ಗತಕಾಲಕ್ಕೆ ಮರಳುತ್ತಿದೆ ಭಾರತದ ಜೆನ್‌ಝಿ, ಅಸ್ಸಾಂ ರೈಸ್ ಬಿಯರ್ ಈಗ ಟ್ರೆಂಡ್, ಜೆನ್‌ಝಿ ಯುವ ಸಮೂಹದಲ್ಲಿ ಕುಡಿತ ಕಡಿಮೆ. ವಿಸ್ಕಿರ್, ರಮ್, ಬಿಯರ್ ದೂರ ದೂರ. ಕುಡಿದರೂ ಭಾರತೀಯ ಪೂರ್ವಜರು ಬಳಸುತ್ತಿದ್ದ ನೈಸರ್ಗಿಕ ಮದ್ಯ ಪಾನಿಯದತ್ತ ವಾಲುತ್ತಿದ್ದಾರೆ.
18 ದಾಟುತ್ತಿದ್ದಂತೆ ಲೈಸೆನ್ಸ್ ಸಿಕ್ಕವರಂತೆ ಕುಡಿಯುವ ಪದ್ಧತಿ ಭಾರತದಲ್ಲಿ ಹೆಚ್ಚಾಗಿತ್ತು. ಪಾರ್ಟಿ ಸಂಸ್ಕೃತಿ ಭಾರತದಲ್ಲಿ ಆಳವಾಗಿ ಬೇರೂರಿದೆ. ವೀಕೆಂಡ್ ಪಾರ್ಟಿ ಸಾಮಾನ್ಯವಾಗಿದೆ. ಆದರೆ ಜೆನ್‌ಝಿ ಸಮೂಹ ಕೊಂಚ ಭಿನ್ನ. ಜೆನ್‌ಝಿ ಸಮೂಹದಲ್ಲಿ ಆಲ್ಕೋಹಾಲ್ ಕುಡಿಯುವವರ ಸಂಖ್ಯೆ ಇಳಿಮುಖ. ಇದರಿಂದ ಭಾರತದಲ್ಲಿ ಮದ್ಯದಿಂದ ಬರುತ್ತಿದ್ದ ಆದಾಯವೂ ಕುಸಿತ ಕಾಣುತ್ತಿದೆ. ಇನ್ನು ಮದ್ಯ ಕುಡಿಯುವ ಜೆನ್‌ಝಿ ಸಮೂಹ ಭಾರತದಲ್ಲಿ ಪೂರ್ವಜರು ಬಳಸುತ್ತಿದ್ದ ಹಲವು ಫರ್ಮಂಟೆಡ್ ಡ್ರಿಂಕ್ ಮೊರೆ ಹೋಗುತ್ತಿದ್ದಾರೆ. ಇದೇ ಕಾರಣದಿಂದ ಅಸ್ಸಾಂ ರೈಸ್ ಬಿಯರ್ ಭಾರಿ ಟ್ರಂಡ್ ಆಗುತ್ತಿದೆ.
25
ಸಾಂಪ್ರದಾಯಿಕ ಕುಡಿತದ ಮೊರೆ
ಸರ್ವೆ ಪ್ರಕಾರ ಶೇಕಡಾ 21.5ರಷ್ಟು ಜೆನ್‌ಝಿ ಸಮೂಹ ಅಲ್ಕೋಹಾಲ್‌ನಿಂದ ದೂರ. ಇನ್ನು ಶೇಕಡಾ 39ರಷ್ಟು ಮಂದಿ ಅಲ್ಲೊಮ್ಮೆ, ಇಲ್ಲೊಮ್ಮೆ ಪಾರ್ಟಿ ಮಾಡುತ್ತಾರೆ. ಇನ್ನು ಪ್ರತಿ ದಿನ ಅಥವಾ ಸಾಮಾನ್ಯವಾಗಿ ಕುಡಿಯವ ಜೆನ್‌ಝಿ ಸಮೂಹ ಅತೀ ಕಡಿಮೆ. ಈ ಅತೀ ಕಡಿಮೆ ಮಂದಿ ಕೂಡ ಬಾರ್, ವೈನ್ ಶಾಪ್‌ನಲ್ಲಿ ಸಿಗುವ ವಿಸ್ಕಿ, ಬ್ರ್ಯಾಂಡಿ, ರಮ್, ಬಿಯರ್ ಕುಡಿಯುವವರು ಸಂಖ್ಯೆಯೂ ಕಡಿಮೆ. ಇವರು ನೈಸರ್ಗಿಕವಾಗಿ, ಭಾರತದಲ್ಲಿ ಪೂರ್ವಜರು, ಗತಕಾಲದಲ್ಲಿ ಕುಡಿಯುತ್ತಿದ್ದ ಪಾನಿಯದ ಮೊರೆ ಹೋಗುತ್ತಿದ್ದಾರೆ. ಟ್ರಡೀಶನ್, ಲೋಕಲ್, ಹೈಜಿನೀಕ್ ಆಗಿರುವ ಮದ್ಯದ ಮೊರೆ ಹೋಗುತ್ತಿದ್ದಾರೆ.
35
ಕೊಂಬುಚಾ ಬಿಯರ್‌ಗೆ ಪೈಪೋಟಿ
ರೈಸ್ ಬಿಯರ್ ಮೇಲೆ ಇದೀಗ ಜೆನ್‌ಝಿ ಸಮೂಹ ಒಂದು ಕಣ್ಣಿಟ್ಟಿದೆ. ಇದು ಫರ್ಮಂಟೆಡ್ ಬಿಯರ್. ಅಕ್ಕಿಯಿಂದ ತಯಾರಿಸುವ ಈ ಬಿಯರ್ ಇದೀಗ ಟ್ರೆಂಡ್ ಆಗುತ್ತಿದೆ. ಸಿರಿ ಧಾನ್ಯಗಳಿಂದ ತಯಾರಿಸುವ ಕೊಂಬುಚಾ ಬಿಯರ್‌ಗೆ ಪೈಪೋಟಿ ನೀಡುತ್ತಿದೆ ಅಸ್ಸಾಂನ ರೈಸ್ ಬಿಯರ್. ರೈಸ್ ಬಿಯರ್ ಅಸ್ಸಾಂ ಇತಿಹಾಸದಲ್ಲಿ ಅತ್ಯಂತ ಪುರಾತನವಾದ್ದದು. ಇದು ಇತರ ಮದ್ಯಗಳಂತೆ ಆರೋಗ್ಯಕ್ಕೆ ಅಷ್ಟೊಂದು ಹಾನಿಕರವಲ್ಲ ಎಂದು ತಜ್ಞರು ಹೇಳುತ್ತಾರೆ. ಈ ಟ್ರಡೀಶನ್ ಬಿಯರ್ ಇದೀಗ ಉತ್ತಮವಾಹಿ ಪ್ಯಾಕ್ ಆಗಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಮೊದಲು ಮನೆಗಳಲ್ಲಿ ಮಾತ್ರ ಲಭ್ಯವಿತ್ತು.
ಅಕ್ಕಿಯಂತೆ ಬಿಳಿ ಬಣ್ಣದಲ್ಲಿ ರೈಸ್ ಬಿಯರ್ ಲಭ್ಯವಿದೆ. ಅಸ್ಸಾಂನಲ್ಲಿ ಹಲವು ಸ್ಟಾರ್ಟ್ ಅಪ್ ಕಂಪನಿಗಳು ಇದರ ಹಿಂದೆ ಕಾರ್ಯನಿರ್ವಹಿಸುತ್ತಿದೆ. ಇದೀಗ ಯುವ ಜೆನ್‌ಝಿ ಸಮೂಹ ರೈಸ್ ಬಿಯರ್ ನಶೆ ಏರಿಸಿಕೊಳ್ಳುತ್ತಿದ್ದಾರೆ. ಫರ್ಮಂಟೆಡ್ ಬಿಯರ್ ಇದಾಗಿದೆ. ಅಸ್ಸಾಂ ಮನೆಗಳಲ್ಲಿ ಲಭ್ಯವಾಗುತ್ತಿದ್ದ ಈ ಬಿಯರ್ ಇದೀಗ ಮಾರುಕಟ್ಟೆಯಲ್ಲಿ ಬಗೆ ಬಗೆ ಕಂಪನಿಗಳು ನೀಡುತ್ತಿದೆ.
55
ಈಶಾನ್ಯ ರಾಜ್ಯಗಳ ರೆಸ್ಟೋರೆಂಟ್‌ಗಳಲ್ಲಿ ಟ್ರೆಂಡ್
ಈಶಾನ್ಯ ರಾಜ್ಯಗಳಲ್ಲಿ ರೈಸ್ ಬಿಯರ್ ಹೊಸದೇನಲ್ಲ. ಇದೀಗ ಹೊಸ ಮಾರ್ಕೆಟಿಂಗ್ ಮಾಡಲಾಗುತ್ತಿದೆ. ಈಶಾನ್ಯ ರಾಜ್ಯಗಳ ರೆಸ್ಟೋರೆಂಟ್‌ಗಳಲ್ಲಿ ರೈಸ್ ಬಿಯರ್ ಸಮಾನ್ಯವಾಗಿ ಲಭ್ಯವಾಗುತ್ತಿದೆ. ಜೆನ್‌ಝಿ ಸಮೂಹ ಇದೇ ಬಿಯರ್ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಹಲವರ ನೆಚ್ಚಿನ ಬಿಯರ್ ಆಗಿ ಹೊರಹೊಮ್ಮಿದೆ.
ಈಶಾನ್ಯ ರಾಜ್ಯಗಳ ರೆಸ್ಟೋರೆಂಟ್‌ಗಳಲ್ಲಿ ಟ್ರೆಂಡ್
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.