ತೆಳ್ಳಗಾಗಬೇಕು ಅಂತ ಜೇನು ತುಪ್ಪ, ಬಿಸಿ ನೀರು ಕುಡಿಯುತ್ತೀರಾ?

First Published | Jul 4, 2022, 5:10 PM IST

ಆರೋಗ್ಯಕರ ಆಹಾರ (healthy food) ಸೇವಿಸಿದ ನಂತರ ನೀವು ಸಹ ತಿಳಿಯದೆ ಅಥವಾ ತುಂಬಾ ಆಸೆಯಿಂದ ಏನನ್ನಾದರೂ ತಿನ್ನುತ್ತೀರಿ, ಆದರೆ ಇದರಿಂದ ಎಷ್ಟೊಂದು ಎಫೆಕ್ಟ್ ಆಗುತ್ತೆ ಗೊತ್ತಾ? ಇದರಿಂದ ನಿಮ್ಮ ಆರೋಗ್ಯವು ಆಹಾರದ ಯಾವುದೇ ಪ್ರಯೋಜನ ಪಡಿಯೋದಿಲ್ಲ, ಬದಲಾಗಿ ಇದರಿಂದ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತೆ.

ಕೋವಿಡ್ ಬಂದಾಗಿನಿಂದ, ಹೆಚ್ಚಿನ ಜನರು ಸರಿಯಾಗಿ ಸಮತೋಲಿತ ಆಹಾರ (balanced food) ಸೇವಿಸುತ್ತಿದ್ದಾರೆ. ಅಲ್ಲದೇ  ಅವರು ಆರೋಗ್ಯಕರ ಆಹಾರ ತಿನ್ನುವತ್ತ ಹೆಚ್ಚಿನ ಗಮನ ಹರಿಸುತ್ತಾರೆ. ಆದರೆ ಇದರ ನಂತರವೂ, ಅವರು ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗುತ್ತಾರೆ ಅಥವಾ ಅನೇಕ ಆರೋಗ್ಯ ಸಮಸ್ಯೆಗಳು ಮುಂದುವರೆಯುತ್ತವೆ.

ಆರೋಗ್ಯಕರ ಆಹಾರ ತಿನ್ನುವುದೇನೋ ಸರಿ, ಆದರೆ ತಿಳಿಯದೆ ಜನರು ಸೇವಿಸುವ ಅನಾರೋಗ್ಯಕರ ಆಹಾರಗಳಿಂದಾಗಿ, ಜನರು ಈ ಆಹಾರಗಳ ಸಂಪೂರ್ಣ ಪ್ರಯೋಜನ ಪಡೆಯೋದಿಲ್ಲ. ಇಲ್ಲಿ ನಾವು ಅಂತಹ ಮೂರು ಆಹಾರಗಳ ಬಗ್ಗೆ ಮತ್ತು ಅವುಗಳನ್ನು ತಿಂದ ನಂತರ ಸಂಭವಿಸುವ ಆರೋಗ್ಯ ಸಮಸ್ಯೆ (Health Problem) ಬಗ್ಗೆ ನಿಮಗೆ ತಿಳಿಸುತ್ತೇವೆ. ಅವುಗಳನ್ನು ಸಾಧ್ಯವಾದಷ್ಟು ಅವೈಡ್ ಮಾಡಿ.

Latest Videos


ಮೊಸರು:

ಈಗ ರೈನೀ ಸೀಸನ್ (rainy season) ಮತ್ತು ಆಯುರ್ವೇದದ ಪ್ರಕಾರ, ಈ ಸೀಸನ್ ನಲ್ಲಿ ಹಾಲು ಮತ್ತು ಮೊಸರನ್ನು ಸೇವಿಸಬಾರದು. ಆದರೆ ಉಳಿದ ಸೀಸನ್ ನಲ್ಲಿ ನೀವು ಅದನ್ನು ಸೇವಿಸಬಹುದು. ಹೌದು, ಮೊಸರು ಸೇವಿಸಿದ ನಂತರ ನೀವು ಯಾವುದೇ ಡ್ರಿಂಕ್ಸ್ ಕುಡಿಯಬಾರದು ಎಂಬುದನ್ನು ನೆನಪಿನಲ್ಲಿಡಿ. ವಿಶೇಷವಾಗಿ ಬಿಸಿ ನೀರು ಅಥವಾ ಯಾವುದೇ ಹಾಟ್ ಡ್ರಿಂಕ್ ಬೇಡ.

ಜೇನುತುಪ್ಪ ತಿಂದ ನಂತರ:

ಜೇನುತುಪ್ಪ ತಿನ್ನಲು ಇಷ್ಟವಿಲ್ಲ ಎಂದು ಹೇಳುವ ಯಾವುದೇ ವ್ಯಕ್ತಿ ಈ ಜಗತ್ತಿನಲ್ಲಿ ಇಲ್ಲ. ಹೆಚ್ಚಿನ ಜನರು ಜೇನುತುಪ್ಪ (Honey) ಸೇವಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ, ಬೆಳಿಗ್ಗೆ ಬೆಚ್ಚಗಿನ ನೀರಿನೊಂದಿಗೆ ನಿಂಬೆ ಮತ್ತು ಜೇನುತುಪ್ಪ ಬೆರೆಸಿ ಕುಡಿಯುವ ಮೂಲಕ ತೂಕ ಇಳಿಸಲು ಟ್ರೈ ಮಾಡ್ತಾರೆ. ಆದರೆ ಜೇನುತುಪ್ಪವನ್ನು ಎಂದಿಗೂ ಬಿಸಿ ನೀರಿನೊಂದಿಗೆ ಸೇವಿಸಬಾರದು. ಅಲ್ಲದೇ ಜೇನುತುಪ್ಪ ಸೇವಿಸಿದ ನಂತರ ಬಿಸಿ ನೀರನ್ನು ಎಂದಿಗೂ ಕುಡಿಯಬಾರದು.

ಆಲ್ಕೋಹಾಲ್ ಸೇವನೆ:

ಪ್ರತಿದಿನ ಮದ್ಯಪಾನ ಮಾಡುವುದು ಮತ್ತು ಅದಕ್ಕೆ ವ್ಯಸನಿಯಾಗುವುದು ಆರೋಗ್ಯಕರವಲ್ಲ. ಆದರೆ ಇದನ್ನು ಅನೇಕ ಔಷಧಿಗಳನ್ನು ತಯಾರಿಸಲು ಸಹ ಬಳಸಲಾಗುತ್ತದೆ. ಮಿತ ಪ್ರಮಾಣದಲ್ಲಿ ಸೇವಿಸಿದರೆ, ದೇಹಕ್ಕೆ ಹಾನಿಯಾಗೋದಿಲ್ಲ. ಆಲ್ಕೋಹಾಲ್ (alcohol) ಕುಡಿದ ನಂತರ ನೀವು ಬೇರೆ ಯಾವುದೇ ಡ್ರಿಂಕ್ಸ್ ಕುಡಿಯಬಾರದು ಎಂಬುದನ್ನು ಯಾವಾಗಲೂ ನೆನಪಿನಲ್ಲಿಡಿ. 

ಅದನ್ನು ಏಕೆ ಮಾಡಬಾರದು?

ಮೊಸರನ್ನು ಸೇವಿಸಿದ ನಂತರ ಬಿಸಿ ನೀರು (Hot Water) ಅಥವಾ ಇತರ ಯಾವುದೇ ಹಾಟ್ ಡ್ರಿಂಕ್ಸ್ (Hot Drinks) ಕುಡಿಯುವುದರಿಂದ ಫುಡ್ ಪಾಯಿಸನ್ (Food Poison) ಸಮಸ್ಯೆ ಉಂಟಾಗಬಹುದು, ಜೀರ್ಣಕ್ರಿಯೆ ಸಮಸ್ಯೆ ಉಂಟಾಗಬಹುದು. 

ಜೇನುತುಪ್ಪದ ಸೇವಿಸಿದ ನಂತರ ಬಿಸಿ ನೀರಿನ ಸೇವನೆ ಅಥವಾ ಜೇನುತುಪ್ಪದೊಂದಿಗೆ ಬಿಸಿ ನೀರನ್ನು ಸೇವಿಸುವುದು ದೇಹದಲ್ಲಿ ಸ್ಲೋ ಪಾಯಿಸನ್ (slow poison) ಆಗಿ ಕೆಲಸ ಮಾಡುತ್ತೆ. ಇನ್ನು ಆಲ್ಕೋಹಾಲ್ ನಂತರ ಯಾವುದೇ ಹಾಟ್ ಡ್ರಿಂಕ್ ಸೇವಿಸೋದ್ರಿಂದ ವಾಂತಿಯ ಸಮಸ್ಯೆ ಉಂಟಾಗುತ್ತೆ. 

click me!