Fruit Juice ಮಾಡೋವಾಗ ಈ ತಪ್ಪು ಮಾಡಿದ್ರೆ ನಷ್ಟಾನೆ ಜಾಸ್ತಿ

First Published | Sep 25, 2021, 5:01 PM IST

ಹಣ್ಣುಗಳಿಂದ ರಸವನ್ನು ತೆಗೆಯುವುದು ಅಥವಾ ಜ್ಯೂಸ್ ಮಾಡೋದನ್ನು ನಾವು ಅನೇಕ ಬಾರಿ ಮಾಡುತ್ತೇವೆ. ಆದರೆ ಈ ಸಂದರ್ಭದಲ್ಲಿ ಮಾಡುವ ತಪ್ಪುಗಳಿಂದ ಲಾಭದ ಬದಲು ಹಾನಿಯೇ ಜಾಸ್ತಿ. ಒಂದು ಗ್ಲಾಸ್ ತಾಜಾ ಜ್ಯೂಸ್ ಕುಡಿಯುವುದರಿಂದ ದೇಹಕ್ಕೆ ತ್ವರಿತ ಶಕ್ತಿ ಸಿಗುತ್ತದೆ ಏಕೆಂದರೆ ಅದು ರಕ್ತದಿಂದ ಸುಲಭವಾಗಿ ಹೀರಲ್ಪಡುತ್ತದೆ ಮತ್ತು ನಮಗೆ ಚೇತರಿಕೆಗೆ ಅದು ಸಹಾಯ ಮಾಡುತ್ತದೆ. ಆದರೆ ಇದನ್ನು ನಾವು ಸರಿಯಾಗಿ ಬಳಕೆ ಮಾಡುತ್ತೇವೆಯೇ? 

ಹಣ್ಣುಗಳು ಮತ್ತು ತರಕಾರಿಗಳು (Vegetables) ಸಾಕಷ್ಟು ಪ್ರಮಾಣದ ಪೋಷಕಾಂಶಗಳನ್ನು (Vitamins) ಹೊಂದಿರುತ್ತವೆ, ಆದ್ದರಿಂದ ಅವುಗಳನ್ನು ನಮ್ಮ ದೈನಂದಿನ ಆಹಾರದಲ್ಲಿ ಸೇರಿಸುವುದು ಮುಖ್ಯ. ಹಣ್ಣುಗಳಿಂದ ರಸವನ್ನು ಹೊರತೆಗೆಯುವಾಗ, ಕೆಲವು ಸಂಗತಿಗಳ ಬಗ್ಗೆ ಗಮನ ಹರಿಸಬೇಕು, ಅದರಿಂದ ಹೆಚ್ಚಿನ ಲಾಭ ಸಿಗುತ್ತದೆ. ಅವು ಯಾವುವು ನೋಡೋಣ... 

ಹೋಮ್ ಮೇಡ್ ಜ್ಯೂಸ್ ತಯಾರಿಸುವ ಸರಿಯಾದ ವಿಧಾನ
ಮನೆಯಲ್ಲಿ ತಯಾರಿಸಲಾಗುವ ಹಣ್ಣಿನ ರಸ ಹೆಚ್ಚು ಪ್ರಯೋಜನಕಾರಿ, ಅದರ ಬಗ್ಗೆ ಯಾವುದೇ ಸಂದೇಹವಿಲ್ಲ, ಆದರೆ ಅದನ್ನು ಹೊರತೆಗೆಯಲು ಸರಿಯಾದ ಮಾರ್ಗ ಯಾವುದು ಎಂಬುದನ್ನು ತಿಳಿಯುವುದು ಬಹಳ  ಮುಖ್ಯ. 

Tap to resize

ಹೆಚ್ಚಿನವರು ಮನೆಯಲ್ಲಿ ಜ್ಯೂಸ್ ತಯಾರಿಸಲು ಜ್ಯೂಸರ್ ಮಿಕ್ಸರ್ ಬಳಸುತ್ತಾರೆ, ಆದರೆ ಜ್ಯೂಸ್ ತಯಾರಿಸುವಾಗ ಕೆಲವು ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇದನ್ನು ಮಾಡದಿದ್ದರೆ ಅದರ ಸಂಪೂರ್ಣ ಪ್ರಯೋಜನ ಪಡೆಯುವುದಿಲ್ಲ. ಇದರಿಂದ ಅದರ ರುಚಿಯೂ ಕೂಡ ಹಾಳಾಗುತ್ತದೆ.  ಬೆಳಗಿನ ಉಪಹಾರದಲ್ಲಿ (Breakfast) ಜ್ಯೂಸ್ ಕುಡಿದರೆ, ನಂತರ ಕೆಲವು ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳಿ.

ಮನೆಯಲ್ಲಿ ಹಣ್ಣುಗಳಿಂದ ಜ್ಯೂಸ್ ತಯಾರಿಸುತ್ತಿದ್ದರೆ, ಜ್ಯೂಸರ್ ಯಂತ್ರವು ತುಂಬಾ ಬಿಸಿಯಾಗಿರಬಾರದು ಎಂಬುದನ್ನು ನೆನಪಿನಲ್ಲಿಡಿ. ಅದು ತಣ್ಣಗಾಗಿದ್ದರೆ ಮಾತ್ರ ಬಳಕೆ ಮಾಡಿ. ಬಿಸಿಯಾಗಿದ್ದರೆ ತಣ್ಣಗಾಗಲು ಬಿಟ್ಟು ಬಳಿಕೆ ಅವುಗಳ ಸಹಾಯದಿಂದ ಜ್ಯೂಸ್ ತಯಾರಿಸಿ. 

- ಜ್ಯೂಸರ್‌ನಲ್ಲಿರುವ ಹೆಚ್ಚುವರಿ ಶಾಖವು ಹಣ್ಣುಗಳು ಮತ್ತು ತರಕಾರಿಗಳಲ್ಲಿರುವ ಪೋಷಕಾಂಶಗಳನ್ನು ನಾಶಪಡಿಸುತ್ತದೆ ಮತ್ತು ಆ ಜ್ಯೂಸ್‌ನ ಆರೋಗ್ಯ ಪ್ರಯೋಜನಗಳು  ಸಿಗುವುದಿಲ್ಲ.

- ಯಾವಾಗಲೂ ಸಾಮಾನ್ಯ ತಾಪಮಾನದಲ್ಲಿ ಜ್ಯೂಸ್ ಕುಡಿಯಿರಿ. ಹೆಚ್ಚು ತಣ್ಣಗಾಗುವ ಮೂಲಕ ಅಲ್ಲ. ಫ್ರಿಜ್ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ. 

- ಜ್ಯೂಸ್ ತೆಗೆದ ತಕ್ಷಣ ಅದನ್ನು ಎಂದಿಗೂ ಫ್ರಿಜ್ ನಲ್ಲಿ ಇಡಬೇಡಿ. ಇದು ರಸದ ಪೌಷ್ಟಿಕಾಂಶದ ಮೌಲ್ಯವನ್ನು ಕಡಿಮೆ ಮಾಡುತ್ತದೆ.
- ತರಕಾರಿ ಜ್ಯೂಸ್ ಆರೋಗ್ಯಕ್ಕೆ ಒಳ್ಳೆಯದು, ಆದರೆ ಅದರ ಮೇಲೆ ಉಪ್ಪು (Salt) ಅಥವಾ ಮಸಾಲೆಗಳನ್ನು (Spice) ಸೇರಿಸುತ್ತಿಲ್ಲ ಎಂಬುದರ ಎಚ್ಚರಿಕೆವಹಿಸಿ.

>> ಹಣ್ಣುಗಳು ಈಗಾಗಲೇ ಸಾಕಷ್ಟು ಪ್ರಮಾಣದ ನೈಸರ್ಗಿಕ ಸಕ್ಕರೆಯನ್ನು ಹೊಂದಿರುತ್ತವೆ, ಆದ್ದರಿಂದ ಅದಕ್ಕೆ ಸಕ್ಕರೆ ಸೇರಿಸಬೇಡಿ. ಅತಿಯಾದ ಸಕ್ಕರೆ ರಸವು ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮಧುಮೇಹಿಗಳಿಗೆ (Diabetic) ಇದು ಅಪಾಯಕಾರಿ. 

>> ಹಣ್ಣಿನಲ್ಲಿ ಬೀಜಗಳಿದ್ದರೆ ಅವುಗಳನ್ನು ತೆಗೆಯಿರಿ. ಅದನ್ನು ತೆಗೆಯಲು ಸಮಯವಿಲ್ಲದೆ ಹಾಗೆ ಮಿಕ್ಸಿಯಾಗಲು ಬಿಟ್ಟರೆ ಇದರಿಂದ ನೀವೇ ಮುಂದೆ ಪಶ್ಚಾತ್ತಾಪ ಪಡಬಹುದು. ಬೀಜಗಳಿಂದ ರಸದ ರುಚಿ ಹಾಳಾಗುತ್ತದೆ ಮತ್ತು ಅದರಿಂದ  ಯಾವುದೇ ಪ್ರಯೋಜನ ಕೂಡ ಆಗುವುದಿಲ್ಲ.

>> ಕಹಿ ರುಚಿಯನ್ನು ಹೊಂದಿರುವ ಎಲ್ಲಾ ತರಕಾರಿಗಳನ್ನು ಮಿಶ್ರಣ ಮಾಡಬೇಡಿ. ಇದು ಜ್ಯೂಸ್ ರುಚಿಯನ್ನು ಹಾಳು ಮಾಡುತ್ತದೆ ಮತ್ತು  ಅದನ್ನು ಕುಡಿಯಲು ಸಾಧ್ಯವಾಗುವುದಿಲ್ಲ. ಯಾವುದಾದರು ಒಂದು ಕಹಿ ತರಕಾರಿಯನ್ನು ಜ್ಯೂಸ್ ಮಾಡಿ ಸೇವಿಸುವುದು ಒಳ್ಳೆಯದು. 

Latest Videos

click me!