ಕನ್ನಡತಿ ಸೀರಿಯಲ್ ಮೂಲಕ ಮನೆಮಾತಾಗಿರುವ ನಟಿ ರಂಜನಿ ರಾಘವನ್ ಸದ್ಯ ಗೂಗಲ್ ಪ್ರಿಂಟೆಡ್ ಸೀರೆಯಲ್ಲಿ ಸಖತ್ ಮಿಂಚಿದ್ದಾರೆ. ಬ್ಲೂ ಹೈಲೈಟ್ ಅಗಿ ಕಲರ್‌ಫುಲ್ ಪ್ರಿಂಟ್ ಇರುವ ಸ್ಯಾರಿಯಲ್ಲಿ ರಂಜನಿ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
26
ಕಿರುತೆರೆ, ಬೆಳ್ಳಿತೆರೆಗಳಲ್ಲಿ ಸಖತ್ ಬ್ಯುಸಿಯಾಗಿರುವ ನಟಿ ರಂಜನಿ ರಾಘವನ್ ಅವರು ಸಾಮಾಜಿಕ ಜಾಲತಾಣಗಳಲ್ಲಿಯೂ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಅವರು ಶೇರ್ ಮಾಡಿರುವ ಸೀರೆಯ ಪೋಟೋ ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ.
36
ಪುಟ್ಟಗೌರಿ ಧಾರಾವಾಹಿಯ ಮೂಲಕ ಮನೆ ಮಾತಾಗಿದ್ದ ರಂಜನಿ ರಾಘವನ್, ಸದ್ಯ ಕನ್ನಡತಿ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆ ಜೊತೆಗೆ ಸ್ಯಾಂಡಲ್ವುಡ್ಗೂ ಪಾದಾರ್ಪಣೆ ಮಾಡಿದ್ದಾರೆ. ಇತ್ತೀಚಿಗಷ್ಟೇ ಇವರ ಅಭಿನಯದ 'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಚಿತ್ರ ರಿಲೀಸ್ ಆಗಿತ್ತು.
46
ಹೆಚ್ಚಾಗಿ ಸಾಂಪ್ರದಾಯಿಕ ಲುಕ್ ನಲ್ಲಿ ಕಾಣಿಸಿಕೊಳ್ಳುವ ರಂಜನಿ ರಾಘವನ್ ಅವರು, ಸೀರೆಯಲ್ಲಿ ಮುದ್ದಾಗಿ ಕಾಣಿಸುತ್ತಾರೆ. ಅದೇ ರೀತಿ ಇದೀಗ ಅವರು ಗೂಗಲ್ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ಅವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, ಎಲ್ಲಡೆ ವೈರಲ್ ಆಗಿದೆ.
56
ಗೂಗಲ್ ಸೀರೆಯಲ್ಲಿ ಹಂಚಿಕೊಂಡ ಪೋಟೋಗೆ, ಹೆಣ್ಮಕ್ಕಳ ಮನಸ್ಸು ಅರ್ಥ ಆಗಲ್ಲ ಅನ್ನೋರು Google me’ ಎಂದು ಅಡಿಬರಹವನ್ನು ಬರೆದು ಕೊಂಡಿದ್ದಾರೆ. ಅಲ್ಲದೇ ಪೋಟೋಗೆ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
66
ಅದರಲ್ಲಿಯೂ ಅನೇಕರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದು, ಮೇಡಂ ಈ ಸೀರೆಯನ್ನು ಎಲ್ಲಿ ತೆಗೆದುಕೊಂಡಿದ್ದೀರಿ. ನಾನು ಸಹ ನನ್ನ ಲವರ್ಗೆ ಕೊಡಿಸಬೇಕು ಹೇಳಿ ಎಂದಿದ್ದಾರೆ. ಇನ್ನು ಕೆಲವರು ನೀವು ಎಂದಿಗೂ ಸೀರೆಯಲ್ಲಿ ಸೂಪರ್ ಎಂದು ಕಾಮೆಂಟ್ ಮಾಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.