4 ಬೆಳ್ಳುಳ್ಳಿ, 2 ಟೀ ಸ್ಪೂನ್ ಮಸಾಲೆ ಖಾರ: ತರಕಾರಿ ಇಲ್ಲದಿದ್ದಾಗ ಮಾಡಿ ಸ್ಪೆಷಲ್ ರೈಸ್

Published : Jun 23, 2025, 04:01 PM IST

Quick Breakfast Recipe: ಮನೆಯಲ್ಲಿ ತರಕಾರಿ ಇಲ್ಲದಿದ್ದಾಗ ಈ ಸ್ಪೆಷಲ್ ರೈಸ್ ತಯಾರಿಸಿ. ಬಿಸಿ ಅನ್ನಕ್ಕೆ ಬೆಳ್ಳುಳ್ಳಿ-ಮಸಾಲೆ ಖಾರದ ಒಗ್ಗರಣೆ ಸೇರಿಸಿ, ನಿಂಬೆರಸದೊಂದಿಗೆ ರುಚಿ ಹೆಚ್ಚಿಸಿ.

PREV
16

ಮನೆಯಲ್ಲಿ ತರಕಾರಿ ಇಲ್ಲದಿದ್ದಾಗ ಏನು ಮಾಡಬೇಕು ಅಂತಾನೇ ತೋಚಲ್ಲ. ಇಂದು ನಾವು ಹೇಳುವ ರೀತಿಯಲ್ಲಿ ಸ್ಪೆಷಲ್ ರೈಸ್ ತಯಾರಿಸಿದ್ರೆ ಮಕ್ಕಳು ಸೇರಿದಂತೆ ಮನೆಯಲ್ಲಿರೋ ಎಲ್ಲಾ ಸದಸ್ಯರು ಚಪ್ಪರಿಸಿಕೊಂಡು ತಿಂತಾರೆ.

26

ಈ ರೆಸಿಪಿಗೆ ಟೊಮೆಟೋ, ಈರುಳ್ಳು ಸೇರಿದಂತೆ ಯಾವುದೇ ತರಕಾರಿ ಬೇಕಾಗಲ್ಲ. ಬಿಸಿಬಿಸಿಯಾದ ಅನ್ನಕ್ಕೆ ಈ ಮಸಾಲೆಯನ್ನು ಸೇರಿಸಿದ್ರೆ ರುಚಿಯಾದ ಸ್ಪೆಷಲ್ ರೈಸ್ ಸಿದ್ದವಾಗುತ್ತದೆ. ಈ ಸ್ಪೆಷಲ್ ರೈಸ್ ಮಾಡೋದು ಹೇಗೆ ಅಂತ ನೋಡೋಣ ಬನ್ನಿ.

36

ಬೇಕಾಗುವ ಸಾಮಾಗ್ರಿಗಳು

ಅನ್ನ: 1 ಕಪ್, ಬೆಳ್ಳುಳ್ಳಿ: 4, ಮಸಾಲೆ ಖಾರದ ಪುಡಿ: 2 ಟೀ ಸ್ಪೂನ್, ಜೀರಿಗೆ: 1 ಟೀ ಸ್ಪೂನ್, ಸಾಸವೆ: 1/2 ಟೀ ಸ್ಪೂನ್, ಎಣ್ಣೆ: 2 ಟೀ ಸ್ಪೂನ್ ಮತ್ತು ರುಚಿಗೆ ತಕ್ಕಷ್ಟು ಉಪ್ಪು, ನಿಂಬೆಹಣ್ಣಿನ ರಸ: 1 ಟೀ ಸ್ಪೂನ್

46

ಸ್ಪೆಷಲ್ ರೈಸ್ ಮಾಡುವ ವಿಧಾನ

ಮೊದಲಿಗೆ ಒಂದು ಬೌಲ್ ರೈಸ್ ಮಾಡಿಕೊಂಡು ಎತ್ತಿಟ್ಟುಕೊಳ್ಳಿ. ಅನ್ನ ತಣ್ಣಗಾದ ನಂತರವೇ ಒಗ್ಗರಣೆಗೆ ಮಿಕ್ಸ್ ಮಾಡಿಕೊಳ್ಳಬೇಕಾಗುತ್ತದೆ. ಇದೀಗ ಬೆಳ್ಳುಳ್ಳಿಯ ಸಿಪ್ಪೆಯನ್ನು ಬಿಡಿಸಿಕೊಳ್ಳಿ. ನಂತರ ಬೆಳ್ಳುಳ್ಳಿ ಮತ್ತು ಮಸಾಲೆ ಖಾರ ಸೇರಿಸಿ ಜಜ್ಜಿಕೊಳ್ಳಿ.

56

ಈಗ ಒಲೆ ಆನ್ ಮಾಡ್ಕೊಂಡು ಬಾಣಲೆ ಇರಿಸಿಕೊಳ್ಳಿ. ಬಾಣಲೆ ಬಿಸಿಯಾದ ಬಳಿಕ ಎರಡು ಟೀ ಸ್ಪೂನ್ ಎಣ್ಣೆ ಹಾಕಿಕೊಳ್ಳಬೇಕು. ಎಣ್ಣೆ ಬಿಸಿಯಾಗುತ್ತಿದ್ದಂರತೆ ಸಾಸವೆ-ಜೀರಿಗೆ ಸೇರಿಸಿಕೊಳ್ಳಬೇಕು. ಆನಂತರ ಜಜ್ಜಿಕೊಂಡಿರುವ ಬೆಳ್ಳುಳ್ಳಿ-ಮಸಾಲೆ ಖಾರ ಸೇರಿ ಮಿಕ್ಸ್ ಮಾಡಿಕೊಂಡು ಒಲೆ ಆಫ್ ಮಾಡಿಕೊಳ್ಳಿ.

66

ಕೊನೆಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಅನ್ನ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ನಿಂಬೆಹಣ್ಣಿನ ರಸ ಸೇರಿಸಿದ್ರೆ ರುಚಿಯಾದ ಹುಳಿ-ಖಾರ ಮಿಶ್ರಿತ ಮಸಾಲೆಯುಕ್ತ ಸ್ಪೆಷಲ್ ರೈಸ್ ಸವಿಯಲು ಸಿದ್ಧವಾಗುತ್ತದೆ. ಬೇಕಿದ್ರೆ ಕೊನೆಗೆ ಕೋತಂಬರಿ ಸೊಪ್ಪು ಸೇರಿಸಿಕೊಳ್ಳಬಹುದು.

Read more Photos on
click me!

Recommended Stories