ಸಾಸಿವೆ ಎಣ್ಣೆಗೆ ಇವನ್ನ ಬೆರೆಸಿ ಕೂದಲಿಗೆ ಹಚ್ಚಿದ್ರೆ, ಯಾವುದೇ ಹೇರ್ ಡೈ ಇಲ್ಲದೇ ಕೂದಲು ಕಪ್ಪಾಗುತ್ತೆ

First Published Sep 28, 2023, 5:49 PM IST

ಕೂದಲು ಬಿಳಿಯಾಗೋ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ ಮತ್ತು ರಾಸಾಯನಿಕ ಉತ್ಪನ್ನಗಳನ್ನು ಬಳಸದೆ ಅದನ್ನು ಕಪ್ಪು ಮಾಡಲು ಬಯಸಿದರೆ, ಸಾಸಿವೆಯಿಂದ ಮಾಡಿದ ಈ ಎಣ್ಣೆಯನ್ನು ಹಚ್ಚಿ. ಇದನ್ನು ಬಳಸಿದ ನಂತರ, ಕೂದಲಿಗೆ ಗೋರಂಟಿ ಅಥವಾ ಡೈ ಹಚ್ಚುವ ಅಗತ್ಯವೇ ಇರೋದಿಲ್ಲ
 

ಇಂದಿನ ಕಾಲದಲ್ಲಿ, ಕೂದಲು ಬಿಳಿಯಾಗುವ (white hair) ಸಮಸ್ಯೆಯಿಂದ ಮಕ್ಕಳೂ ಸಹ ಹೆಣಗಾಡುವಂತಾಗಿದೆ. ಒಂದು ಕಾಲದಲ್ಲಿ, ಕೂದಲು ಬೆಳ್ಳಗಾಗೋದು, ವಯಸ್ಸಾಗುವಿಕೆಯ ಲಕ್ಷಣವಾಗಿತ್ತು, ಆದರೆ ಇಂದಿನ ಸಮಯದಲ್ಲಿ, ಜನರ ಜೀವನಶೈಲಿ ಮತ್ತು ಆಹಾರಕ್ರಮದಿಂದಾಗಿ, ಜನರ ಕೂದಲು ವೇಗವಾಗಿ ಬಿಳಿಯಾಗಲು ಪ್ರಾರಂಭಿಸುತ್ತದೆ. ಅವುಗಳನ್ನು ಮರೆ ಮಾಡಲು, ಅನೇಕ ರೀತಿಯ ಕೂದಲಿನ ಬಣ್ಣ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಅವುಗಳನ್ನು ಹಚ್ಚೋದ್ರಿಂದ ಕೂದಲಿಗೆ ಹಾನಿಯಾಗೋದು ಸಹ ನಿಜ. ಏಕೆಂದರೆ ಇದರಲ್ಲಿ ಬಳಸುವ ರಾಸಾಯನಿಕಗಳು ಕೂದಲಿನ ಜೊತೆಗೆ ಆರೋಗ್ಯಕ್ಕೂ ಹಾನಿ ಮಾಡುತ್ತೆ. 
 

ಹೇರ್ ಕಲರ್, ಡೈ ಗಳಲ್ಲಿರುವ(hair color) ಕೆಮಿಕಲ್ ನಿಂದ  ಅನೇಕ ಜನರು ಮಾರುಕಟ್ಟೆಯಲ್ಲಿ ಲಭ್ಯವಿರುವ ಕೂದಲಿನ ಬಣ್ಣ ಬಳಸುವುದಿಲ್ಲ. ನೀವು ಸಹ ಬಿಳಿ ಕೂದಲಿನಿಂದ ತೊಂದರೆಗೀಡಾಗಿದ್ದರೆ ಮತ್ತು ಅದನ್ನು ನೈಸರ್ಗಿಕವಾಗಿ ಕಪ್ಪು ಮಾಡಲು ಬಯಸಿದರೆ, ಇದಕ್ಕಾಗಿ ದೇಸಿ ರೆಸಿಪಿಯೊಂದನ್ನು ಟ್ರೈ ಮಾಡಬಹುದು. 
 

ಸಾಸಿವೆ ಎಣ್ಣೆ (mustard oil) ಕೂದಲಿಗೆ ಒಳ್ಳೆಯದು. ಇದರಲ್ಲಿ ಕಂಡುಬರುವ ಅಂಶಗಳು ಕೂದಲನ್ನು ಕಪ್ಪು, ದಟ್ಟ, ಉದ್ದ ಮತ್ತು ಬಲಪಡಿಸಲು ಸಹಾಯ ಮಾಡುತ್ತವೆ. ಪ್ರಾಚೀನ ಕಾಲದಲ್ಲಿಯೂ, ನಮ್ಮ ಅಜ್ಜಿಯರು ಈ ಎಣ್ಣೆಯನ್ನು ಕೂದಲಿಗೆ ಹಚ್ಚುತ್ತಿದ್ದರು. ಈ ಎಣ್ಣೆಯೊಂದಿಗೆ ಕೆಲವು ವಸ್ತುಗಳನ್ನು ಬೆರೆಸಿ ಹೇಗೆ ತಯಾರಿಸುವುದು ಎಂದು ಇಂದು ನಾವು ನಿಮಗೆ ಹೇಳುತ್ತೇವೆ. 

ಸಾಸಿವೆ ಎಣ್ಣೆ ಜೊತೆ ನಾವಿಲ್ಲಿ ತಿಳಿಸೋ ವಸ್ತುಗಳನ್ನು ಬೆರೆಸಿದ್ರೆ ಕೂದಲು ಕಪ್ಪಾಗೋದು ಗ್ಯಾರಂಟಿ. ಈ ಎಣ್ಣೆ ತುಂಬಾ ಪರಿಣಾಮಕಾರಿ, ಇದು ನಿಮ್ಮ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಮತ್ತು ಕೂದಲನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಈ ಎಣ್ಣೆಯನ್ನು ಹೇಗೆ ತಯಾರಿಸುವುದು ಎಂದು ತಿಳಿಯೋಣ. 
 

ಕೂದಲನ್ನು ಕಪ್ಪಾಗಿಸಲು ಮನೆಯಲ್ಲಿ ಹೀಗೆ ಎಣ್ಣೆ ತಯಾರಿಸಿ
ಈ ಎಣ್ಣೆಯನ್ನು ತಯಾರಿಸಲು, ನಿಮಗೆ ಒಂದು ಬಟ್ಟಲು ಸಾಸಿವೆ ಎಣ್ಣೆ ಬೇಕು. ಒಂದು ಎಲೆ ಅಲೋವೆರಾ, ಒಂದು ಹಿಡಿ ಕರಿಬೇವು, ಮಧ್ಯಮ ಗಾತ್ರದ 2 ಈರುಳ್ಳಿ, 1 ಟೀಸ್ಪೂನ್ ಕಲೋಂಜಿ ಬೇಕು. 
 

ಈ ಎಣ್ಣೆಯನ್ನು ತಯಾರಿಸಲು, ಕಬ್ಬಿಣದ ಪಾತ್ರೆಯಲ್ಲಿ ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ ಮತ್ತು ಮೇಲೆ ತಿಳಿಸಿರುವ ಎಲ್ಲಾ ವಸ್ತುಗಳನ್ನು ಬೆರೆಸಿ 10-15 ನಿಮಿಷಗಳ ಕಾಲ ಬಿಸಿ ಮಾಡಿ. ನಂತರ ಅದನ್ನು ತಣ್ಣಗಾಗಲು ಕಬ್ಬಿಣದ ಪಾತ್ರೆಯಲ್ಲಿ ಹಾಕಿ. ತಣ್ಣಗಾದ ನಂತರ, ಎಣ್ಣೆಯನ್ನು ಫಿಲ್ಟರ್ ಮಾಡಿ, ಬೇರೆ ಬಾಟಲಿಯಲ್ಲಿ ಹಾಕಿ.
 

ಈಗ ಈ ಎಣ್ಣೆಯನ್ನು ಕೂದಲಿನ ಬೇರುಗಳು ಮತ್ತು ನೆತ್ತಿಯ ಮೇಲೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ. ಕೂದಲಿನ ಬೇರುಗಳಿಂದ ತುದಿಗಳವರೆಗೆ ಚೆನ್ನಾಗಿ ಹಚ್ಚಿ. ಬೇಕಾದ್ರೆ ರಾತ್ರಿ ಎಣ್ಣೆ ಹಚ್ಚಿ ಬೆಳಗ್ಗೆ ಸ್ನಾನ ಮಾಡಬಹುದು ಅಥವಾ 2 ಗಂಟೆಗಳ ನಂತರ ಕೂದಲನ್ನು ತೊಳೆಯಿರಿ. ಈ ಎಣ್ಣೆಯನ್ನು ತಯಾರಿಸಲು ಬಳಸುವ ವಸ್ತುಗಳು ಕೂದಲನ್ನು ಕಪ್ಪು, ದಟ್ಟ ಮತ್ತು ಬಲಪಡಿಸಲು ಸಹಾಯ ಮಾಡುತ್ತದೆ. ಉತ್ತಮ ಫಲಿತಾಂಶಕ್ಕಾಗಿ, ಈ ಎಣ್ಣೆಯನ್ನು ವಾರಕ್ಕೆ 2 ಬಾರಿ ಕೂದಲಿಗೆ ಹಚ್ಚಿ. ನೀವು ಕೆಲವೇ ದಿನಗಳಲ್ಲಿ ಪರಿಣಾಮವನ್ನು ನೋಡಲು ಪ್ರಾರಂಭಿಸುತ್ತೀರಿ.

click me!