ಕೂದಲು ಹೆಲ್ದಿ, ಶೈನ್ ಆಗಲು ಈ ಸೀಕ್ರೆಟ್ ಟಿಪ್ಸ್ ಫಾಲೋ ಮಾಡಿ
First Published | Aug 2, 2022, 6:43 PM ISTಕೂದಲಿನ ಆರೈಕೆ ಬಗ್ಗೆ ಎಷ್ಟು ಕೇರ್ ತೆಗೊಂಡ್ರೂ ಕಡಿಮೇನೆ. ಕೂದಲು ಹುಡುಗಿಯರ ಲುಕ್ನ ಪ್ರಮುಖ ಆಕರ್ಷಣೆ. ಇದು ಉದ್ದ, ದಪ್ಪ ಮತ್ತು ಕಪ್ಪಾಗಿದ್ದರೆ ಸಾಕು ಎಂದು ಅನೇಕ ಮಹಿಳೆಯರು ಬಯಸುತ್ತಾರೆ. ಆದರೆ ಒಂದು ಮುಖ್ಯ ವಿಷಯವನ್ನು ಮರೆತುಬಿಡುತ್ತಾರೆ, ಅದುವೇ ಹೊಳಪು ಮತ್ತು ಕೂದಲಿನ ಸ್ಮೂತ್ ನೆಸ್ ಬಗ್ಗೆ ಗಮನ ಹರಿಸೋದು. ಕೂದಲು ಕಪ್ಪು, ದಪ್ಪ ಮತ್ತು ಉದ್ದವಾಗಿದೆ, ಆದರೆ ಅದು ಒರಟಾಗಿ ಮತ್ತು ನಿರ್ಜೀವವಾಗಿದ್ದರೆ, ಚೆನ್ನಾಗಿರಲ್ಲ ಅಲ್ವಾ? ಅಂತಹ ಒರಟಾದ ಕೂದಲಿನ ಸ್ಟೈಲಿಂಗ್ ಸುಲಭವಾಗಿರೋದಿಲ್ಲ. ಇದರಿಂದ ಲುಕ್ ಕೂಡ ಚೆನ್ನಾಗಿ ಕಾಣೋದಿಲ್ಲ. ಅಂದಹಾಗೆ, ಕೂದಲಿನ ರಫ್ ನೆಸ್ ತೆಗೆದು ಹಾಕಲು ಪ್ರಯತ್ನಿಸಬಹುದಾದ ಅಂತಹ ಅನೇಕ ಚಿಕಿತ್ಸೆಗಳಿವೆ. ಆದರೆ ಕೆಮಿಕಲ್ ಪ್ರಾಡಕ್ಟ್ ಗಳಿಂದ ಉಂಟಾಗುವ ಹಾನಿಯಿಂದ ರಕ್ಷಿಸುವ ಏನನ್ನಾದರೂ ಕೂದಲಿಗೆ ಹಚ್ಚೋದು ಒಳ್ಳೆಯದು.