ಬಟ್ಟೆ ಮೇಲಿನ ಚಹಾದ ಕಲೆ… ನಿಮಿಷದಲ್ಲಿ ಹೀಗೆ ನಿವಾರಿಸಿ

First Published | Aug 4, 2022, 6:32 PM IST

ಬೆಳಗ್ಗೆ ಎದ್ದ ಕೂಡಲೇ ಚಹಾ ಕುಡಿಯದೇ ಇದ್ದರೆ ಕೆಲವರಿಗೆ ದಿನವೇ ಆರಂಭವಾಗೋದಿಲ್ಲ. ಅನೇಕ ಜನರಿಗೆ, ದಿನವು ಒಂದು ಕಪ್ ಚಹಾದೊಂದಿಗೆ ಪ್ರಾರಂಭವಾಗುತ್ತೆ. ಆದರೆ, ಚಹಾ ಕುಡಿಯುವಾಗ, ಆಗಾಗ್ಗೆ ಚಹಾ ಬಟ್ಟೆಗಳ ಮೇಲೆ ಬೀಳುತ್ತೆ ಮತ್ತು ಬಟ್ಟೆಗಳ ಮೇಲೆ ಚಹಾದ ಕಲೆ ಆಗುತ್ತೆ. ಅದನ್ನು ತೆಗೆದು ಹಾಕೋದು ಜನರಿಗೆ ಕಷ್ಟದ ಕೆಲಸವಾಗುತ್ತೆ. ಹಾಗಾಗಿ, ಈ ಕೆಲವು ಸುಲಭ ವಿಧಾನಗಳ ಸಹಾಯದಿಂದ, ಬಟ್ಟೆಗಳ ಮೇಲಿನ ಚಹಾ ಕಲೆ ನಿಮಿಷಗಳಲ್ಲಿ ತೆಗೆದುಹಾಕಬಹುದು. ಇದನ್ನು ಹೇಗೆ ಮಾಡೋದು ತಿಳಿಯೋಣ. 
 

ಅನೇಕ ಬಾರಿ, ಚಹಾ (Tea) ಚೆಲ್ಲೋದರಿಂದ, ನಿಮ್ಮ ದುಬಾರಿ ಉಡುಗೆ ಹಾಳಾಗುತ್ತೆ. ಹಾಗಾಗಿ, ಬಟ್ಟೆ ಒಗೆಯುವ ಸಾಮಾನ್ಯ ವಿಧಾನಗಳೊಂದಿಗೆ ಚಹಾದ ಕಲೆಯನ್ನು ತೆಗೆದು ಹಾಕೋದು ಅಸಾಧ್ಯ. ಅದಕ್ಕಾಗಿಯೇ ಬಟ್ಟೆಗಳಿಂದ ಚಹಾ ಕಲೆ ತೆಗೆದುಹಾಕಲು ಇಲ್ಲಿದೆ ನೋಡಿ ಕೆಲವು ಸುಲಭ ಮಾರ್ಗಗಳು, ಅದರ ಸಹಾಯದಿಂದ ನೀವು ಬಟ್ಟೆ ಹೊಳೆಯುವಂತೆ ಮಾಡಬಹುದು.

ನಿಂಬೆ ಹಣ್ಣನ್ನು(Lemon) ಬಳಸಿ

ನಿಂಬೆ ಹಣ್ಣು ಆರೋಗ್ಯಕ್ಕೆ ಎಷ್ಟು ಉಪಯೋಗವಾಗಿದೆಯೇ? ಹಾಗೆಯೇ ಇದು ಬಟ್ಟೆಗಳ ಕಲೆ ನಿವಾರಣೆ ಮಾಡಲು ಸಹ ಸಹಾಯ ಮಾಡುತ್ತೆ. ಬಟ್ಟೆ ಸ್ವಚ್ಛಗೊಳಿಸಲು ನಿಂಬೆ ಅತ್ಯುತ್ತಮ ಬ್ಲೀಚಿಂಗ್ ಏಜೆಂಟ್ ಎಂದು ಪರಿಗಣಿಸಲಾಗಿದೆ. ನಿಂಬೆಯ ಸಹಾಯದಿಂದ, ನೀವು ಬಟ್ಟೆ ಮೇಲಿನ ಚಹಾ ಕಲೆ ಸುಲಭವಾಗಿ ಸ್ವಚ್ಛಗೊಳಿಸಬಹುದು.

Latest Videos


ಬಟ್ಟೆ ಮೇಲಿನ ಕಲೆ (stain) ನಿವಾರಿಸಲು ನೀವು ಮೊದಲಿಗೆ, ಚಹಾ ಕಲೆಯನ್ನು ನಿಂಬೆ ಹಣ್ಣಿನ ತುಂಡಿನಿಂದ ಲಘುವಾಗಿ ಉಜ್ಜಿ. ಸ್ವಲ್ಪ ಸಮಯದವರೆಗೆ ಉಜ್ಜಿದ ನಂತರ, ಬಟ್ಟೆಯನ್ನು ತೊಳೆದು ಒಣಗಿಸಿ. ಚಹಾ ಕಲೆಯು ತಕ್ಷಣವೇ ಕಣ್ಮರೆಯಾಗೋದನ್ನು ನೀವು ಗಮನಿಸುತ್ತೀರಿ.

ವಿನೆಗರ್ ಸಹಾಯಕ

ಆಮ್ಲೀಯ ಸ್ವಭಾವದಿಂದ ಸಮೃದ್ಧವಾಗಿರುವ ಬಿಳಿ ವಿನೆಗರ್ (White Vinegar) ಬಟ್ಟೆಗೆ ಅತ್ಯುತ್ತಮ ಕ್ಲೆನ್ಸರ್ ಎಂದು ಸಾಬೀತುಪಡಿಸುತ್ತೆ. ಇದರಿಂದ ಬಟ್ಟೆಯ ಮೇಲಿನ ಕಲೆ ಸಂಪೂರ್ಣವಾಗಿ ನಿವಾರಣೆಯಾಗುತ್ತೆ. ಇದಕ್ಕಾಗಿ, 1 ಬಕೆಟ್ ನೀರಿಗೆ ಅರ್ಧ ಕಪ್ ಬಿಳಿ ವಿನೆಗರ್  ಸೇರಿಸಿ ಮತ್ತು ಅದರಲ್ಲಿ ಬಟ್ಟೆಯನ್ನು ನೆನೆಸಿಡಿ.

ಬಟ್ಟೆಯನ್ನು ವಿನೆಗರ್‌ ಹಾಕಿದ 20-25 ನಿಮಿಷಗಳ ನಂತರ, ಬಟ್ಟೆಯನ್ನು ಸಾಮಾನ್ಯ ರೀತಿಯಲ್ಲಿ ತೊಳೆಯಿರಿ ಮತ್ತು ಒಣಗಿಸಿ. ಇದು ಬಟ್ಟೆಗಳ ಮೇಲಿನ ಚಹಾ ಕಲೆಯನ್ನು ಸುಲಭವಾಗಿ ಸ್ವಚ್ಛಗೊಳಿಸುತ್ತೆ (Clean) ಮತ್ತು ನಿಮ್ಮ ಬಟ್ಟೆ ಹೊಚ್ಚ ಹೊಸದರಂತೆ ಹೊಳೆಯಲು ಪ್ರಾರಂಭಿಸುತ್ತೆ. ಒಂದೂ ಕಲೆಯು ಇರೋದಿಲ್ಲ.

ಆಲೂಗಡ್ಡೆಯಿಂದ(Potato) ಸ್ವಚ್ಛಗೊಳಿಸಿ

ಬಟ್ಟೆ ಮೇಲಿನ ಚಹಾದ ಗುರುತನ್ನು ಸ್ವಚ್ಛಗೊಳಿಸಲು ಆಲೂಗಡ್ಡೆ ಸಹ ಬಳಸಬಹುದು. ಇದಕ್ಕಾಗಿ, ಆಲೂಗಡ್ಡೆಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ. ಈಗ ಆಲೂಗಡ್ಡೆಯನ್ನು ತೆಗೆದು, ಚಹಾದ ಕಲೆಯಾದ ಬಟ್ಟೆಗಳನ್ನು ಬೇಯಿಸಿದ ಆಲೂಗಡ್ಡೆಯ ನೀರಿನಲ್ಲಿ ನೆನೆಸಿಡಿ. ಅರ್ಧ ಗಂಟೆಯ ನಂತರ ಬಟ್ಟೆಯನ್ನು ತೊಳೆದು ಒಣಗಿಸಿ, ಚಹಾದ ಕಲೆ ಮಾಯವಾಗಿರುತ್ತೆ.

click me!