ನೀವು ಯಾವತ್ತಾದ್ರೂ ಕಡಲೆಕಾಯಿ ಪನೀರ್ ತಿಂದಿದ್ದೀರಾ?

First Published | Jul 2, 2022, 6:45 PM IST

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ವೇಗನ್ ಆಹಾರಗಳ (vegan food) ಕಡೆಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಇದರಲ್ಲಿ ಮೊಟ್ಟೆ, ಮಾಂಸ, ಮೀನುಗಳು ಮಾತ್ರವಲ್ಲ, ಪ್ರಾಣಿಗಳಿಂದ ಬರುವ ಯಾವುದೇ ಆಹಾರಗಳನ್ನು ಸೇವಿಸಲಾಗೋದಿಲ್ಲ. ಅಂದ್ರೆ ಹಾಲು, ಪನೀರ್ ಎಲ್ಲವನ್ನೂ ಸಹ ಅವಾಯ್ಡ್ ಮಾಡಿ ಆಹಾರ ಸೇವನೆ ಮಾಡ್ತಾರೆ..
 

ಈಗ ನಿಮ್ಮ ತಲೆಲೂ ಮೂಡಿರಬಹುದು ಹಾಗಾದ್ರೆ ಹಾಲಿನ ಪರ್ಯಾಯಗಳು ಯಾವುವು? ಅನ್ನೋದು ಅಲ್ವಾ? ಸಾಮಾನ್ಯವಾಗಿ, ಚೀಸ್ ಅಥವಾ ಪನೀರ್ ನ್ನು ಹಾಲಿನಿಂದ ತಯಾರಿಸಲಾಗುತ್ತದೆ. ಆದರೆ ವೇಗನ್ ಪನೀರ್ (vegan paneer) ವಿಷಯಕ್ಕೆ ಬಂದಾಗ, ಆರೋಗ್ಯಕರವಾದ ಪನೀರ್ ಯಾವುದು ಅನ್ನೋ ಪ್ರಶ್ನೆ ಮೂಡುತ್ತೆ? 

ನೀವು ವೇಗನ್ ಪನೀರ್ ಗಾಗಿ ಹುಡುಕಾಡುತ್ತಿದ್ದರೆ, ಇಲ್ಲಿದೆ ಕಡಲೆಕಾಯಿ ಪನೀರ್…. ಶಾಕ್ ಆಗ್ಬೇಡಿ, ಹೌದು ಇದು ಕಡಲೆಕಾಯಿಯಿಂದ ತಯಾರಿಸಲಾಗುವ ಪನೀರ್ ಆಗಿದೆ. ಇದನ್ನು ಹೇಗೆ ತಯಾರಿಸೋದು ಅನ್ನೋದನ್ನು ಇಲ್ಲಿ ತಿಳಿಸಲಾಗಿದೆ. ಹಾಗಾದರೆ ಕಡಲೆಕಾಯಿ (peanut paneer) ಪನೀರ್ ತಯಾರಿಸೋದು ಹೇಗೆ ನೋಡೋಣ.  

Tap to resize

ಕಡಲೆಕಾಯಿ ಪನೀರ್ ಮನೆಯಲ್ಲಿಯೇ ತಯಾರಿಸಲು ಬೇಕಾಗುವ ಸಾಮಾಗ್ರಿಗಳ ಬಗ್ಗೆ ಇಲ್ಲಿದೆ ಮಾಹಿತಿ:
1 ಕಪ್ ಹಸಿ ಕಡಲೆಕಾಯಿ 
1 ಮಸ್ಲಿನ್ ಬಟ್ಟೆ
1 ಸ್ಟ್ರೈನರ್
2 ಚಮಚ ನಿಂಬೆ ರಸ ಅಥವಾ ವಿನೆಗರ್
2 ಕಪ್ ನೀರು

ಕಡಲೆಕಾಯಿಯಿಂದ ಪನೀರ್ ತಯಾರಿಸಲು, ಮೊದಲು ಕಡಲೆಕಾಯಿಯನ್ನು ರಾತ್ರಿಯಿಡೀ ಅಥವಾ ನೀರಿನಲ್ಲಿ 8-10 ಗಂಟೆಗಳ ಕಾಲ ನೆನೆಸಿಡಿ. ನಂತರ ಅದನ್ನು ಜರಡಿಗೆ ಹಾಕಿ ತೊಳೆಯಿರಿ. (ನೀವು ಬಯಸಿದರೆ, ನೀವು ಕಡಲೆಕಾಯಿಯ ಸಿಪ್ಪೆಯನ್ನು ತೆಗೆಯಬಹುದು ಅಥವಾ ನೀವು ಈ ಹಂತವನ್ನು ಸ್ಕಿಪ್ ಮಾಡಬಹುದು, ಆಯ್ಕೆ ನಿಮಗೆ ಬಿಟ್ಟದ್ದು)

ಈಗ ಈ ಕಡಲೆಕಾಯಿಯನ್ನು ಸ್ವಲ್ಪ ನೀರಿನೊಂದಿಗೆ ಬ್ಲೆಂಡರ್ ನಲ್ಲಿ ಹಾಕಿ ನಯವಾದ ಪೇಸ್ಟ್ ತಯಾರಿಸಿ. ನಂತರ ಅದಕ್ಕೆ 2 ಕಪ್ ನೀರನ್ನು ಸೇರಿಸಿ ಮತ್ತು ಹಾಲು ಹೇಗಿರುತ್ತೋ ಅದೇ ರೀತಿಯಾಗಿ ತುಂಬಾ ನೀರಾಗದಂತೆ ಇದನ್ನು ತಯಾರಿಸಿ. 

ಈಗ ಕಡಲೆಕಾಯಿ ಹಾಲನ್ನು ನಿಧಾನವಾಗಿ ಜರಡಿಯ ಮೇಲೆ ಹಾಕಿ, ಉಳಿದ ತಿರುಳನ್ನು ತೆಗೆದುಹಾಕಿ ಮತ್ತು ಈಗ ನಿಮಗೆ ಸ್ವಚ್ಛವಾದ ಮತ್ತು ಶುದ್ಧವಾದ ಕಡಲೆಕಾಯಿ ಹಾಲು ಸಿಗುತ್ತದೆ. ಅದನ್ನು ಒಂದು ದೊಡ್ಡ ಬೌಲ್ ನಲ್ಲಿ ಹಾಕಿಡಿ.

ಇದರ ನಂತರ, ನೀವು ಕಡಲೆಕಾಯಿ ಹಾಲನ್ನು ಬಿಸಿ ಮಾಡಬೇಕು. ಇದಕ್ಕಾಗಿ, ಅದನ್ನು ಮಡಕೆಯಲ್ಲಿ ಹಾಕಿ ಸ್ಟೌ ಮೇಲೆ ಇಡಿ ಮತ್ತು ಸಣ್ಣ ಬೆಂಕಿಯಲ್ಲಿ ಈ ಹಾಲವೂ ಕುದಿಸಿ. ಇದರಿಂದ ದನದ ಹಾಲಿನಂತಿರುವ ಹಾಲು ದೊರೆಯುತ್ತೆ. 

ಈಗ, ಒಂದು ಬೌಲ್ ನಲ್ಲಿ ನಿಂಬೆ ರಸ ಮತ್ತು ನೀರನ್ನು ಮಿಶ್ರಣ ಮಾಡಿ ಮತ್ತು ಈ ಮಿಶ್ರಣವನ್ನು ನಿಧಾನವಾಗಿ ಹಾಲಿಗೆ ಸುರಿಯಲು ಪ್ರಾರಂಭಿಸಿ. ನೀವು ನಿಂಬೆ ಅಥವಾ ವಿನೆಗರ್ ಅನ್ನು ಸೇರಿಸಿದ ತಕ್ಷಣ, ಕಡಲೆಕಾಯಿ ಹಾಲು ಸಿಡಿಯಲು ಪ್ರಾರಂಭಿಸುತ್ತದೆ ಎಂದು ನೀವು ಗಮನಿಸಬಹುದು.

ಈಗ ಒಡೆದ ಹಾಲನ್ನು (spoiled milk) ಒಂದು ಸ್ಟ್ರೈನರ್ ಮತ್ತು ಮಸ್ಲಿನ್ ಬಟ್ಟೆಯ ಸಹಾಯದಿಂದ ಫಿಲ್ಟರ್ ಮಾಡಿ. ಇದನ್ನು ಒಂದು ತಟ್ಟೆಯಲ್ಲಿ ಇರಿಸಿ ಮತ್ತು ಅದರ ಮೇಲೆ ಭಾರವಾದ ವಸ್ತುಗಳನ್ನು ಸುಮಾರು 7-8 ಗಂಟೆಗಳ ಕಾಲ ಹಾಗೇ ಇರಿಸಿ.

ಎಂಟು ಗಂಟೆಗಳ ನಂತರ ತೆರೆದಾಗ ಕಡಲೆಕಾಯಿ ಪನೀರ್ ಸಿದ್ಧವಾಗಿರುತ್ತೆ, ಅದರ ರುಚಿ ಸಾಮಾನ್ಯ ಪನೀರ್ ಗಿಂತ ತುಂಬಾ ಒಳ್ಳೆಯದು. ಮತ್ತು ಈ ವೀಗನ್ ಪನೀರ್ ಅನ್ನು ಸಹ ತುಂಬಾ ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ. ನೀವು ಇದನ್ನು ತರಕಾರಿಗಳು, ಸಿಹಿತಿಂಡಿಗಳು ಅಥವಾ ಇತರ ಸಬ್ಜಿ ತಯಾರಿಸುವಾಗ ಬಳಕೆ ಮಾಡಬಹುದು. 

Latest Videos

click me!