ಮೊಟ್ಟೆ ಜೊತೆ ಹಾಲು ಮಿಕ್ಸ್ ಮಾಡಿ ತಿನ್ನಬಹುದೆ? ಆಯುರ್ವೇದ ಏನು ಹೇಳುತ್ತೆ

Published : Jun 17, 2026, 05:01 PM IST

Milk and Egg: ಇತ್ತೀಚೆಗೆ ಆಮಿರ್ ಖಾನ್ ಹೇಳಿರುವ ಆಮ್ಲೆಟ್ ರೆಸಿಪಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ರೆಸಿಪಿಯಲ್ಲಿ ಹಾಲು ಮತ್ತು ಮೊಟ್ಟೆ ಬೆರೆಸಿರುವ ಬಗ್ಗೆ ಪ್ರಶ್ನೆಗಳು ಎದ್ದಿವೆ. ಈ ಕಾಂಬಿನೇಶನ್ ಬಗ್ಗೆ ಆಯುರ್ವೇದ ಏನು ಹೇಳುತ್ತದೆ. ಮೊಟ್ಟೆ ಜೊತೆ ಹಾಲು ಸೇರಿಸಬಹುದೇ? ಇಲ್ಲಿದೆ ಮಾಹಿತಿ.

PREV
16
ಆಮಿರ್ ಖಾನ್ ಅವರ ಆಮ್ಲೆಟ್ ರೆಸಿಪಿ ವೈರಲ್

ಆಮಿರ್ ಖಾನ್ ತಮ್ಮ ಮದುವೆಯ ಕಾರಣದಿಂದ ಹಾಗೂ ತಮ್ಮ ಫಿಟ್ನೆಸ್‌ಗಾಗಿ ಹೆಚ್ಚಾಗಿ ಸುದ್ದಿಯಲ್ಲಿರುತ್ತಾರೆ. ಅವರು ತಮ್ಮ ಆರೋಗ್ಯಕರ ಆಹಾರ ಪದ್ಧತಿಗೆ ಹೆಸರುವಾಸಿಯಾಗಿದ್ದಾರೆ; ಇತ್ತೀಚೆಗೆ, ಅವರು ಹೇಳಿದ ಮೊಟ್ಟೆಯ ರೆಸಿಪಿಯೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

26
ಸ್ಕ್ರಾಂಬಲ್ಡ್ ಎಗ್‌ಗೆ ಹಾಲು ಸೇರಿಸುವ ಆಮೀರ್ ಖಾನ್

ಆಮೀರ್ ಖಾನ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮಗೆ ಇಷ್ಟವಾದ ಆಮ್ಲೆಟ್‌ ರೆಸಿಪಿ ಹಂಚಿಕೊಂಡಿದ್ದು, ಇದೀಗ ವೈರಲ್ ಆಗಿದ್ದು, ಅನೇಕ ಜನರು ಇದನ್ನು ಟ್ರೈ ಮಾಡಲು ಉತ್ಸುಕರಾಗಿದ್ದಾರೆ. ಮೊಟ್ಟೆಗಳನ್ನು ಬೀಟ್ ಮಾಡುವಾಗ ಅದಕ್ಕೆ ಅವರು ಸ್ವಲ್ಪ ಹಾಲು ಸೇರಿಸುತ್ತಾರೆ ಎನ್ನುವುದಾಗಿ ಹೇಳಿದ್ದರು, ಹೀಗೆ ಮಾಡೋದ್ರಿಂದ ಆಮ್ಲೆಟ್ ಅಥವಾ ಸ್ಕ್ರಾಂಬಲ್ಡ್ ಎಗ್‌ ತುಂಬಾನೆ ಮೃದುವಾಗುವುದು ಹಾಗೂ ತಿನ್ನಲು ಟೇಸ್ಟಿಯಾಗಿರುತ್ತದೆ ಎಂದು ಹೇಳಿದ್ದರು.

36
ಆಯುರ್ವೇದ ಏನು ಹೇಳುತ್ತದೆ?

ಆದರೆ ಹಾಲಿನೊಂದಿಗೆ ಮೊಟ್ಟೆಗಳನ್ನು ಸೇವಿಸುವುದು ಸರಿಯೇ? ಆಯುರ್ವೇದದ ಪ್ರಕಾರ, ಹಸಿ ಮೊಟ್ಟೆಗಳೊಂದಿಗೆ ಹಾಲು ಸೇವಿಸುವುದು ಆರೋಗ್ಯಕ್ಕೆ ಪ್ರಯೋಜನಕಾರಿಯಲ್ಲ; ಇದು ಸರಿಯಾದ ಆಹಾರ ಕಾಂಬಿನೇಶನ್ ಅಲ್ವೇ ಅಲ್ಲ. 'ದಿ ಆಯುರ್ವೇದ ಎಕ್ಸ್‌ಪೀರಿಯೆನ್ಸ್' ಪ್ರಕಾರ, ಆಯುರ್ವೇದವು ಮೊಟ್ಟೆ ಮತ್ತು ಹಾಲಿನಂತಹ ಕೆಲವು ಆಹಾರಗಳನ್ನು ಒಟ್ಟಿಗೆ ಸೇವಿಸುವುದರಿಂದ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರಬಹುದು ಎಂದಿದೆ.

46
ಹಾಲು ಮತ್ತು ಮೊಟ್ಟೆಗಳನ್ನು ಒಟ್ಟಿಗೆ ಏಕೆ ಸೇವಿಸಬಾರದು?

ಹಾಲು ಮತ್ತು ಮೊಟ್ಟೆ ವಿಭಿನ್ನ ಸ್ವಭಾವಗಳನ್ನು ಹೊಂದಿವೆ. ಹಾಲು ತಂಪಾಗಿಸುವ, ಸಿಹಿಯಾದ ಮತ್ತು ಭಾರವಾದ ಅಂಶವನ್ನು ಹೊಂದಿದ್ದು, ದೇಹಕ್ಕೆ ಪೋಷಣೆ ಮತ್ತು ಶಕ್ತಿಯನ್ನು ಒದಗಿಸುತ್ತದೆ. ಮತ್ತೊಂದೆಡೆ, ಮೊಟ್ಟೆಗಳು ಹೀಟ್ ಗುಣ ಹೊಂದಿದ್ದು, ಅವು ಪ್ರೋಟೀನ್‌ನ ಉತ್ತಮ ಮೂಲವಾಗಿದ್ದು ಹೆವಿಯಾಗಿದೆ. ಆದರೆ ಅವುಗಳನ್ನು ಒಟ್ಟಿಗೆ ಸೇವಿಸುವುದರಿಂದ ಹೊಟ್ಟೆಗೆ ಜೀರ್ಣಕ್ರಿಯೆ ಕಷ್ಟವಾಗುತ್ತದೆ.

56
ಜೀರ್ಣಕ್ರಿಯೆ ದುರ್ಬಲಗೊಳ್ಳಬಹುದು

ಮೊಟ್ಟೆ ಮತ್ತು ಹಾಲನ್ನು ಒಟ್ಟಿಗೆ ಸೇವಿಸುವುದರಿಂದ ಗ್ಯಾಸ್ಟ್ರಿಕ್, ಹೆವಿ ಫೀಲ್, ಆಸಿಡಿಟಿ ಅಥವಾ ಹೊಟ್ಟೆ ಉಬ್ಬರ ಮುಂತಾದ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಕಾಂಬಿನೇಶನ್ ದೀರ್ಘಕಾಲ ಸೇವಿಸಿದರೆ ಫುಡ್ ಪಾಯ್ಸನ್ ಆಗಬಹುದು, ಇದು ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಮುಖ್ಯವಾಗಿ, ಹಾಲಿನೊಂದಿಗೆ ಹಸಿ ಮೊಟ್ಟೆಗಳನ್ನು ಸೇವಿಸುವುದನ್ನು ತಪ್ಪಿಸಬೇಕು. ಚೆನ್ನಾಗಿ ಬೇಯಿಸಿದ ಮೊಟ್ಟೆಗಳನ್ನು ಸಹ ಹಾಲಿನೊಂದಿಗೆ ತಿನ್ನವುದು ಸೂಕ್ತವಲ್ಲ ಎನ್ನುತ್ತೆ ಆಯುರ್ವೇದ.

66
ಅವುಗಳನ್ನು ಹೇಗೆ ಸೇವಿಸಬೇಕು?

ನೀವು ಎರಡನ್ನೂ ಸೇವಿಸಲು ಇಷ್ಟಪಡುತ್ತಿದ್ದರೆ, ಮೊಟ್ಟೆ ಮತ್ತು ಹಾಲನ್ನು ಬೇರೆ ಬೇರೆ ಸಮಯದಲ್ಲಿ ಸೇವಿಸಿ, ಅವುಗಳ ನಡುವೆ ಕನಿಷ್ಠ 1 ರಿಂದ 2 ಗಂಟೆಗಳ ಅಂತರವಿರಲಿ. ಮೊಟ್ಟೆ ತಯಾರಿಸುವಾಗ ಹಾಲಿಗೆ ಬದಲಾಗಿ ನೀರನ್ನು ಬಳಸಿ. ಪ್ರತ್ಯೇಕವಾಗಿ ಹಾಲು ಕುಡಿಯಿರಿ. ಅರಿಶಿನ ಹಾಲು ಉತ್ತಮ ಆಯ್ಕೆ. ರೊಟ್ಟಿ ಅಥವಾ ಅನ್ನದೊಂದಿಗೆ ಮೊಟ್ಟೆಗಳನ್ನು ಸೇವಿಸಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories