ಅವಲಕ್ಕಿ, ಸಬ್ಬಕ್ಕಿ ಬೇಡವೇ ಬೇಡ; ಮಲ್ಲಿಗೆಯಂಥ ಮಲ್‌ಬಾರ್ ಇಡ್ಲಿಯ ಹಿಟ್ಟು ಮಾಡೋದೇ ಡಿಫರೆಂಟ್

Published : Jun 18, 2026, 01:04 PM IST

ಹೋಟೆಲ್‌ನಲ್ಲಿ ಸಿಗುವ ಮಲ್ಲಿಗೆಯಂಥ ಮೃದುವಾದ ಇಡ್ಲಿ ಮಾಡಲು ಮಲ್‌ಬಾರ್ ಶೈಲಿಯು ಉತ್ತಮ. ಇಡ್ಲಿ ಹಿಟ್ಟಿಗೆ ನೆನೆಸಿದ ಮೂರು ಪದಾರ್ಥ ಸೇರಿಸಿ ರುಬ್ಬುವುದರಿಂದ ಇಡ್ಲಿಗಳು ಹತ್ತಿಯಂತೆ ಮೃದುವಾಗುತ್ತವೆ. ಈ ವಿಧಾನದಿಂದ ಮಾಡಿದ ಇಡ್ಲಿಗಳು ದಿನವಿಡೀ ತಮ್ಮ ಮೃದುತ್ವವನ್ನು ಉಳಿಸಿಕೊಳ್ಳುತ್ತವೆ.

PREV
15
ಮಲ್ಲಿಗೆಯಂಥ ಇಡ್ಲಿ

ಹೋಟೆಲ್‌ನಲ್ಲಿ ಸಿಗುವ ಮಲ್ಲಿಗೆಯಂಥ ಇಡ್ಲಿ ಮಾಡಲು ಗೃಹಿಣಿಯರು ಪ್ರಯತ್ನಿಸುತ್ತಿರುತ್ತಾರೆ. ಕೆಲವರು ಹಿಟ್ಟು ರುಬ್ಬಿಕೊಳ್ಳುವಾಗ ಅವಲಕ್ಕಿ, ಮಂಡಕ್ಕಿ, ಐಸ್ ಕ್ಯೂಬ್, ವಿನೇಗರ್ ಸೇರಿಸಿಕೊಳ್ಳುವಂತೆ ಸಲಹೆ ನೀಡುತ್ತಾರೆ. ಆದರೆ ಮಲ್‌ಬಾರ್ ಇಡ್ಲಿಯ ಹಿಟ್ಟು ಮಾಡಿಕೊಳ್ಳೋದು ವಿಭಿನ್ನ ಮತ್ತು ವಿಶೇಷವಾಗಿದೆ.

25
ಮಲ್‌ಬಾರ್ ಶೈಲಿಯ ಇಡ್ಲಿ ಹಿಟ್ಟು

ಮಲ್‌ಬಾರ್ ಹಿಟ್ಟು ಮಾಡಿಕೊಳ್ಳಲು ನಿಮಗೆ ಯಾವುದಾದ್ರು ಒಂದು ಹಪ್ಪಳ ಬೇಕಾಗುತ್ತದೆ. ಈ ಹಪ್ಪಳ ಸೇರಿಸೋದರಿಂದ ಇಡ್ಲಿಯ ರುಚಿ ತುಂಬಾನೇ ವಿಶೇಷವಾಗುತ್ತದೆ. ಇದೆಲ್ಲದರ ಜೊತೆ ಹಿಟ್ಟು ರುಬ್ಬಿಕೊಳ್ಳುವ ವಿಧಾನವೂ ಭಿನ್ನವಾಗಿದೆ. ಮಲ್‌ಬಾರ್ ಇಡ್ಲಿ ಹಿಟ್ಟು ಮಾಡಿಕೊಳ್ಳೋದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ.

35
ಎರಡು ಹಪ್ಪಳ

ಒಂದು ಬೌಲ್‌ಗೆ ಎರಡು ಕಪ್ ಅಕ್ಕಿ, ಎರಡು ಟೀ ಸ್ಪೂನ್‌ನಷ್ಟು ಉದ್ದಿನಬೇಳೆ ಹಾಕಿಕೊಂಡು ಕನಿಷ್ಠ 5 ರಿಂದ 6 ಗಂಟೆ ನೆನಸಿಟ್ಟುಕೊಳ್ಳಿ. ಇದರ ಜೊತೆಯಲ್ಲಿಯೇ ನಿಮ್ಮ ಮನೆಯಲ್ಲಿರೋ ಯಾವುದಾದ್ರು ಎರಡು ಹಪ್ಪಳವನ್ನು ನೀರಿನಲ್ಲಿ ನೆನಸಿಟ್ಟುಕೊಳ್ಳಬೇಕು.

45
ಹಿಟ್ಟು ರುಬ್ಬಿಕೊಳ್ಳುವ ವಿಧಾನ

ಐದಾರು ಗಂಟೆ ಬಳಿಕ ಅಕ್ಕಿ-ಉದ್ದಿನಬೇಳೆ ರುಬ್ಬಿಕೊಳ್ಳುವಾಗ ನೆನಸಿಟ್ಟುಕೊಂಡಿರುವ ಹಪ್ಪಳ, ಒಂದು ಬೌಲ್ ಅನ್ನ, 2 ಟೀ ಸ್ಪೂನ್ ಸಕ್ಕರೆ ಸೇರಿಸಿಕೊಳ್ಳಿ. ನಂತರ ಎಲ್ಲವನ್ನು ಇಡ್ಲಿ ಹದಕ್ಕೆ ರುಬ್ಬಿಕೊಂಡು ಮುಚ್ಚಳ ಮುಚ್ಚಿ ಕನಿಷ್ಠ 8 ಗಂಟೆಯಾದ್ರೂ ಎತ್ತಿಟ್ಟುಕೊಳ್ಳಬೇಕು. ಹಪ್ಪಳ ಸೇರಿಸೋದರಿಂದ ಹಿಟ್ಟು ಚೆನ್ನಾಗಿ ಹುದುಗುತ್ತದೆ. ನಿಮಗೆ ಹಿಟ್ಟು ನೆನಸಲು ಸಮಯ ಇಲ್ಲದಿದ್ರೆ ಅರ್ಧ ಟೀ ಸ್ಪೂನ್‌ನಷ್ಟು ಯೀಸ್ಟ್ ಸೇರಿಸಿಕೊಳ್ಳಬಹುದು.

55
ಸಂಜೆಯವರೆಗೂ ಸಾಫ್ಟ್ ಆಗಿರುತ್ತೆ ಮಲ್‌ಬಾರ್ ಇಡ್ಲಿ

ಕಡಿಮೆ ಉದ್ದಿನಬೇಳೆ ಜೊತೆ ಒಂದೆರಡು ಹಪ್ಪಳ ಸೇರಿಸೋದರಿಂದ ನಿಮ್ಮ ಇಡ್ಲಿ ಹತ್ತಿಯಂತೆ ಮೃದುವಾಗುತ್ತದೆ. ಬೆಳಗ್ಗೆ ಮಾಡಿದ ಇಡ್ಲಿ ಸಂಜೆಯವರೆಗೂ ಮೃದುವಾಗಿರುತ್ತದೆ. ಹಾಗಾಗಿ ಸಂಜೆ ತಿಂಡಿಗೂ ನೀವು ರುಚಿಕರವಾದ ಇಡ್ಲಿ ಮಾಡಿಕೊಳ್ಳಬೇಕು. ಕೊಬ್ಬರಿ, ಕಡಲೆಕಾಯಿ ಚಟ್ನಿಯೊಂದಿಗೆ ಅಥವಾ ಸಾಂಬರ್‌ ಜೊತೆಯಲ್ಲಿಯೂ ಇಡ್ಲಿಯನ್ನು ಸವಿಯಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories