ಕೇಕ್ ತಿನ್ನೋಂದ್ರಿಂದಾನೂ ಪ್ರಯೋಜನಗಳಿವೆ ಅನ್ನೋದು ಗೊತ್ತಾ?

First Published | Sep 25, 2021, 6:55 PM IST

ಕೇಕ್ ಒಂದು ರುಚಿಕರವಾದ ತಿನಿಸು, ಇದನ್ನು ಕೆಲವರು ವಿದೇಶದ ಸಿಹಿತಿಂಡಿ ಎನ್ನುತ್ತಾರೆ. ಅದು ಜನ್ಮದಿನವಾಗಿರಲಿ, ವಾರ್ಷಿಕೋತ್ಸವವಾಗಿರಲಿ ಅಥವಾ ಮತ್ತೊಂದು ವಿಶೇಷ ದಿನವಾಗಿರಲಿ, ಕೇಕ್ (Cake) ಇಲ್ಲದೆ ಆಚರಣೆ ಅಪೂರ್ಣವಾಗಿದೆ. ಆದರೆ, ಕೆಲವರು ಈ ಕೇಕ್ ತಿನ್ನಲು ತುಂಬಾ ಹೆದರುತ್ತಾರೆ, ಏಕೆಂದರೆ ಇದು ಅನಾರೋಗ್ಯಕರ ಆಹಾರ (unhealthy food)  ಎಂದು ಅವರು ಭಾವಿಸುತ್ತಾರೆ. ಆದರೆ ಕೇಕ್ ತಿನ್ನೋದು ನಿಜವಾಗಿಯೂ  ಹಾನಿಕಾರಕವಾಗಿದೆಯೇ  ಅಥವಾ ಇದು ಕೆಲವು ಪ್ರಯೋಜನಗಳನ್ನು ಹೊಂದಿರಬಹುದೇ ನೋಡೋಣ 

ಕೇಕ್ ಅನಾರೋಗ್ಯಕರ ಆಹಾರ (unhealthy food)  ಎಂದು ಅನೇಕರು ಭಾವಿಸುತ್ತಾರೆ. ಆದರೆ ಕೇಕ್ ತಿನ್ನೋದು ನಿಜವಾಗಿಯೂ  ಹಾನಿಕಾರಕವಾಗಿದೆಯೇ  ಅಥವಾ ಇದು ಕೆಲವು ಪ್ರಯೋಜನಗಳನ್ನು ಹೊಂದಿರಬಹುದೇ ನೋಡೋಣ 

ಕೇಕ್ ಪ್ರಯೋಜನಗಳು: ನ್ಯೂಟ್ರಿಷನಿಸ್ಟ್ ಅಭಿಪ್ರಾಯವೇನು?
ಕೇಕ್ ಅನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ, ಕೇಕ್ ಮ್ಯಾಕ್ರೊಸ್ ಮತ್ತು ಸೂಕ್ಷ್ಮ ಪೋಷಕಾಂಶಗಳ ಉತ್ತಮ ಮೂಲವೆಂದು ಸಾಬೀತುಪಡಿಸಬಹುದು ಎಂದು ಪೌಷ್ಟಿಕ ತಜ್ಞರು ವಿವರಿಸುತ್ತಾರೆ.   

Tap to resize

ಯಾವಾಗಲೂ ನಟ್ಸ್, ತಾಜಾ ಹಣ್ಣುಗಳು (fresh fruits) ಅಥವಾ ಬೆರ್ರಿಗಳೊಂದಿಗೆ ಆರೋಗ್ಯಕರ ಕೇಕ್ ತಯಾರಿಸಲು ಪ್ರಯತ್ನಿಸಿ. ಸಸ್ಯಾಹಾರಿಯಾಗಿದ್ದರೆ, ಒಣಗಿದ ಹಣ್ಣುಗಳೊಂದಿಗೆ ಆಲಿವ್ ಎಣ್ಣೆ (Olive Oil) ಅಥವಾ ಕಡಲೆಕಾಯಿ ಎಣ್ಣೆಯನ್ನು (Groundnut Oil) ಮಿಶ್ರಣ ಮಾಡಬಹುದು. ಈ ಮೂಲಕ ಆರೋಗ್ಯಕರ ಕೇಕ್ (Healthy Cake) ಸೇವಿಸಬಹುದು. 

ಪೌಷ್ಟಿಕತಜ್ಞರ ಸಲಹೆಯಂತೆ, ಕೇಕ್ ಗಳಲ್ಲಿ ಕ್ಯಾಲೊರಿ (calorie) ಕೊಬ್ಬು ಅಧಿಕವಾಗಿದೆ ಎಂಬುದನ್ನು ಯಾವಾಗಲೂ ನೆನಪಿಡಿ, ಆದ್ದರಿಂದ ಅದನ್ನು ಸೀಮಿತ ಪ್ರಮಾಣದಲ್ಲಿ ತೆಗೆದುಕೊಳ್ಳಿ. ಯಾರಾದರೂ ಮಧುಮೇಹ, (diabetes) ಹೃದ್ರೋಗ (heart) ಅಥವಾ ಮೂತ್ರಪಿಂಡದ (kidney) ಕಾಯಿಲೆಯಂತಹ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಕೇಕ್ ತಿನ್ನುವ ಮೊದಲು ಯಾವಾಗಲೂ ವೃತ್ತಿಪರರನ್ನು ಸಂಪರ್ಕಿಸಿ.
 

ಶಕ್ತಿಯ ಉತ್ತಮ ಮೂಲ ಕೇಕ್ ಎಂದು ಹೇಳಬಹುದು. ವಾಸ್ತವವಾಗಿ, ಇದು ಕಾರ್ಬೋಹೈಡ್ರೇಟ್ ಗಳನ್ನು (carbo hydrate) ಹೊಂದಿರುತ್ತದೆ, ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ, ಮೆದುಳು ಮತ್ತು ಸ್ನಾಯುಗಳು ಚೆನ್ನಾಗಿ ಕೆಲಸ ಮಾಡುವಂತೆ ಮಾಡುತ್ತದೆ.

ಮೂಳೆಗಳಿಗೆ ಬಲ ಸಿಗುತ್ತದೆ - ಸಿಹಿ ತಿನ್ನಬೇಡಿ, ಹಲ್ಲುಗಳು ಹಾನಿಗೊಳಗಾಗುತ್ತವೆ...! ಎಷ್ಟೋ ಸಲ ಮನೆಯ ಹಿರಿಯರು ನಮಗೆ ಹೀಗೆ ಹೇಳುತ್ತಲೇ ಇರುತ್ತಾರೆ. ಆದರೆ ಕೇಕ್ ನಲ್ಲಿರುವ ಹಾಲು (Milk) ಮತ್ತು ಮೊಟ್ಟೆಗಳು (Eggs) ಕ್ಯಾಲ್ಸಿಯಂ (Calcium) ಅನ್ನು ಒದಗಿಸುತ್ತವೆ ಎಂದು  ತಿಳಿದಿದೆಯೇ, ಇದು ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ. (strong teeth) 

ಒತ್ತಡವನ್ನು ನಿವಾರಿಸಿ -  ಕೆಟ್ಟ ಮನಸ್ಥಿತಿಯಲ್ಲಿದ್ದೇನೆ ಎಂದು ಜನ ಆಗಾಗ್ಗೆ ಹೇಳುತ್ತಾರೆ/ ಇಂತಹ ಸಂದರ್ಭದಲ್ಲಿ ಕೇಕ್ ತಿನ್ನಿ. ವಾಸ್ತವವಾಗಿ, ಕೇಕ್ ಸೇವನೆಯು ಮೆದುಳಿನಲ್ಲಿ ಎಂಡಾರ್ಫಿನ್ (endorphins) ಮತ್ತು ಸೆರೊಟೋನಿನ್ ಹಾರ್ಮೋನುಗಳನ್ನು ಉತ್ಪಾದಿಸುತ್ತದೆ. ಇದು ಸಂತೋಷ ಮತ್ತು ನಿರಾಳತೆಯನ್ನು ಉಂಟುಮಾಡುತ್ತದೆ ಮತ್ತು ಸ್ವಲ್ಪ ಸಮಯದವರೆಗೆ ಒತ್ತಡ ಮತ್ತು ಆತಂಕವನ್ನು ನಿವಾರಿಸುತ್ತದೆ. 

ಕೆಲವೊಮ್ಮೆ ಒತ್ತಡವನ್ನು ತೊಡೆದುಹಾಕಲು (stress buster cake) ಕೇಕಿನ ಸಣ್ಣ ತುಂಡನ್ನು ತಿನ್ನುವುದು ಕೆಟ್ಟ ವಿಷಯವಲ್ಲ. ಮತ್ತೊಂದೆಡೆ, ಒತ್ತಡ, ತಲೆನೋವು (headache) ಇತ್ಯಾದಿಗಳನ್ನು ತೊಡೆದು ಹಾಕಲು ಜನರು  ಡಾರ್ಕ್ ಚಾಕೊಲೇಟ್ ಕೇಕ್ ಗಳನ್ನು ಪ್ರಯತ್ನಿಸುತ್ತಾರೆ . ಡಾರ್ಕ್ ಚಾಕೊಲೇಟ್ ಕೇಕ್ (dark chocolate cake)  ಅನ್ನು ಯುವಕರು ಸಾಕಷ್ಟು ಇಷ್ಟಪಡುತ್ತಾರೆ. ಇದು ಆರೋಗ್ಯಕ್ಕೆ ಉತ್ತಮವಾಗಿದೆ. 

ಕೇಕ್ ತಿನ್ನಿ, ತೂಕ ಹೆಚ್ಚಿಸಿಕೊಳ್ಳಿ - ಆಗಾಗ್ಗೆ ತೆಳ್ಳಗಿನ ಜನರು ತೂಕ ಹೆಚ್ಚಾಗದ ಕಾರಣ ಅಸಮಾಧಾನಗೊಳ್ಳುತ್ತಾರೆ. ತಜ್ಞರ ಪ್ರಕಾರ, ಆಹಾರದಲ್ಲಿ ಸೀಮಿತ ಪ್ರಮಾಣದ ಕೇಕ್ ಅನ್ನು ಸೇರಿಸಬಹುದು. ಆದರೆ ನೀವು ಅದರೊಂದಿಗೆ ಸಾಕಷ್ಟು  ಇತರ ಅಭ್ಯಾಸಗಳನ್ನು ರೂಢಿ ಮಾಡಿಕೊಳ್ಳಬೇಕು ಎಂಬುದನ್ನು ನೆನಪಿನಲ್ಲಿಡಿ, ಇಲ್ಲದಿದ್ದರೆ ಅದು ಹಾನಿ ಉಂಟುಮಾಡಬಹುದು. 

ಚಾಕೊಲೇಟ್ ಕೇಕ್ ಗಳು ಮಾತ್ರವಲ್ಲದೆ ತಾಜಾ ಹಣ್ಣುಗಳು ಮತ್ತು ನಟ್ಸ್ ಕೇಕ್ ಗಳನ್ನು (nuts cake)  ಸೇರಿಸಬಹುದು. ಇದು ಸಾಕಷ್ಟು ಉತ್ಕರ್ಷಣ ನಿರೋಧಕಗಳು ಮತ್ತು ಖನಿಜಗಳನ್ನು ಸಹ ಒಳಗೊಂಡಿದೆ.

ಸುಂದರ ಚರ್ಮಕ್ಕೆ - ಸುಂದರವಾದ ಚರ್ಮವು ಯಾರ ಕನಸಲ್ಲ ಹೇಳಿ, ಹುಡುಗಿಯರು ಮಾತ್ರವಲ್ಲ, ಇತ್ತೀಚಿನ ದಿನಗಳಲ್ಲಿ ಹುಡುಗರು ಕೂಡ ತಮ್ಮ ಚರ್ಮದ ಬಗ್ಗೆ ತುಂಬಾ ಜಾಗರೂಕರಾಗಿರುತ್ತಾರೆ. ಆದ್ದರಿಂದ ಕೇಕ್ ನಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ಚರ್ಮವನ್ನು ಸುಧಾರಿಸಬಹುದು ಮತ್ತು ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ
 

Latest Videos

click me!