ನೀರೊಳಗೆ ಆಲಿಯಾ ಹಾಟ್ ಫೋಟೋಶೂಟ್‌; ಪಾಚಿನಾ, ಮತ್ಸ್ಯಕನ್ಯೆನಾ ಎಂದ ನೆಟ್ಟಿಗರು

ಆಲಿಯಾ ಭಟ್ ವರ್ಷದ ಹಿಂದೆ ಮಾಡಿರೋ ನೀರೊಳಗಿನ ಫೋಟೋಶೂಟ್‌ನ ಫೋಟೋಸ್ ಮತ್ತೆ ವೈರಲ್ ಆಗ್ತಿದೆ. ಹಸಿರು ಬಟ್ಟೆಯಲ್ಲಿ ಆಲಿಯಾ ಭಟ್ ಹಾಟ್‌ ಫೋಟೋಗಳು ಎಲ್ಲರನ್ನೂ ಬೆರಗುಗೊಳಿಸುತ್ತಿದೆ.

ಬಾಲಿವುಡ್‌ನ ಖ್ಯಾತ ನಟಿ ಆಲಿಯಾ ಭಟ್‌ ತಮ್ಮ ಸ್ಟೈಲಿಶ್ ಲುಕ್‌ನಿಂದಲೇ ಆಗಾಗ ಎಲ್ಲರ ಗಮನ ಸೆಳೆಯುತ್ತಾರೆ. ಸೀರೆ, ಮಾಡರ್ನ್‌ ಡ್ರೆಸ್‌, ಡೆನಿಮ್‌ಗಳಲ್ಲೂ ಆಲಿಯಾ ಹಾಟ್ ಆಗಿ ಕಾಣಿಸುತ್ತಾರೆ. ಹೀಗಿರುವಾಗ ಆಲಿಯಾ ಭಟ್‌ನ ನೀರೊಳಗಿನ ಫೋಟೋಶೂಟ್‌ ಸಖತ್ ವೈರಲ್ ಆಗಿದೆ.

ಆಲಿಯಾ ಭಟ್ ವರ್ಷದ ಹಿಂದೆ ಮಾಡಿರೋ ನೀರೊಳಗಿನ ಫೋಟೋಶೂಟ್‌ನ ಫೋಟೋಸ್ ಮತ್ತೆ ವೈರಲ್ ಆಗ್ತಿದೆ. ಹಸಿರು ಬಟ್ಟೆಯಲ್ಲಿ ಆಲಿಯಾ ಭಟ್ ಅವರ ಫೋಟೋಗಳು ಎಲ್ಲರನ್ನೂ ಬೆರಗುಗೊಳಿಸುತ್ತಿದೆ. 'ಗಲ್ಲಿ ಬಾಯ್' ಸ್ಟಾರ್ ವೋಗ್ ಮ್ಯಾಗಜೀನ್‌ನ್‌ಗಾಗಿ ಈ ಪೋಟೋವನ್ನು ಕ್ಲಿಕ್ಕಿಸಿತ್ತು. ಫೋಟೋಸ್‌ನ್ನು Instagram ನಲ್ಲಿ ಪೋಸ್ಟ್ ಮಾಡಲಾಗಿತ್ತು. 


ಫೋಟೋಗಳಲ್ಲಿ, ಆಲಿಯಾ ಹಸಿರು ಗೌನ್‌ ಧರಿಸಿ ಸುಂದರವಾಗಿ ಕಾಣುತ್ತಿದ್ದಾರೆ. ನೀರಿನ ಅಡಿಯಲ್ಲಿರುವ ಆಲಿಯಾರನ್ನು ನಟಿ ಜಾಕ್ವೆಲಿನ್ ಫೆರ್ನಾಂಡಿಸ್  'ಮತ್ಸ್ಯಕನ್ಯೆ' ಎಂದು ಕರೆದು ಕಾಮೆಂಟ್ ಮಾಡಿದ್ದರು.

ಅನುಷಾ ದಾಂಡೇಕರ್ "ಇನ್‌ಕ್ರೆಡಿಬಲ್" ಎಂದು ಕಾಮೆಂಟ್ ಮಾಡಿದ್ದಾರೆ. ಆಕೆಯ ಅಭಿಮಾನಿಗಳು ಅವಳು "ಅತ್ಯುತ್ತಮ ಮತ್ಸ್ಯಕನ್ಯೆ" ಎಂದು ಘೋಷಿಸಿದ್ದಾರೆ.

ಕೆಲವೊಬ್ಬರು ಈ ಫೋಟೋಶೂಟ್‌ನ್ನು ಬಾಲಿವುಡ್ ನಟಿ ಸಮೀರಾ ರೆಡ್ಡಿ ಗರ್ಭಿಣಿಯಾಗಿದ್ದಾಗ ಮಾಡಿದ್ದ ಮೆಟರ್ನಿಟಿ ಫೋಟೋಶೂಟ್‌ನ್ನು ಹೋಲುತ್ತದೆ ಎಂದು ಟೀಕಿಸಿದ್ದಾರೆ. ತಮ್ಮ ಎರಡನೇ ಮಗುವಿಗೆ ಗರ್ಭಿಣಿಯಾಗಿದ್ದಾಗ ಸಮೀರಾ ರೆಡ್ಡಿ ಈ ಫೋಟೋಶೂಟ್ ಮಾಡಿಸಿಕೊಂಡಿದ್ದರು.

ಬಾಲಿವುಡ್ ಸೂಪರ್‌ಸ್ಟಾರ್ ಆಲಿಯಾ ಭಟ್ ದೇಶದ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರು ಎಂಬುದರಲ್ಲಿ ಸಂದೇಹವಿಲ್ಲ. ನಟ ರಣಬೀರ್ ಕಪೂರ್ ಅವರನ್ನು ಮದುವೆಯಾಗಿರುವ ಆಲಿಯಾ ಭಟ್ ಪ್ರತಿ ಚಿತ್ರಕ್ಕೆ ಸುಮಾರು 10 ಕೋಟಿ ರೂ. ಸಂಭಾವನ ಪಡೆಯುತ್ತಾರೆ. ಸುಮಾರು 560 ಕೋಟಿ ರೂಪಾಯಿಗಳ ನಿವ್ವಳ ಮೌಲ್ಯದೊಂದಿಗೆ ಭಾರತದ ಅತ್ಯಂತ ಶ್ರೀಮಂತ ನಟಿಯಾಗಿದ್ದಾರೆ. 

ಆಲಿಯಾ ಭಟ್ ಮೂರು ಮನೆಗಳ ಮಾಲೀಕರಾಗಿದ್ದಾರೆ. ಲಂಡನ್‌ನಲ್ಲಿ ಒಂದು ಮತ್ತು ಮುಂಬೈನ ಜುಹು ಮತ್ತು ಬಾಂದ್ರಾದಲ್ಲಿ ತಲಾ ಒಂದು ಮನೆಯನ್ನು ಹೊಂದಿದ್ದಾರೆ. ಆಲಿಯಾ ಅವರ ಸಹೋದರಿ ಶಾಹೀನ್ ಜುಹು ಮನೆಯಲ್ಲಿ ವಾಸಿಸುತ್ತಿದ್ದಾರೆ. ಆಗಾಗ ತಮ್ಮ ಅದ್ಭುತ ಫೋಟೋ ಶೂಟ್‌ನಿಂದ ಎಲ್ಲರ ಗಮನ ಸೆಳೆಯುತ್ತಾರೆ.

Latest Videos

click me!