ ನೀರನ್ನು ಬಳಸುತ್ತಾರೆ. ಆದರೆ, ಬರೀ ನೀರಿನಿಂದ ಹಿಟ್ಟು ಕಲಸಿದರೆ ಚಪಾತಿ ಬೇಗನೆ ಗಟ್ಟಿಯಾಗುತ್ತದೆ.  ಹಾಗಾಗಿ ಹಿಟ್ಟಿಗೆ ಚೀಸ್ ಬೆರೆಸಬೇಕು. ಚೀಸ್ ಅಂದರೆ ಮಾರುಕಟ್ಟೆಯಲ್ಲಿ ಸಿಗುವ ಚೀಸ್ ಅಲ್ಲ, ನಿಂಬೆರಸ ಬಳಸಿ ಹಾಲನ್ನು ಒಡೆದು ತಯಾರಿಸಿದ ಪನೀರ್. ಇದನ್ನು ಹಿಟ್ಟಿಗೆ ಹಾಕಿ ಕಲಸಬೇಕು. ಹೀಗೆ ಮಾಡಿದರೆ ಚಪಾತಿ ಹತ್ತಿಯಂತೆ ಮೃದುವಾಗಿ ಬರುತ್ತದೆ. ಇಲ್ಲದಿದ್ದರೆ, ಗೋಧಿ ಹಿಟ್ಟಿಗೆ ಸ್ವಲ್ಪ ಹುಳಿ ಮೊಸರು ಮತ್ತು ಬಿಸಿ ನೀರು ಹಾಕಿ ಕಲಸಬಹುದು. ಹೀಗೆ ಮಾಡುವುದರಿಂದಲೂ ಚಪಾತಿ ಮೆತ್ತಗೆ ಬರುತ್ತದೆ. ಬೆಳಗ್ಗೆ ಮಾಡಿದರೂ ಮಧ್ಯಾಹ್ನದವರೆಗೂ ಮೃದುವಾಗಿರುತ್ತದೆ. ಯಾಕೆಂದರೆ, ಮೊಸರಿನಲ್ಲಿರುವ ನೈಸರ್ಗಿಕ ಆಮ್ಲಗಳು ಹಿಟ್ಟಿನಲ್ಲಿರುವ ಗ್ಲುಟೆನ್ ಅನ್ನು ಮೃದುವಾಗಿಸುತ್ತವೆ. 

33
ಅರ್ಧ ಗಂಟೆ ಬಿಟ್ಟು ಚಪಾತಿ ಮಾಡಿ

ಅಷ್ಟೇ ಅಲ್ಲ,  ಎಷ್ಟೋ ಮಂದಿ ಹಿಟ್ಟು ಕಲಸುವಾಗ ಸಾಮಾನ್ಯ ತಣ್ಣೀರು ಬಳಸುತ್ತಾರೆ. ಅದರ ಬದಲು, ನೀರನ್ನು ಸ್ವಲ್ಪ ಬಿಸಿ ಮಾಡಿ, ಉಗುರು ಬೆಚ್ಚಗಿರುವಾಗ ಆ ನೀರಿನಿಂದ ಹಿಟ್ಟು ಕಲಸಿದರೆ ಸಾಕು. ಆಗಲೂ ಚಪಾತಿಗಳು ಮೆತ್ತಗೆ ಬರುತ್ತವೆ. ಒಂದೇ ಸಾರಿಗೆ ಪೂರ್ತಿ ನೀರು ಹಾಕಬಾರದು. ಸ್ವಲ್ಪ ಸ್ವಲ್ಪ ನೀರು ಹಾಕುತ್ತಾ ಕಲಸಬೇಕು. ಹಿಟ್ಟು ಕಲಸಿದ ನಂತರ, ಮೇಲೆ ಸ್ವಲ್ಪ ತುಪ್ಪ ಸವರಬೇಕು. ಅರ್ಧ ಗಂಟೆ ಬಿಟ್ಟು ಚಪಾತಿ ಮಾಡಿದರೆ, ನಿಮಗೆ ಇಷ್ಟವಾದ ಹಾಗೆ ಮೃದುವಾಗಿ ಬರುತ್ತವೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories