ಜೇನುತುಪ್ಪ ಅಸಲಿಯೇ, ನಕಲಿಯೇ ಎಂದು ಹೀಗೆ ಗುರುತಿಸಿ

First Published | Jul 9, 2022, 5:28 PM IST

ಚರ್ಮದ ಸೌಂದರ್ಯ ಹೆಚ್ಚಿಸುವುದರಿಂದ ಹಿಡಿದು ತೂಕಕಡಿಮೆ ಮಾಡಲು ಜೇನುತುಪ್ಪವನ್ನು ಬಳಸಲಾಗುತ್ತೆ. ಇದು ನಿಮ್ಮ ಚರ್ಮ ಮತ್ತು ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತೆ. ಜೇತುತುಪ್ಪದಿಂದ ಏನೆಲ್ಲಾ ಪ್ರಯೋಜನಗಳಿವೆ ಅನ್ನೋದನ್ನು ನಾವು ನೋಡೋಣ. 


ಇತ್ತೀಚಿನ ದಿನಗಳಲ್ಲಿ ಕಲಬೆರಕೆ ಜೇನುತುಪ್ಪ(Honey) ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದು ನಿಮ್ಮ ಆರೋಗ್ಯಕ್ಕೆ ಪ್ರಯೋಜನವಾಗುವ ಬದಲು ಹಾನಿ ಮಾಡಬಹುದು. ಹಾಗಾಗಿ ಜೇನುತುಪ್ಪ ಖರೀದಿಸುವ ಮೊದಲು ಅಸಲಿ ಮತ್ತು ನಕಲಿ ಜೇನುತುಪ್ಪ ಗುರುತಿಸೋದು ಬಹಳ ಮುಖ್ಯ. ಶುದ್ಧ ಜೇನುತುಪ್ಪ ಪರೀಕ್ಷಿಸುವುದು ಹೇಗೆಂದು ತಿಳಿಯೋಣವೇ?

ಮನೆಯಲ್ಲಿ ಶುದ್ಧ ಜೇನುತುಪ್ಪವನ್ನು ಪರಿಶೀಲಿಸುವುದು ಹೇಗೆ? ಇದಕ್ಕೆ ತುಂಬಾ ಕಷ್ಟವೇನಿಲ್ಲ.ಸುಲಭವಾಗಿ ಕಂಡು ಹಿಡಿಯೋದು ಹೇಗೆ ಅನ್ನೋದನ್ನು ನೋಡೋಣ : 
ಬಿಸಿ ನೀರಿನೊಂದಿಗೆ(Hot water) ನಿಜವಾದ ಮತ್ತು ನಕಲಿ ಜೇನುತುಪ್ಪ ಗುರುತಿಸಿ. ಹೇಗೆ ಅನ್ನೋದನ್ನು ತಿಳಿಯೋಣ.  

Tap to resize

ಬಿಸಿ ನೀರಿನ ಸಹಾಯದಿಂದ ನೀವು ನಕಲಿ ಜೇನುತುಪ್ಪವನ್ನು ಗುರುತಿಸಬಹುದು. ಇದಕ್ಕಾಗಿ 1 ಲೋಟ ತೆಗೆದುಕೊಳ್ಳಿ. ಈಗ ಅದಕ್ಕೆ ಬೆಚ್ಚಗಿನ ನೀರನ್ನು ಸೇರಿಸಿ. ನಂತರ, ಅದಕ್ಕೆ 1 ಟೀಸ್ಪೂನ್ ಜೇನುತುಪ್ಪ ಸೇರಿಸಿ. 

ಜೇನುತುಪ್ಪವು ನೀರಿನಲ್ಲಿ ಕರಗಿದರೆ, ಜೇನುತುಪ್ಪದಲ್ಲಿ ಏನಾದರೂ ಬೆರೆತಿದೆ ಎಂದು ಅರ್ಥಮಾಡಿಕೊಳ್ಳಿ. ಅದೇ ಸಮಯದಲ್ಲಿ, ಅದು ಮಡಕೆಯ ಮೇಲೆ ನಿಂತರೆ, ಜೇನುತುಪ್ಪವು ನಕಲಿ ಎಂದರ್ಥ. ಇದನ್ನು ನೀವು ಸುಲಭವಾಗಿ ಮಾಡಿ ನೋಡಬಹುದು.
 

ಬ್ರೆಡ್ ನಿಂದ(Bread) ಜೇನುತುಪ್ಪ ಅಸಲಿ ಅಥವಾ ನಕಲಿ ಎಂದು ತಿಳಿಯಿರಿ  
ಅಸಲಿ ಮತ್ತು ನಕಲಿ ಜೇನುತುಪ್ಪ ಗುರುತಿಸಲು ಬ್ರೆಡ್  ಸಹ ಬಳಸಬಹುದು. ಬ್ರೆಡ್ ಮೂಲಕ ಹೇಗೆ ಜೇನು ಅಸಲಿಯೇ, ನಕಲಿಯೇ ತಿಳಿಯೋದು ಹೇಗೆ ನೋಡೋಣ. 

ನೀವು ಬ್ರೆಡ್ ಮೇಲೆ ಅಸಲಿ ಜೇನುತುಪ್ಪ ಹಾಕಿದಾಗ ಅದು ಗಟ್ಟಿಯಾಗುತ್ತೆ. ಆದರೆ ಕಲಬೆರಕೆ ಜೇನುತುಪ್ಪವು ಬ್ರೆಡ್ ಅನ್ನು ಮೃದುಗೊಳಿಸುತ್ತೆ. ನೀವು ಒಂದು ವೇಳೆ ಜೇನು ತುಪ್ಪ ಹಾಕಿದಾಗ ಬ್ರೆಡ್ ಮೃದುವಾದರೆ ಅದು ಕಲಬೆರಕೆ (Adulteration)ಅನ್ನೋದನ್ನು ಅರ್ಥ ಮಾಡಿ. 

ಹೆಬ್ಬೆರಳಿನಿಂದ(Thumb) ನಿಜವಾದ ಜೇನುತುಪ್ಪವನ್ನು ಗುರುತಿಸೋದು ಹೇಗೆ?
ಹೆಬ್ಬೆರಳಿನಿಂದ ಜೇನುತುಪ್ಪ ಗುರುತಿಸಲು ಹೆಬ್ಬೆರಳಿನ ಮೇಲೆ ಕೆಲವು ಹನಿ ಜೇನುತುಪ್ಪವನ್ನು ಹಾಕಿ. ನಂತರ ಅದರಿಂದ ಒಂದು ತಂತಿ ಮಾಡಲು ಪ್ರಯತ್ನಿಸಿ. ಜೇನುತುಪ್ಪ ಅಸಲಿಯಾಗಿದ್ದರೆ, ಅದು ದಪ್ಪವಾದ ತಂತಿಯನ್ನು ರೂಪಿಸುತ್ತೆ.

ಜೇನುತುಪ್ಪ ನಕಲಿಯಾಗಿದ್ದರೆ, ನೀವು ಹೆಬ್ಬೆರಳಿನ ಮೇಲೆ ಜೇನು ತುಪ್ಪ ಹಾಕಿದಾಗ ಅದು ಅಲ್ಲಿಯೇ ಉಳಿಯುತ್ತದೆ. ಕಲಬೆರಕೆ ಜೇನುತುಪ್ಪವನ್ನು ಹೆಬ್ಬೆರಳಿನ ಮೇಲೆ ಇಟ್ಟರೆ ಅದು ಹರಡುತ್ತೆ.  ಹೀಗೆ ಮಾಡುವ ಮೂಲಕ ನೀವು ಜೇನು ತುಪ್ಪ ಅಸಲಿಯೇ, ನಕಲಿಯೇ ಅನ್ನೋದನ್ನು ಕಂಡು ಹಿಡಿಯಬಹುದು.

Latest Videos

click me!