ರೇಷ್ಮೆ ಸೀರೆಯುಟ್ಟು ಮುದ್ದಾಗಿ ನಗೆ ಬೀರಿದ ಸೀರಿಯಲ್‌ 'ಗೊಂಬೆ', ನಿಜವಾದ ಡಾಲ್‌ ನೀವೇ ಅಂದ್ರು ಫ್ಯಾನ್ಸ್‌

Published : May 26, 2024, 02:32 PM IST

ಕನ್ನಡ ಕಿರುತೆರೆಯಲ್ಲಿ ಎಲ್ಲರ ನೆಚ್ಚಿನ ಗೊಂಬೆ ನಟಿ ನೇಹಾ ರಾಮಕೃಷ್ಣ. ಲಕ್ಷ್ಮೀ ಬಾರಮ್ಮ ಸೀರಿಯಲ್‌ನಿಂದ ಫೇಮಸ್ ಆದ ನೇಹಾ ಆ ನಂತರ ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. ಇತ್ತೀಚಿಗೆ ಮೈಸೂರು ಸಿಲ್ಕ್‌ ಸೀರೆಯುಟ್ಟು ಮಿಂಚಿದ್ದಾರೆ.

PREV
17
ರೇಷ್ಮೆ ಸೀರೆಯುಟ್ಟು ಮುದ್ದಾಗಿ ನಗೆ ಬೀರಿದ ಸೀರಿಯಲ್‌ 'ಗೊಂಬೆ', ನಿಜವಾದ ಡಾಲ್‌ ನೀವೇ ಅಂದ್ರು ಫ್ಯಾನ್ಸ್‌

ಕನ್ನಡ ಕಿರುತೆರೆಯಲ್ಲಿ ಎಲ್ಲರ ನೆಚ್ಚಿನ ಗೊಂಬೆ ನಟಿ ನೇಹಾ ರಾಮಕೃಷ್ಣ. ಲಕ್ಷ್ಮೀ ಬಾರಮ್ಮ ಸೀರಿಯಲ್‌ನಿಂದ ಫೇಮಸ್ ಆದ ನೇಹಾ ಆ ನಂತರ ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. ಇತ್ತೀಚಿಗೆ ಮೈಸೂರು ಸಿಲ್ಕ್‌ ಸೀರೆಯುಟ್ಟು ಮಿಂಚಿದ್ದಾರೆ.

27

ಕೆಂಪು, ಪಿಂಕ್‌, ಹಸಿರು ಬಣ್ಣದ ಸಿಲ್ಕ್ ಸೀರೆಯುಟ್ಟ ನೇಹಾ ರಾಮಕೃಷ್ಣ ದೇವಸ್ಥಾನದ ಆವರಣಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

37

ಇದಕ್ಕೆ ಸಿಂಪಲ್ ಆದ ಕಿವಿಯೋಲೆ ಹಾಗೂ ನೆಕ್ಲೇಸ್‌ನ್ನು ಧರಿಸಿದ್ದಾರೆ. ಕೈಗೆ ಕೆಂಪು ಬಳೆಗಳನ್ನು ಧರಿಸಿ ನಗು ಬೀರಿದ್ದಾರೆ.

47

ಲಕ್ಷ್ಮೀ ಬಾರಮ್ಮ ಸೀರಿಯಲ್ ನಲ್ಲಿ ಗೊಂಬೆಯಾಗಿ ಐದು ವರ್ಷಕ್ಕೂ ಹೆಚ್ಚು ಸಮಯ ವೀಕ್ಷಕರನ್ನು ರಂಜಿಸಿದ ಕಿರುತೆರೆಯ ಜನಪ್ರಿಯ ನಟಿ ನೇಹಾ ರಾಮಕೃಷ್ಣ ತಮ್ಮ ನಟನೆಯಿಂದಲೇ ಜನಮನ ಗೆದ್ದಿದ್ದಾರೆ. 

57

ಕನ್ನಡದಲ್ಲಿ ಪುಣ್ಯವತಿ ಸೀರಿಯಲ್ ನಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದು, ಅಲ್ಲದೇ ತಮಿಳು ಸೀರಿಯಲ್ ಗಳಲ್ಲೂ ನಟಿಸಿದ್ದಾರೆ. ರಾಜಾ ರಾಣಿ ಶೋದಲ್ಲಿ ಪತಿಯೊಂದಿಗೆ ಭಾಗವಹಿಸಿ, ಪ್ರಶಸ್ತಿ ಸಹ ಗೆದ್ದಿದ್ದರು.

67

ನೇಹಾ ಸದ್ಯಕ್ಕೆ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ನಮ್ಮ ಲಚ್ಚಿ ಸೀರಿಯಲ್ ನಲ್ಲಿ ಗ್ರಾಮದ ಹುಡುಗಿಯಾಗಿ ಪಾತ್ರ ನಿರ್ವಹಿಸುತ್ತಿದ್ದಾರೆ. ಇನ್ನು ಅವರ ಪತಿ ಚಂದನ್ ಗೌಡ ಅಂತರಪಟ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ. 

77

ಈ ಹಿಂದೆ ರಾಜಾ ರಾಣಿ ಕಾರ್ಯಕ್ರಮದಲ್ಲಿ ನೇಹಾ ತಮಗೆ ಹೆಣ್ಣು ಮಗುವನ್ನು ದತ್ತು ಸ್ವೀಕಾರ ಮಾಡುವ ಆಸೆಯಿದ್ದು, ಅದಕ್ಕೆ ಚಂದನ್ ಖಂಡಿತವಾಗಿಯೂ ಒಪ್ಪಿಗೆ ಸೂಚಿಸುತ್ತಾರೆ ಎನ್ನುವ ನಂಬಿಕೆ ಇದೆ ಎಂದು ತಮ್ಮ ಮನದಾಸೆಯನ್ನು ಬಿಚ್ಚಿಟ್ಟಿದ್ದರು. 

Read more Photos on
click me!

Recommended Stories