ಉಳಿದ ಅನ್ನ ವೇಸ್ಟ್ ಮಾಡ್ಬೇಡಿ, ಕೇವಲ ಹತ್ತೇ ನಿಮಿಷದಲ್ಲಿ ರುಚಿಕರವಾದ 3 ರೆಸಿಪಿ ಹೀಗೆ ಮಾಡಿ

Published : Apr 06, 2026, 03:08 PM IST

How to use Leftover Rice: ರಾತ್ರಿ ಉಳಿದ ಅನ್ನ ಎಸೆಯುವ ಯೋಚನೆ ಮಾಡಬೇಡಿ! ಕೇವಲ ಕೆಲವೇ ಪದಾರ್ಥಗಳನ್ನು ಬಳಸಿ ಹೋಟೆಲ್ ಶೈಲಿಯ ಗರಿಗರಿ ದೋಸೆ, ಅಕ್ಕಿ ರೊಟ್ಟಿ ಮತ್ತು ರುಚಿಕರವಾದ ವೆಜಿಟೇಬಲ್ ಕಟ್‌ಲೆಟ್ ಮಾಡುವ ಸುಲಭ ವಿಧಾನ ಇಲ್ಲಿದೆ.

PREV
14
ರುಚಿಕರವಾದ ಬ್ರೇಕ್‌ಫಾಸ್ಟ್

ಅಡುಗೆ ಮಾಡುವಾಗ ಅನ್ನ ಹೆಚ್ಚಾಗಿ ಉಳಿಯುವುದು ಸಾಮಾನ್ಯ. ಅಂತಹ ಸಂದರ್ಭದಲ್ಲಿ ಅದನ್ನು ಮತ್ತೆ ಬಿಸಿ ಮಾಡಿ ತಿನ್ನುವ ಬದಲು, ಮನೆಯಲ್ಲೇ ರುಚಿಕರವಾದ ಮತ್ತು ಆರೋಗ್ಯಕರವಾದ ಬ್ರೇಕ್‌ಫಾಸ್ಟ್ ತಯಾರಿಸಬಹುದು. ರಾತ್ರಿ ಉಳಿದ ಅನ್ನದಿಂದ ಗರಿಗರಿ ದೋಸೆ, ಅಕ್ಕಿ ರೊಟ್ಟಿ ಮತ್ತು ವೆಜಿಟೇಬಲ್ ಕಟ್‌ಲೆಟ್ ಮಾಡುವ ಸುಲಭ ವಿಧಾನ ಇಲ್ಲಿದೆ.

24
1. ಉಳಿದ ಅನ್ನದ ದೋಸೆ (Leftover Rice Dosa)

ಪದಾರ್ಥಗಳು
ಒಂದು ಕಪ್ ಉಳಿದ ಅನ್ನ, ಒಂದು ಕಪ್ ಅಕ್ಕಿ ಹಿಟ್ಟು, ಅರ್ಧ ಕಪ್ ಗೋಧಿ ಹಿಟ್ಟು, ಅರ್ಧ ಕಪ್ ಮೊಸರು, ಒಂದು ಚಮಚ ಜೀರಿಗೆ, ಚಿಟಿಕೆ ಅಡುಗೆ ಸೋಡಾ, ಉಪ್ಪು ಮತ್ತು ನೀರು.

ತಯಾರಿಸುವ ವಿಧಾನ
ಮೊದಲು ಮಿಕ್ಸಿ ಜಾರ್‌ಗೆ ಅನ್ನ, ಮೊಸರು, ಅಕ್ಕಿ ಹಿಟ್ಟು, ಗೋಧಿ ಹಿಟ್ಟು, ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಈ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಜೀರಿಗೆ ಮತ್ತು ಅಡುಗೆ ಸೋಡಾ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ದೋಸೆ ಹಂಚನ್ನು ಬಿಸಿ ಮಾಡಿ, ಎಣ್ಣೆ ಸವರಿ ದೋಸೆ ಹಿಟ್ಟನ್ನು ಹರಡಿ. ಎರಡು ಕಡೆ ಕೆಂಪಾಗುವವರೆಗೆ ಬೇಯಿಸಿದರೆ ಗರಿಗರಿ ದೋಸೆ ಸಿದ್ಧ!

34
2. ಅಕ್ಕಿ ರೊಟ್ಟಿ ಅಥವಾ ಪರಾಟ

ಇದು ಕರ್ನಾಟಕದ ಜನಪ್ರಿಯ ಅಡುಗೆ. ಉಳಿದ ಅನ್ನವನ್ನು ಪೇಸ್ಟ್ ಮಾಡಿ ಅದಕ್ಕೆ ಅಕ್ಕಿ ಹಿಟ್ಟು, ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು ಮತ್ತು ತುರಿದ ತೆಂಗಿನಕಾಯಿ ಸೇರಿಸಿ. ಸ್ವಲ್ಪ ನೀರು ಹಾಕಿ ಹಿಟ್ಟನ್ನು ಹದವಾಗಿ ಕಲಸಿ. ತವದ ಮೇಲೆ ಎಣ್ಣೆ ಹಾಕಿ ನಂತರ ರೊಟ್ಟಿಯನ್ನು ತಟ್ಟಿ, ಎರಡು ಬದಿ ಹೊಂಬಣ್ಣ ಬರುವವರೆಗೆ ಬೇಯಿಸಿ ಬಿಸಿಬಿಸಿಯಾಗಿ ಬಡಿಸಿ.

44
3. ವೆಜಿಟೇಬಲ್ ಕಟ್‌ಲೆಟ್

ಅನ್ನಕ್ಕೆ ಕತ್ತರಿಸಿದ ಈರುಳ್ಳಿ, ಕ್ಯಾರೆಟ್, ಬೀಟ್‌ರೂಟ್, ಬೇಯಿಸಿ ಪುಡಿ ಮಾಡಿದ ಆಲೂಗಡ್ಡೆ, ನೆನೆಸಿದ ಬ್ರೆಡ್ ತುಂಡುಗಳು, ಹಸಿಮೆಣಸಿನಕಾಯಿ, ಅಚ್ಚಖಾರದ ಪುಡಿ, ಕಡಲೆ ಹಿಟ್ಟು, ಕಾರ್ನ್ ಫ್ಲೋರ್ ಮತ್ತು ಗರಂ ಮಸಾಲಾ ಸೇರಿಸಿ ಚೆನ್ನಾಗಿ ಕಲಸಿ. ಈ ಮಿಶ್ರಣವನ್ನು ಸಣ್ಣ ಉಂಡೆಗಳನ್ನಾಗಿ ಮಾಡಿ ಕಟ್‌ಲೆಟ್ ಆಕಾರ ನೀಡಿ ತವದ ಮೇಲೆ ಕಡಿಮೆ ಎಣ್ಣೆಯಲ್ಲಿ ಫ್ರೈ ಮಾಡಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories