ಪಡ್ಡೆ ಹುಡುಗರ ನಿದ್ದೆ ಕದ್ದ 'ಟಗರು' ಪುಟ್ಟಿ, ಮಾನ್ವಿತಾ ಗ್ಲಾಮರಸ್‌ ಲುಕ್‌ಗೆ ಫ್ಯಾನ್ಸ್ ಫಿದಾ

First Published | Sep 28, 2023, 2:40 PM IST

ಸ್ಯಾಂಡಲ್‌ವುಡ್ ನಟಿ, ಮಾನ್ವಿತಾ ಕಾಮತ್ ಹೊಸ ಫೋಟೋಸ್‌ ಶೇರ್ ಮಾಡ್ಕೊಂಡಿದ್ದು, ಟಗರು ಪುಟ್ಟಿಯ ಹೊಸ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಗ್ಲ್ಯಾಮರ್ ಗೊಂಬೆ ಎಂದು ಕೊಂಡಾಡಿದ್ದಾರೆ.

ಸ್ಯಾಂಡಲ್ ವುಡ್‌ನ ಖ್ಯಾತ ನಟಿ ಮಾನ್ವಿತಾ ಕಾಮತ್ ತೆರೆಮೇಲೆ ಬರದೆ ವರ್ಷವೇ ಆಗಿದೆ. ಕೆಂಡಸಂಪಿಗೆ, ಟಗರು ಸೇರಿದಂತೆ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಮಾನ್ವಿತಾ ಎಲ್ಲೋದ್ರು ಎಂದು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದರು. ಸದ್ಯ ಸ್ಟೈಲಿಶ್‌ ಫೋಟೋಶೂಟ್ ಮಾಡಿಸ್ಕೊಂಡಿರೋ 'ಟಗರು ಪುಟ್ಟಿ' ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಗ್ಲಿಟರಿಂಗ್‌ ಮಾಡರ್ನ್‌ ಡ್ರೆಸ್‌ನಲ್ಲಿ ಮಾನ್ವಿತಾ ಕಾಮತ್‌ ಸಖತ್ತಾಗಿ ಕಾಣಿಸಿಕೊಂಡಿದ್ದಾರೆ. ಡಿಫರೆಂಟ್‌ ಆಗಿ ಪೋಸ್ ನೀಡಿರೋ ಮಾನ್ವಿತಾ ಲುಕ್‌ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಸದ್ಯ ಈ ಕರಾವಳಿ ನಟಿಯ ಫೋಟೋಸ್ ಸೋಶಿಯಲ್‌ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ

Latest Videos


ದುನಿಯಾ ಸೂರಿ ನಿರ್ದೇಶನದ ಕೆಂಡಸಂಪಿಗೆ ಸಿನಿಮಾ ಮೂಲಕ ಚಿತ್ರರಂಗಕ್ಕೆ ಮಾನ್ವಿತಾ ಪಾದಾರ್ಪಣೆ ಮಾಡಿದರು. ಆ ನಂತರ ಟಗರು, ಶಿವ 143, ಕನಕ, ರಿಲಾಕ್ಸ್ ಸತ್ಯ, ಚೌಕ, ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲೂ 'ಟಗರು' ಸಿನಿಮಾದಲ್ಲಿ ಅವರ ಅಭಿನಯ ಎಲ್ಲರ ಮೆಚ್ಚುಗೆ ಪಡೆದುಕೊಂಡಿತು. 

2022ರಲ್ಲಿ ಧೀರೆನ್ ರಾಮ್‌ಕುಮಾರ್‌ಗೆ ನಾಯಕಿಯಾಗಿ ‘ಶಿವ 143’ ಚಿತ್ರದಲ್ಲಿ ನಟಿಸಿದ್ದರು. ರಾಜಸ್ಥಾನ ಡೈರೀಸ್, ಹ್ಯಾಪಿ ಮ್ಯಾರೀಡ್ ಇವು ಮುಂಬರುವ ಸಿನಿಮಾಗಳಾಗಿವೆ. ಇನ್ನು ಮಾನ್ವಿತಾ ಮುಂಬರುವ ಸಿನಿಮಾ'ಬ್ಯಾಡ್' ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು ಅಭಿಮಾನಿಗಳ ಹೃದಯ ಗೆದ್ದಿದೆ. ಮಾನ್ವಿತಾ ಲುಕ್ ವೈರಲ್ ಆಗಿದೆ. ಹಳ್ಳಿ ಹುಡುಗಿಯಾಗಿ ಮಾನ್ವಿತಾ ಕಾಣಿಸಿಕೊಂಡಿದ್ದಾರೆ.   

ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ನಿಧನ ಹೊಂದಿದ ನಂತರ ಮಾನ್ವಿತಾ ಕಾಮತ್ ಸ್ಪಲ್ಪ ತೆರೆಮರೆಗೆ ಸರಿದಿದ್ದರು. ಸೋಷಿಯಲ್ ಮೀಡಿಯಾದಲ್ಲೂ ಹೆಚ್ಚು ಆಕ್ಟಿವ್‌ ಆಗಿರಲ್ಲಿಲ್ಲ. ಈಗ ಮತ್ತೆ ಫೋಟೋಶೂಟ್ ಮಾಡಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಮಿಂಚುತ್ತಿದ್ದಾರೆ.

ಕಲರ್‌ಫುಲ್‌ ಡ್ರೆಸ್ ಹಾಕ್ಕೊಂಡಿರೋ ಮಾನ್ವಿತಾ ಸಿಂಪಲ್‌ ಇಯರಿಂಗ್‌ ಹಾಕ್ಕೊಂಡು ಹೇರ್‌ ಬನ್‌ ಮಾಡಿ ಸುಂದರವಾಗಿ ಕಾಣುತ್ತಿದ್ದಾರೆ. ಟಗರು ಪುಟ್ಟಿಯ ನ್ಯೂ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ನ್ಯಾಚುರಲ್‌ ಬ್ಯೂಟಿ, ಸೂಪರ್ಬ್‌, ಸೋ ಪ್ರೆಟ್ಟೀ, ಲವ್ಲೀ ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ.

ಬೆರಗುಗೊಳಿಸುವ ಈ ಉಡುಪಿನಲ್ಲಿ ಮನಸ್ಸು ಮತ್ತು ದೇಹ ಎರಡೂ ಸ್ಪಷ್ಟತೆಯಿರುವುದನ್ನು ಪ್ರತಿಬಿಂಬಿಸುತ್ತಿದೆ @siimawards ಎಂದು ಮಾನ್ವಿತಾ ಕಾಮತ್‌ ಇನ್‌ಸ್ಟಾಗ್ರಾಂನಲ್ಲಿ ಈ ಪೋಟೋಸ್‌ಗೆ ಶೀರ್ಷಿಕೆ ನೀಡಿದ್ದಾರೆ.

click me!